ಚಿಂಚೋಳಿ ಉಪಚುನಾವಣೆ: ಬಿಜೆಪಿ ಟಿಕೆಟ್ ಜಾಧವ ಕುಟುಂಬಕ್ಕಾದರೆ ಸುನಿಲ್ ವಲ್ಯಾಪೂರೆ ನಡೆ ಯಾವಕಡೆ?

0
328

ಕಲಬುರಗಿ: ಲೋಕಸಭಾ ಚುನಾವಣೆಗೆ ಮತದಾನ ಮುಗಿದು ಇನ್ನೇನು ನಿರಾಳರಾಗಿದ್ದಾರೆ ಎನ್ನುವಷ್ಟರಲ್ಲಿ ಇದೀಗ ಎಲ್ಲ ರಾಜಕೀಯ ನಾಯಕರ ಚಿತ್ತ ಚಿಂಚೋಳಿ ಉಪಚುನಾವಣೆಯತ್ತ ಎನ್ನುವಂತಾಗಿದೆ.

ಯಾವ್ಯಾವ ಪಕ್ಷಗಳಿಂದ ಯಾರ್ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.

Contact Your\'s Advertisement; 9902492681

ಬಂಜಾರಾ ಸಮುದಾಯದ ಮತಗಳೇ ಹೆಚ್ಚಾಗಿರುವುದರಿಂದ ಕೈ- ಕಮಲ ಪಾಳೇಯದಲ್ಲಿ ಆ ಜಾತಿಯ ಉತ್ತಮ ನಾಯಕನನ್ನು ಕಣಕ್ಕಿಳಿಸಲು ಯೋಚಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬಿಜೆಪಿಯವರು ಈಗಾಗಲೇ ಡಾ. ಉಮೇಶ ಜಾಧವ ಸಹೋದರ ರಾಮಚಂದ್ರ ಜಾಧವ ಅವರ ಹೆಸರನ್ನು ಪಕ್ಷದ ದೆಹಲಿ ಮುಖಂಡರಿಗೆ ರವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಜಾಧವ ಪುತ್ರನಿಗೂ ಟಿಕೆಟ್ ನೀಡಬೇಕು ಎಂಬ ಕೂಗೂ ಕೇಳಿ ಬಂದಿತ್ತು. ಈ ಮಧ್ಯೆ ಜಿಪಂ ಸದಸ್ಯ ಸಂಜೀವನ್ ಯಾಕಾಪುರ ಸಹ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದ್ದು, ಬಿಜೆಪಿ ರಾಜ್ಯಧ್ಯಕ್ಷ ಯಡಿಯೂರಪ್ಪಗೆ ಅಪ್ತರಾಗಿರುವ ಸುನಿಲ್ ವಲ್ಯಾಪೂರ ಕುಡ ರೇಸಿನಲ್ಲಿ ಇದ್ದಾರೆಂದು ಮಾಹಿದೆ ಇದೆ. ಒಂದುವೇಳೆ ಜಾಧವ್ ಕುಟುಂಬಕ್ಕೆ ಬಿಜೆಪಿ ಟಿಕೆಟ್ ದೊರೆತರೆ ವಲ್ಯಾಪೂರೆ ಅವರ ನಡೆ ಯಾವ ಕಡೆ ಎನ್ನುವುದು ನಿಗೂಡವಾಗಿದೆ.

ಅವರು ನಾಳೆ ತಮ್ಮ ಬೆಂಗಲಗರ ಸಭೆ ಕರೆದು ಸಭೆಯಲ್ಲಿ ಚರ್ಚೆಸಿ ಮುಂದಿನ ತಮ್ಮ ತೀರ್ಮಾನವನ್ನು ತಿಳಿಸಲಿದ್ದಾರೆಂದು ತಿಳಿದು ಬಂದಿದೆ.

ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಸಚಿವ ಬಾಬುರಾವ ಚವ್ಹಾಣ್, ಸುಭಾಷ ರಾಠೋಡ ಅವರ ಹೆಸರು ಕೇಳಿ ಬರುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಹಲವರು ಆಕಾಂಕ್ಷಿಗಳಿದ್ದರೂ ಅರ್ಹ ಬಂಜಾರ ಸಮುದಾಯದ ನಾಯಕರ ಹೆಸರನ್ನು ಹೈಕಮಾಂಡ್ ಗೆ ಕಳಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಮಧ್ಯೆ ಜೆಡಿಎಸ್ ನಲ್ಲಿರುವ ರೇವುನಾಯಕ ಬೆಳಮಗಿ ಅವರೂ ಸಹ ಟಿಕೆಟ್ ನೀಡುವಂತೆ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಲೋಕಸಭೆಯ ಫಲಿತಾಂಶ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದರೂ ಚಿಂಚೋಳಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೈ- ಕಮಲ ಪಕ್ಷದವರು ಶತಾಯ ಗತಾಯ ಗೆಲ್ಲಬೇಕೆಂದು ಗೆಲ್ಲುವ ಕುದುರೆಗೆ ಟಿಕೆಟ್ ಫೈನಲ್ ಮಾಡುತ್ತಾರೆ ಎಂದು ಕೇಳಿಬರುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here