ಖಾಸಗಿ ಶಾಲೆಗಳಿಗೆ ಅನುದಾನ ನೀಡುವಂತೆ ಆಡಳಿತ ಮಂಡಳಿ ಒತ್ತಾಯ

0
47

ಸುರಪುರ: ಹಿಂದುಳಿದ ಪ್ರದೇಶವೆಂದು ಹಣೆ ಪಟ್ಟಿ ಹೊತ್ತಿರುವ ನಮ್ಮ ಭಾಗಕ್ಕೆ ಶೈಕ್ಷಣಿಕ ಕ್ಷೇತ್ರದಲ್ಲಿ ಮೊದಲಿನಿಂದಲು ಅನ್ಯಾಯ ವಾಗುತ್ತಾ ಬಂದಿದೆ ಈಗಲಾದರು ೩೭೧ ಜೆ ಅಡಿಯಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಮಾನ್ಯತೆ ನಿಡಿದರೆ ನಮ್ಮ ಭಾಗವು ಶೈಕ್ಷಣಿಕವಾಗಿ ಮುಂದುವರೆಯಲು ಅನೂಕೂಲವಾಗುತ್ತದೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಮುಖಂಡ ಗಂಗಾಧರ ಧೇಶಮುಖ ಹೇಳಿದರು.

ನಗರದ ಗಾಂಧಿ ವೃತ್ತದಲ್ಲಿ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮತ್ತು ನೌಕರರ ಹೊರಾಟ ಸಮನ್ವ ಸಮಿತಿ ತಾಲೂಕು ಘಟಕ ವತಿಯಿಂದ ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ೧೯೯೫ ರ ನಂತರ ಪ್ರಾರಂಭವಾದ ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಓಳಪಡಿಸಬೇಕು ಮತ್ತು ಕಲ್ಯಾಣ ಕನಾಟಕದಲ್ಲಿರುವ ಖಾಸಗಿ ಶಾಲೆಗಳಿ ವಿಶೇಷ ಮಾನ್ಯತೆ ನೀಡಿ ಅನುದಾನ ನೀಡಿ ಹಿಂದುಳಿದ ಜಿಲ್ಲೆಗಳಲ್ಲಿ ಶೈಕ್ಷಣಿಕ ಪ್ರಗತಿಗೆ ಕೈಜೋಡಿಸಬೇಕು ಎಂದು ಹೇಳಿದರು.

Contact Your\'s Advertisement; 9902492681

ಈಗಾಗಲೆ ಅನುದಾನಕ್ಕೆ ಒಳಪಟ್ಟಿರುವ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಪಿಂಚಣಿ ಸೌಲಭ್ಯವನ್ನು ನೀಡುತ್ತಿಲ್ಲಾ ಹಾಗೂ ಎನ್.ಪಿ.ಎಸ್ ಕಾಯ್ದೆಯನ್ನು ಸರ್ಕಾರ ಹಿಂತೆಗೆದುಕೊಳ್ಳ ಬೇಕೆಂದು ಬಹಳ ದಿನಗಳಿಂದ ಹೋರಾಟ ನಡೆಸುತ್ತಿದ್ದರು ಯಾರು ಇತ್ತ ತಲೆಕೆಡಿಸಿಕೊಳ್ಳುತ್ತಿಲ್ಲ ಮಗುವನ್ನು ಒಳ್ಳೆ ಪ್ರಜೆಯಾಗಿ ರೋಪಿಸುವಲ್ಲಿ ಶಿಕ್ಷಕ ತನ್ನ ಶ್ರಮವಹಿಸಿ ಕೆಲಸ ನಿರ್ವಹಿಸುತ್ತಾರೆ ಅಂತಹ ಶಿಕ್ಷಕರಿಗೆ ಸರ್ಕಾರಗಳು ಅನ್ಯಾ ಮಾಡುತ್ತಿವೆ ಅದು ನಿಲ್ಲಬೇಕು ಹಾಗೂ ಅನುದಾನಿತ ಶಿಕ್ಷಣ ಸಂಸ್ಥಗಳ ಶಿಕ್ಷಕರ ಬಹುದಿನಗಳ ಬೇಡಿಕೆಯಾದ ಕಾಲ್ಪಿನಿಕ ವೇತನವನ್ನು ಜಾರಿಗೋಳಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯು ಉಗ್ರ ಸ್ವರೋಪ ಪಡೆಯಲಿದೆ ಎಂದರು.

ನಂತರ ಮುಖ್ಯಮಂತ್ರಿಗಳಿಗೆ ಬರೆದ ವಿವಿಧ ಬೇಡಿಕೆಗಳುಳ್ಳ ಮನವಿ ಪತ್ರವನ್ನು ತಹಶಿಲ್ದಾರ ನಿಂಗಣ್ಣ ಬಿರೆದಾರ ಅವರಿಗೆ ಸಲ್ಲಿಸಲಾಯಿತು.

ಅಪ್ಪಣ್ಣ ಕುಲ್ಕರ್ಣಿ, ನಿಂಗಪ್ಪ ಬುಡ್ಡ, ಕೃಷ್ಣ ದರಬಾರಿ, ಸೋಮಶೇಖರ ಶಾಬಾದಿ, ಮಹ್ಮದ ಸೋಫಿಯಾ, ಲಂಕೆಪ್ಪ ಕವಲಿ, ನಾಗರಾಜ ದೇವತ್ಕಲ್, ಪ್ರಕಾಶ, ಬಸವರಾಜ, ನೀಲಕಠ ಪಾಟೀಲ,ಶ್ರೀನಿವಾಸ ಕುಲ್ಕರ್ಣಿ, ರಮೇಶ, ಹಣಮಂತ್ರಾಯ ದೊರೆ, ಬಾಬು, ರವಿ ಕುಲ್ಕರ್ಣಿ, ಮಲ್ಲಿಕಾರ್ಜುನ, ಸಂತೋಷ ಕುಲ್ಕರ್ಣಿ ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here