ಕಲಬುರಗಿ ನಗರದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

0
134

ಕಲಬುರಗಿ: ನಗರದ ಹೊರವಲಯ ಬೋಸಗಾ ಕ್ರಾಸ್ ಬಳಿ ಯುವಕನ ಶವ ಪತ್ತೆಯಾಗಿದೆ. ಮೃತನನ್ನು ಕಲಬುರಗಿಯ ಫಿಲ್ಟರ್ ಬೆಡ್ ನಿವಾಸಿ ಗೋಪಾಲ್ (22) ಎಂದು ಗುರುತಿಸಲಾಗಿದೆ. ಕೊಲೆ ಅಥವಾ ಅಪಘಾತ ಆಗಿರುವ ಶಂಕೆ ವ್ಯಕ್ತವಾಗಿದೆ.

ಮೈಮೇಲೆ ಯಾವುದೇ ಗಂಭೀರ ಗಾಯಗಳು ಕೂಡ ಕಂಡುಬಂದಿಲ್ಲ. ನಿನ್ನೆ ಪಟ್ಟಣ ಎಂಬ ಗ್ರಾಮಕ್ಕೆ ಹೋಗಿದ್ದನಂತೆ. ಮರಳುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿರಬಹುದು ಎಂಬ ಶಂಕೆ ಕೂಡಾ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Contact Your\'s Advertisement; 9902492681

ಇನ್ನು ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತನ ಸಂಬಂಧಿಕರು ಬಂದ ನಂತರ ಕೊಲೆ ಅಥವಾ ರಸ್ತೆ ಅಪಘಾತ ಪ್ರಕರಣ ದಾಖಲಾಗಲಿದೆ. ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here