ಭ್ರಷ್ಟಚಾರದ ವಿರುದ್ಧ ಯುವಜನತೆ ಧ್ವನಿ ಎತ್ತಬೇಕು:ಡಾ.ನಿರಂಜನ ನಿಷ್ಠಿ

0
70

ಕಲಬುರಗಿ: ಭಾರತದಲ್ಲಿ ಸುಪರ್ ಶಕ್ತಿ ಆರ್ಥಿಕ ವ್ಯವಸ್ಥೆಯ ಗುರಿ ಸಾಧಿಸಬೇಕಾದರೆ ಜೀವನದ ಎಲ್ಲಾ ಹಂತದಲ್ಲಿ ನಡೆಯುವ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವುದು ವಿದ್ಯಾರ್ಥಿಗಳ ಜವಾಬ್ದಾರಿಯಾಗಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ ನಿಷ್ಟಿ ಹೇಳಿದರು.

ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪಅಪ್ಪ ಸಭಾ ಮಂಟಪದಲ್ಲಿ ಕೇಂದ್ರ ವಿಜಿಲೆನ್ಸ್ ಆಯೋಗ(ಸಿವಿಸಿ) ಸಮಗ್ರತೆ, ಪ್ರಾಮಾಣಿಕತೆ ಜೀವನದ ಶೈಲಿ ವಿಧಾನ ಕುರಿತು ಹಮ್ಮಿಕೊಂಡ ವಿಚಾರ ಸಂಕಿರಣದಲ್ಲಿ ಅಧ್ಯಕ್ಷತೆ ಭಾಷಣ ಮಾಡಿದ ಅವರು ದೇಶದಲ್ಲಿ ಆರ್ಥಿಕ ಸಮೃದ್ಧಿ ಸಾಧಿಸಲು ಭ್ರಷ್ಟಾಚಾರದ ಪಿಡುಗು ಮಾರಕವಾಗಿದೆ. ಮತ್ತು ಮನುಷ್ಯನ ಮಿದುಳನ್ನು ಬರಿದಾಗುಸುತ್ತಿದೆ. ಇದರಿಂದ ಅರ್ಹತೆ ಇಲ್ಲದವರು ಕೂಡಾ ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಉನ್ನತ ಸ್ಥಾನ ಪಡೆಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

Contact Your\'s Advertisement; 9902492681

ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಸಂಸ್ಥೆ ಭ್ರಷ್ಟಾಚಾರದ ಕುರಿತು ಇತ್ತೀಚಿಗೆ ಬಿಡುಗಡೆ ಮಾಡಿದ ಅಂಕಿಅಂಶಗಳ ಪಟ್ಟಿಯ ಪ್ರಕಾರ ೨೦೧೮ರಲ್ಲಿ ಭ್ರಷ್ಟಾಚಾರದ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು ೭೮ರಷ್ಟು ಇದ್ದು, ೨೦೧೭ರ ಸೂಚ್ಯಂಕಕ್ಕೆ ಹೋಲಿಸಿದರೆ ಒಂದು ಅಂಕದ ಪ್ರಮಾಣ ಸ್ವಲ್ಪ ಸುಧಾರಣೆಯಾಗಿದೆ. ಇದು ಭಾರತ ಕುಗ್ಗುವಿಕೆಯ ಉತ್ತಮ ಸಂಕೇತವಾಗಿದೆ. ಭ್ರಷ್ಟ ದೇಶದ ಟ್ಯಾಗ್‌ನಿಂದ ಹೊರಗುಳಿದು ಮುಂದಿನ ವರ್ಷಗಳಲ್ಲಿ ಭ್ರಷ್ಟಾಚಾರ ಮುಕ್ತ ದೇಶವಾಗಲು ಮುನ್ನುಡಿ ಬರೆಯುತ್ತಿದೆ ಎಂದು ತಿಳಿಸಿದರು.

