ಚಿಂಚೋಳಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ಚಿನ್ನಮ್ಮ ಬಸಪ್ಪ ಪಾಟೀಲ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ದಲ್ಲಿ ಸ್ವಾತಂತ್ರ್ಯ ಹೋರಾಟದ ವೀರ ವನಿತೆಕಿತ್ತೂರ ರಾಣಿ ಚೆನ್ನಮ್ಮ ಅವರ 195 ನೆಯ ಜಯಂತಿ ಆಚರಿಸಲಾಯಿತು.
ಪ್ರಾಚಾರ್ಯರು ಡಾ. ಶ್ರೀಶೈಲ ನಾಗರಾಳ ಅವರು ರಾಣಿ ಚೆನ್ನಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ದೇಶ ಭಕ್ತಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಪೂರ್ತಿ ನೀಡಿದ ರಾಣಿ ಚೆನ್ನಮ್ಮ ಅವರ ಜೀವನ ಬ್ರೀಟಿಷ್ರ ಆಳ್ವಿಕೆಯ ವಿರುದ್ಧ ಹೋರಾಟ ಮಾಡಿದ ಕುರಿತು ಮಾತನಾಡಿದರು. ರಾಣಿ ಚೆನ್ನಮ್ಮನ ದೇಶಪ್ರೇಮ ಚರಿತ್ರೆ ಇಂದಿನ ವಿದ್ಯಾರ್ಥಿ ಸಮುದಾಯ ಕ್ಕೆ ಆದರ್ಶ ಆಗಬೇಕು ಎಂದು ಹೇಳಿದರು.
ಕಾಲೇಜಿನ NAAC ಕೋಆರ್ಡಿನೇಟರ್ ಗ್ರಾಮೀಣ ಅಭಿವೃದ್ಧಿ ವಿಭಾಗದ ಮುಖ್ಯಸ್ಥರು ಡಾ ಸಿ ವಿ ಕಲಬುರ್ಗಿ, IQAC ಕೋಆರ್ಡಿನೇಟರ್ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರು ಡಾ ಮಾಣಿಕಮ್ಮ ಸುಲ್ತಾನಪುರ,ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ ಶಿವರಾಜ ಮಠ, ವಿದ್ಯಾರ್ಥಿ ಸಂಘದ ಸಲಹೆಗಾರರು ಡಾ ಲಕ್ಷ್ಮಣ ರಾಠೋಡ, ಆಂತರಿಕ ಕಿರು ಪರೀಕ್ಷೆ ಸಂಯೋಜಕರು ಡಾ ಸಿದ್ದಣ್ಣ ಕೊಳ್ಳಿ ಪ್ರೊ ಸುನಿತಾ ಪ್ರೊ ಭಾಗ್ಯಶ್ರೀ ಪ್ರೊಶಬನಾಬೇಗಂ ಪ್ರೊ ದೀಪಾ ಪ್ರೊ ಗೀತಾ ಕ್ರೀಡಾ ನಿರ್ದೇಶಕರು ಶ್ರೀ ಭೀಮರೆಡ್ಡಿ ವಿದ್ಯಾರ್ಥಿಗಳು ಉಪಸ್ಥಿತರಿದರು.