ಸುರಪುರ: ಟಿಪ್ಪು ಸುಲ್ತಾನ್ ಅಧ್ಯಾಯವನ್ನು ಪಠ್ಯ ಪುಸ್ತಕ ದಿಂದ ತೆಗೆಯಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಟಿಪ್ಪುಸುಲ್ತಾನ್ ಸಂಯುಕ್ತ ರಂಗ ಹಾಗು ಹಜರತ್ ಟಿಪ್ಪು ಸುಲ್ತಾನ ಸೇವಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಪೊಲೀಸ್ ಠಾಣೆ ಬಳಿಯಿರುವ ಟಿಪ್ಪು ಸುಲ್ತಾನ ವೃತ್ತದಿಂದ ತಹಸೀಲ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.ನಂತರ ಅನೇಕ ಮುಖಂಡರು ಮಾತನಾಡಿ,ಟಿಪ್ಪು ಸುಲ್ತಾನ ಒಬ್ಬ ಶೂರ ರಾಜನಾಗಿದ್ದ.ಆತನು ಬ್ರಿಟಿಷರೊಂದಿಗೆ ಮೂರು ಬಾರಿ ಯುದ್ಧ ಮಾಡಿದ ದೇಶಪ್ರೇಮಿ.
ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರಲ್ಲಿ ತನ್ನ ಮೂವರು ಮಕ್ಕಳನ್ನು ಒತ್ತೆ ಇಟ್ಟಂತ ಟಿಪ್ಪುವಿನ ಇತಿಹಾಸ ಮತ್ತು ಆತನ ಯಶೋಗಾಥೆ ಮುಂದಿನ ಪೀಳಿಗೆಗೆ ತಿಳಿಯಬೇಕಾದುದು ಅವಶ್ಯವಾಗಿದೆ.ಆದ್ದರಿಂದ ಸರ್ಕಾರ ಟಿಪ್ಪುವಿನ ಅಧ್ಯಾಯವನ್ನು ಪಠ್ಯದಿಂದ ತೆಗೆಯುವ ನಿರ್ಧಾರವನ್ನು ಕೈ ಬಿಡುವಂತೆ ಒತ್ತಾಯಿಸಿದರು. ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ ಸೊಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಟಿಪ್ಪು ಸುಲ್ತಾನ ಸಂಯುಕ್ತ ರಂಗದ ಜಿಲ್ಲಾಧ್ಯಕ್ಷ ಮಹ್ಮದ್ ಮೌಲಾ ಸೌದಾಗರ್, ಟಿಪ್ಪು ಸುಲ್ತಾನ ಸಂಘದ ಅಧ್ಯಕ್ಷ ಖಾಜಾ ಖಲೀಲ್ ಅಹ್ಮದ್ ಅರಕೇರಿ ಮುಖಂಡರಾದ ಅಬ್ದುಲ್ ಗಫೂರ್ ನಗನೂರಿ, ಅಬೀದ್ ಹುಸೇನ್ ಪಗಡಿ, ಮುಸ್ತಫಾ ಅಲಿ, ಮಹಿಬೂಬ್ ಪಟೇಲ್, ಅಮ್ಜಾದ್ ಹುಸೇನ್, ಅಜ್ಮೀರ್, ಮಹ್ಮದ್ ಶರೀಫ್, ಶರೀಫ್ ಅಹ್ಮದ್, ಸಯ್ಯದ್ ಭಕ್ತಿಯಾರ್, ಶೇಖ್ ಇಮಾಮ್, ಹುಸೇನಿ ಜೀವಣಗಿ, ಎಕ್ಬಾಲ್ ಮೇಸ್ತ್ರಿ, ಜಿಲಾನಿ ಸಾಬ್ ಸೇರಿದಂತೆ ಅನೇಕರಿದ್ದರು.