ಉರ್ದು ಶಾಲೆಗೆ ಶಿಕ್ಷಕರ ನೇಮಿಸಲು ಜೆಡಿಎಸ್ ಆಗ್ರಹ

0
33

ಸುರಪುರ: ನಗರದ ಖುರೇಶಿ ಮೊಹಲ್ಲಾದಲ್ಲಿರುವ ಸರಕಾರಿ ಉರ್ದು ಪ್ರಾಥಮಿಕ ಶಾಲೆಗೆ ಶಿಕ್ಷಕರನ್ನು ನಿಯಮಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಜಾತ್ಯಾತೀತ ಜನತಾದಳದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್ ಹುಸೇನ ಸರ್ಕಾರಕ್ಕೆ ಆಗ್ರಹಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿ,ಖುರೇಶಿ ಮೊಹಲ್ಲಾದ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸುಮಾರು ಅರವತ್ತೈದಕ್ಕು ಹೆಚ್ಚು ಮಕ್ಕಳಿದ್ದು ಕೇವಲ ಒಬ್ಬರೆ ಶಿಕ್ಷಕರಿದ್ದಾರೆ.ಎಲ್ಲಾ ಸಭೆಗಳಿಗೆ,ಬಿಸಿಯೂಟದ ಜವಬ್ದಾರ,ಸರಕಾರದ ಕಾರ್ಯಕ್ರಮಗಳೆಲ್ಲವಕ್ಕೂ ಇವರೊಬ್ಬರೆ ಭಾಗವಹಿಸಬೇಕಿರೋದರಿಂದ ಮಕ್ಕಳ ಕಲಿಕೆಗೆ ತೀವ್ರ ತೊಂದರೆಯಾಗುತ್ತಿದೆ.ಮೊದಲು ಮೂರು ಜನ ಶಿಕ್ಷಕರಿದ್ದರು,ಆದರೆ ಈಗ ಇಬ್ಬರು ವರ್ಗಾವಣೆಗೊಂಡಿದ್ದರಿಂದ ಕೇವಲ ಒಬ್ಬರೆ ಎಲ್ಲಾ ವಿಷಯಗಳನ್ನು ಹೇಳುವ ಸ್ಥಿತಿ ನಿರ್ಮಾಣವಾಗಿದೆ.ಇದರಿಂದ ಮಕ್ಕಳ ಕಲಿಕೆಯ ಬಗ್ಗೆ ಪಾಲಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಆದ್ದರಿಂದ ಸರಕಾರ ಕೂಡಲೆ ಇನ್ನೂ ಹೆಚ್ಚಿನ ಶಿಕ್ಷಕರನ್ನು ನೇಮಕಗೊಳುಸಬೇಕು ಇಲ್ಲವಾದರೆ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನ ಓಲೆಕಾರವರಿಗೆ ಮನವಿ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ತಿಪ್ಪಣ್ಣ ಪಾಟೀಲ,ನಗರ ಪ್ರಧಾನ ಕಾರ್ಯದರ್ಶಿ ಶೌಕತ್ ಅಲಿ,ಮುಖಂಡರಾದ ನ್ಯಾಯವಾದಿ ಸಂಗಣ್ಣ ಬಾಕ್ಲಿ,ಅಲ್ತಾಫ್ ಸಗರಿ,ಶಾಂತು ತಳವಾರಗೇರಿ,ವಿನಾಯಕ ಬಳಿಚಕ್ರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here