ಕಲಬುರಗಿ: ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ಕಲಬುರಗಿ ಹೊರವಲಯದ ಮಹಾದೇವಿ ತಾಯಿ ವೃದ್ಧಾಶ್ರಮದಲ್ಲಿಂದು ಸಂಗೀತ, ಹಾಸ್ಯ, ಭರವಸೆಯ ಬೆಳಕು ಮೂಡಿಸುವ ಭಾಷಣದ ವಿಶೇಷ ಕಾರ್ಯಕ್ರಮವೊಂದು ಜರುಗಿತು.
ಕಾರಣಾಂತರಗಳಿಂದ ಮನೆ ಮತ್ತು ಮಕ್ಕಳಿಂದ ದೂರಾದ ವೃದ್ಧರ ಬದುಕಿನಲ್ಲಿ ಬೆಳಕು ಆರದಿರಲಿ ಎಂಬ ಆಶಾಭಾವನೆಯೊಂದಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳ ಪ್ರಮುಖರು ಈ ಭಾವನಾತ್ಮಕ ಸಮಾರಂಭಕ್ಕೆ ಸಾಕ್ಷಿಯಾದರು.
ಸಮಾಜದ ನೋವಿಗೆ ಸ್ಪಂದಿಸುವುದೇ ನಿಜವಾದ ಸಮಾಜಸೇವೆ. ಹಾಗಾಗಿ, ಈ ಸಮಾಜದ ಋಣ ತೀರಿಸಲು ಪ್ರಯತ್ನಿಸಬೇಕು ಎಂದು ಪ್ರತಿಷ್ಠಾನದ ಸಂಸ್ಥಾಪಕರೂ ಆದ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.
ಖ್ಯಾತ ಉದ್ಯಮಿ ಸುದರ್ಶನ್ ಮಾತನಾಡಿ, ನಿರ್ಗತಿಕರ ಸೇವೆಯಲ್ಲಿ ನಮ್ಮ ಬದುಕು ಸಾರ್ಥಕಪಡಿಸಿಕೊಳ್ಳಬೇಕೆಂದರು. ಜಿಪಂ ಸದಸ್ಯ ಸಂತೋಷ ಪಾಟೀಲ ದಣ್ಣೂರ, ಪ್ರಮುಖರಾದ ಕಲ್ಯಾಣಪ್ಪ ಪಾಟೀಲ ಮಳಖೇಡ, ರಾಜಶ್ರೀ ಸಿಮೆಂಟ್ ಫ್ಯಾಕ್ಟರಿ ಸಾಂಸ್ಕೃತಿಕ ವಲಯದ ಸಂಯೋಜಕಿ-ಅಧಿಕಾರಿ ಚಂದಮ್ಮ ಅಂಬಲಗಾ, ರಮಾ ಧರ್ಗಿ, ಜಾವಿದ್ ಅಹ್ಮದ್, ಮುಡುಬಿ ಗುಂಡೇರಾವ, ಭವಾನಿಸಿಂಗ್ ಠಾಕೂರ್, ಜಗದೇವಿ ಚೆಟ್ಟಿ, ಜಲಜಾಕ್ಷಿ, ವಿದ್ಯಾಸಾಗರ ದೇಶಮುಖ, ಪರಮೇಶ್ವರ ಶಟಕಾರ, ಡಾ.ಬಾಬುರಾವ ಶೇರಿಕಾರ, ಹಣಮಂತರಾಯ ಅಟ್ಟೂರ, ಗುಂಡಣ್ಣಾ ಡಿಗ್ಗಿ, ವಿಜಯಲಕ್ಷ್ಮೀ ಕೆಂಗನಾಳ, ಶಿವಲಿಂಗಪ್ಪ ಕೆಂಗನಾಳ, ಪ್ರಭುಲಿಂಗ ಮೂಲಗೆ, ಶ್ರೀಕಾಂತ ಪಾಟೀಲ ತಿಳಗೂಳ, ಶಿವಾನಂದ ಮಠಪತಿ, ಮೀನಾಕ್ಷಿ ಕುಂಬಾರ, ಸವಿತಾ ಜಾಧವ, ಲಕ್ಷ್ಮಿ ಕುಂಬಾರ, ನೀಲಾಂಬಿಕಾ ಚೌಕಿಮಠ, ಶರಣರಾಜ್ ಛಪ್ಪರಬಂದಿ, ಲಗುಮಣ್ಣಾ ಕರಗುಪ್ಪಿ, ಹೆಚ್.ಎಸ್.ಬರಗಾಲಿ, ಬಾಬುರಾವ ಪಾಟೀಲ ಸೇರಿ ಅನೇಕ ಜನರು ಉಪಸ್ಥಿತರಿದ್ದರು.