ಕಲಬುರಗಿ: ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಕಲಬುರಗಿ ನಗರದ ಹೊರವಲಯದಲ್ಲಿರುವ ಬಬಲಾದ ಗ್ರಾಮದಲ್ಲಿ ನಡೆದಿದೆ.
ಆನಂದ ರಾಂಪುರೆ (30) ಕೊಲೆ ದುರ್ದೈವಿ, ಕಾಂತಾ ಕಾಲೋನಿಯ ನಿವಾಸಿಯಾಗಿರುವ ಆನಂದ ಸಹ ರೌಡಿ ಶೀಟರ್ ಆಗಿದ್ದ ಎನ್ನಲಾಗುತ್ತಿದ್ದು, ಹಳೆ ವೈಷಮ್ಯದ ಹಿನ್ನೆಲಯಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಕೊಲೆ ಗೈದ ದುಷ್ಕರ್ಮಿಗಳು ಯಾರು ಎಂಬುದರ ಹಿಂದೆ ಬೆನ್ನು ಹತ್ತಿರುವ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡಸುತ್ತಿದ್ದಾರೆ.
ಇತ್ತೀಚಿಗಷ್ಟೆ ಲೋಕಸಭೆ ಚುನಾವಣೆ ಮುಗದಿದ್ದು, ದಿನೆ ದಿನೆ ಕೊಲೆಗಳ ಸಂಖ್ಯೆ ಎರುತ್ತಿದೆ.