ಯುವಜನತೆ ತಮ್ಮ ಎಲ್ಲಾ ವಿಧಾನಗಳಲ್ಲಿ ಪ್ರಾಮಾಣಿಕವಾಗಿರಬೇಕು. ಮತ್ತು ವೃತ್ತಿಜೀವನದಲ್ಲಿ ಉತ್ತಮ ಸಾಧನೆ ಮಾಡಲು ಪ್ರಾಮಾಣಿಕ ಕೆಲಸ ಮಾಡಬೇಕು. ವಿಶೇಷವಾಗಿ ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ಪ್ರಾಮಾಣಿಕತೆ, ಸಮಗ್ರತೆ ಮತ್ತು ನೈತಿಕತೆ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ವಿವಿಯ ಕುಲಸಚಿವ ಡಾ.ಅನೀಲಕುಮಾರ ಬಿಡವೆ ಮಾತನಾಡಿ, ಕೇಂದ್ರ ಸರಕಾರ ಭ್ರಷ್ಟಾಚಾರದ ವಿರುದ್ಧ ಕಾರ್ಯತಂತ್ರ ರೂಪಿಸಿ ಸಮರ ಸಾರಿದೆ. ಯುವಜನತೆ ಮಧ್ಯೆ ಸಮಗ್ರತೆ, ಪ್ರಾಮಾಣಿಕತೆ ಗುಣಗಳನ್ನು ಅಳವಡಿಸಿಕೊಳ್ಳಲು ಸಾಮಾಹಿಕ ಜಾಗೃತಿ ಅಭಿಯಾನ ಕೈಗೊಂಡಿದೆ. ಇಂತಹ ಪ್ರಯತ್ನದಿಂದ ಯುವಕರಲ್ಲಿ ಸಮಗ್ರತೆ, ಪ್ರಾಮಾಣಿಕತೆ ಅರಿವು ಮೂಡುತ್ತಿದೆ. ಪರಿಣಾಮ ಭಾರತದಲ್ಲಿ ಭ್ರಷ್ಟಾಚಾರ ಮುಕ್ತಭಾರತ ಮಾಡಬಹುದಾಗಿದೆ. ಪಾರದರ್ಶಕ ಜೀವನ ನಡೆಸುವುದು ಪ್ರಾಮಾಣಿಕತೆ ಮತ್ತು ಕಳಂಕವಿಲ್ಲದ ವೃತ್ತಿಜೀವನಕ್ಕೆ ಕಾರಣವಾಗಲಿದೆ. ಎಂದು ಹೇಳಿದರು.

ವಿದ್ಯಾರ್ಥಿಗಳ ಪ್ರವೇಶ, ಶಿಕ್ಷಕರ ನೇಮಕ ಮತ್ತು ಎಲ್ಲಾ ಸಮಯದಲ್ಲೂ ತನ್ನ ಎಲ್ಲಾ ಚಟುವಟಿಕೆಗಳಲ್ಲಿ ಪಾರದರ್ಶಕ ನೀತಿಯನ್ನು ಅನುಸರಿಸಲು ಶರಣಬಸವ ವಿಶ್ವವಿದ್ಯಾಲಯವು ಒಂದು ನಿದರ್ಶನ ಉದಾಹರಣೆಯಾಗಿದೆ. ಎಲ್ಲಾ ಖರೀದಿಗಳು, ಅಕ್ರಮಮಗಳು ಅಥವಾ ಭ್ರಷ್ಟಾಚಾರದ ಯಾವುದೇ ದೂರುಗಳನ್ನು ತಳ್ಳಿಹಾಕಿ, ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳ ಚಟುವಟಿಕೆಗಳಿಂದ ಒಂದು ಪುಟವನ್ನು ತೆಗೆದುಕೊಂಡು ಪ್ರಾಮಾಣಿಕವಾಗಿ ಉಳಿಯಲು ಅವರ ಎಲ್ಲಾ ಚಟುವಟಿಕೆಗಳಲ್ಲಿ ಪಾರದರ್ಶಕತೆಯನ್ನು ಅನುಸರಿಬೇಕು ಎಂದು ತಿಳಿಸಿದರು.

ಹಿಂದಿನ ಕೇಂದ್ರ ಸರಕಾರದ ವಿವಿಧ ಇಲಾಖೆಯಲ್ಲಿ ನಡೆದ ಹಗರಣ, ಭ್ರಷ್ಟಾಚಾರದಲ್ಲಿ ಭಾಗಿಯಾದ ಪ್ರಮುಖ ವ್ಯಕ್ತಿಗಳ ವಿರುದ್ಧ ಈಗಾಗಲೇ ಪ್ರಸ್ತುತ ಕೇಂದ್ರ ಸರಕಾರ ಕಠಿಣ ಕ್ರಮಕೈಗೊಳ್ಳುತ್ತಿದೆ. ಇದು ಭ್ರಷ್ಟರಿಗೆ ಮಟ್ಟ ಹಾಕಲು ಉತ್ತಮ ಕಾರ್ಯತಂತ್ರವಾಗಿದೆ ಎಂದು ಬಿಡವೆ ಹೇಳಿದರು. ವಿವಿಯ ಮೌಲ್ಯಮಾಪನಸಚಿವ ಡಾ.ಲಿಂಗರಾಜ ಶಾಸ್ತ್ರಿ ಅವರು ಮಾತನಾಡಿ, ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ನಡೆಯುವ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಟಿ.ವಿ ಶಿವನಂದನ್ ಭ್ರಷ್ಟಾಚಾರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಮೌಲ್ಯಮಾಪನ ಸಚಿವ ಲಿಂಗರಾಜ ಶಾಸ್ತ್ರೀ, ಡೀನ್ ಬಸವರಾಜ ಮಠಪತಿ, ಪ್ರೊ.ಶಿವುಗಂಗಾ ಪಾಟೀಲ, ಡಾ.ಶಿವುಕುಮಾರ ಜಿವುಣಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here