ಜಿಂಕೆ ಭೇಟೆ: ನಾಲ್ವರು ಆರೋಪಿಗಳ ಬಂಧನ, ಸ್ಕಾರ್ಫಿಯೋ ವಾಹನ ಸೇರಿ ಏರಗನ್ ಜಪ್ತಿ

0
266

ಕಲಬುರಗಿ: ಇಲ್ಲಿನ ಅಷ್ಟಗಿ ಗ್ರಾಮದಲ್ಲಿ ಜಿಂಕೆಯನ್ನು ಭೇಟೆಯಾಡಿ ಕೊಲೆ ಮಾಡಿರುವ ನಾಲ್ವರು ಆರೋಪಿಗಳನ್ನು ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿ ಸ್ಕಾರ್ಫಿಯೋ ವಾಹನ, ಒಂದು ಚಾಕು, ಒಂದು ಏರಗನ್, ಹಾಗೂ ಎರಡು ಬ್ಯಾಟರಿಗಳು ಜಪ್ತಿ ಮಾಡಿಕೊಂಡಿದ್ದಾರೆ.

Contact Your\'s Advertisement; 9902492681

ಕಲಬುರಗಿ ಪಟ್ಟಣದ ನಿವಾಸಿಗಳಾದ ಸೈಯದ್ ಉವರ ಸೈಯದ್ ಅಬ್ದುಲ, ಮಹ್ಮದ್ ಸಾಜೀದ ಮಹ್ಮದ್ ಯುನುಸ್, ಮಹ್ಮದ ರಾಹಿಲ ಅಬ್ದುಲ ಸಲಾಮ್ ಹಾಗೂ  ಮಹ್ಮದ್ ಶಾಕೀರ ಮಹ್ಮದ್ ಯುನುಸ್ ಬಂಧಿತ ಆರೋಪಿಗಳು.

ನಿನ್ನೆ ಬೆಳಿಗ್ಗೆ 6 ಗಂಟೆ ಸುಮಾರಿಗೆ ಅಷ್ಟಗಿ ಗ್ರಾಮದ ತಿಪ್ಪಣ್ಣ ಅಂಬಾಡಿ ಅಷ್ಟಗಿ ಸಿಮಾಂತರದ ಹೊಲದಲ್ಲಿ ಈ ಬಂಧಿತ ನಾಲ್ವರು ಆರೋಪಿಗಳು ಒಂದು ಜೀವಂತ ಜಿಂಕೆಯನ್ನು ಭೇಟೆಯಾಡುತ್ತಿದ್ದ ಖಚಿತ ಮಾಹಿತಿ ಪಡೆದ ಗ್ರಾಮೀಣ ಪೊಲೀಸ್ ಠಾಣೆಯ ಪಿ. ಎಸ್.ಐ, ಎಸ್.ಎಸ್ ದೊಡ್ಡಮನಿ, ಪಿಐ ಮಾರ್ಗದರ್ಶನದ ಹುಸೇನಬಾಷಾ ಹಾಗೂ ಸಿಬ್ಬಂದಿ ಕೇಶವ, ಶರಣಗೌಡ, ಅಂಬಾಜಿ ಅವರು ಸ್ಥಳಕ್ಕೆ ಧಾವಿಸಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here