ಕಲಬುರಗಿ: ಸರಕಾರಿ ಸೇವೆಯಲ್ಲಿದ್ದಾಗ ಬಡ ಜನತೆಗೆ ಮಾಡಿದ ಸೇವೆಯೇ ನೌಕರರಿಗೆ ಸಾರ್ಥಕ ಜೀವನದ ಬದುಕಿನ ದಾರಿದೀಪವಾಗಿದೆ ಎಂದು ಶ್ರೀಶೈಲಂನ ಸಾರಂಗಧರ ಮಠದ ಪೂಜ್ಯ ಜಗದ್ಗುರು ಡಾ.ಸಾರಂಗಧರ ಮಹಾಸ್ವಾಮಿಗಳು ತಮ್ಮ ಆಶಿರ್ವಚನದಲ್ಲಿ ತಿಳಿಸಿದರು.
ಇಂದು ನಗರದ ಕೋಸಗಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಚಂದ್ರಕಾಂತ್ ಅಷ್ಠಗಿ ಯವರ ಜನ್ಮ ಷಷ್ಠಬ್ದಿ ಹಾಗೂ ವಯೋನಿರ್ವತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮನುಷ್ಯ ತನ್ನ ಜೀವನದಲ್ಲಿ ಇನ್ನೊಬ್ಬರಿಗೆ ಮಾಡಿದ ಸಹಾಯ ನಮ್ಮನ್ನು ಜೀವನದುದ್ದಕ್ಕೂ ಕಾಪಾಡುತ್ತದೆ ಎಂದರು.ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಸಿದ್ದರಾಮ ಶರಣರು ಬೇಲ್ದಾಳ ರವರು ಮಾತನಾಡಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಜನರು ದೇಶದ ಸಂಪತ್ತಾಗಿದ್ದೂ ಅಂತಹವರಲ್ಲಿ ಚಂದ್ರಕಾಂತ್ ಅಷ್ಠಗಿ ಯವರು ಒಬ್ಬರು ಎಂದರು. ಅಷ್ಠಗಿ ಸಹೋದರರು ಸೇವಾ ಮನೋಭಾವನೆಯಿಂದ ತಮ್ಮನ್ನು ತಾವು ಸರಕಾರಿ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ರೀತಿ ಎಲ್ಲರಿಗೂ ಮಾದರಿಯಾಗಲಿ ಎಂದರು.
ಪೂಜ್ಯ ಸಂಘಾನಂದ ಭಂತೆ ನೇತೃತ್ವ ವಹಿಸಿದ್ದರು. ಕಾರ್ಯಕ್ರಮ ಉದ್ದೇಶಿಸಿ ಡಾ. ಡಿ.ಜಿ.ಸಾಗರ್ ಮಾತನಾಡಿದರು.ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಅಂಬಾರಾಯ ಅಷ್ಠಗಿ ಯವರು ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ತಮ್ಮ ಸಹೋದರನ ಸೇವಾವಧಿಯ ಕೊಡುಗೆಯನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರಾಜು ಲೆಂಗಟಿ,ಡಾ.ಉಮೇಶ್ ಎಸ್ ಆರ್.ಡಾ.ಶಿವಾನಂದ ಸುರಗಾಳಿ.ಡಾ.ಶಿವಕುಮಾರ ಸಿ.ಆರ್. ಡಾ.ಸುರೇಶ ಶರ್ಮಾ.ಬಿ.ಬಿ.ರಾಮಪೂರೆ.ರವಿ ಬಿರಾದಾರ್ ಸಂಗಮೇಶ ನಾಗನಳ್ಳಿ.ವೀರಭದ್ರ ಸಿಂಪಿ.ಭವಾನಿ ಸಿಂಗ್ ಠಾಕೂರ್,ಶಿವರಾಯ ದೊಡ್ಡಮನಿ, ಮದನಕರ್.ರವಿ ರಾಠೋಡ.ರಾಜೇಶ್ ವಂಟಿ.ನಾಗೇಂದ್ರ ಬುಕ್ಕನ್.ಮಹೇಂದ್ರ ಅಫಜಲಪೂರಕರ್.ಜಯಶ್ರೀ ಚಂದ್ರಕಾಂತ್ ಅಷ್ಠಗಿ,ಪರಮೇಶ್ವರ ಅಷ್ಠಗಿ. ಪೊ.ಯಶವಂತ್ ಅಷ್ಠಗಿ,ಅಮಿತ್ ಕುಂದನ್.ಶಿವಾ ಅಷ್ಠಗಿ. ಅವಿನಾಶ್ ಅಷ್ಠಗಿ ಸೇರಿದಂತೆ ಚಂದ್ರಕಾಂತ್ ಅಷ್ಠಗಿ ಯವರ ಅಭಿಮಾನಿ ಬಳಗ, ಹಿತೈಷಿಗ7ಳು ಮತ್ತು ಗಣ್ಯರು ಇದ್ದರು.