ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗ: ವಿಜಯಕುಮಾರ ಪಾಟೀಲ ತೇಗಲತಿಪ್ಪಿ

0
65

ಕಲಬುರಗಿ: ಇಂದಿನ ಯುವಕರು ನಾನಾ ರೀತಿಯ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯವಾದ ಬದುಕನ್ನು ನಾಶಪಡಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, ಅಂಥ ಯುವಕರಿಗೆ ದುಶ್ಚಟಗಳ ದುಷ್ಪರಿಣಾಮದ ಬಗ್ಗೆ ತಿಳವಳಿಕೆ ನೀಡಿ, ವ್ಯಸನಮುಕ್ತ ಸಮಾಜಕ್ಕೆ ಮುಂದಾಗಲು ತಯ್ಯಾರು ಮಾಡಬೇಕು ಎಂದು ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.

ನಗರದ ಸಂಜಯ ಗಾಂಧಿ ಕಾಲೋನಿ (ದುಬೈ) ಯ ಹನುಮಾನ ದೇವಸ್ಥಾನದ ಪ್ರಾಂಗಣದಲ್ಲಿ ಗುರುವಾರ ನಡೆದ ‘ನಶೆ ಮುಕ್ತ ನಾಡು ನಿರ್ಮಾಣ’ ಎಂಬ ಚಳವಳಿ ರೂಪದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವ್ಯಸನಮುಕ್ತ ಸಮಾಜವನ್ನು ನಿರ್ಮಾಣ ಮಾಡಬೇಕೆಂದು ಪಣ ತೊಟ್ಟು, ಅದಕ್ಕಾಗಿ ಶ್ರಮಿಸುತ್ತಿರುವ ಶ್ರೀನಿವಾಸ ಸರಡಗಿಯ ಪೂಜ್ಯ ಡಾ.ರೇವಣಸಿದ್ಧ ಶಿವಾಚಾರ್ಯರು ಅವರ ಕಾರ್ಯ ಇಂದಿನ ಸಮಾಜಕ್ಕೆ ಮಾದರಿಯಾಗಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪೂಜ್ಯ ಡಾ.ರೇವಣಸಿದ್ಧ ಶಿವಾಚಾರ್ಯರು, ನಮ್ಮ ಬದುಕು ಸುಂದರವಾಗಿ ಕಟ್ಟಿಕೊಳ್ಳಬೇಕಾದರೆ ವ್ಯಸನಗಳಿಂದ ದೂರಿರಬೇಕು. ಅಂದಾಗ ಮಾತ್ರ ವ್ಯಸನಮುಕ್ತ ಸಮಾಜ ಕಟ್ಟಲು ಸಾಧ್ಯ ಎಂದು ನುಡಿದರು.

ಸಾಹಿತಿ ಸೇಡಂನ ಜಗನ್ನಾಥ ಎಲ್.ತರನಳ್ಳಿ, ಸಂಘಟಕರಾದ ನಾಗಲಿಂಗಯ್ಯ ಮಠಪತಿ, ಹಣಮಂತರಾಯ ಅಟ್ಟೂರ, ರವಿಕುಮಾರ ಶಹಾಪುರಕರ್, ಸಂಗಮೇಶ ಶಾಸ್ತ್ರಿ ಮಾಶಾಳ, ಶಿವಾನಂದ ಮಠಪತಿ, ಹಿರಿಯ ಸಾಹಿತಿ ಶಿವಕವಿ ಹಿರೇಮಠ ಜೋಗೂರ, ಪ್ರವಚನಕಾರ ಮಲ್ಲಿಕಾರ್ಜುನ ಶಾಸ್ತ್ರಿ ಟೆಂಗಳಿ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

ಇದಕ್ಕೂ ಮುಂಚೆ ಹಳ್ಳಿಯ ವಿವಿಧ ಬಡಾವಣೆಗಳ ಮನೆ ಮನೆಗೆ ತೆರಳಿ ಪೂಜ್ಯ ಶ್ರೀಗಳು ತಮ್ಮ ಜೋಳಿಗೆ ಯುವಕರಿಂದ ದುಶ್ಚಟಗಳಿಗೆ ಸಂಬಂಧಿಸಿದ ವಸ್ತುಗಳನ್ನು ಹಾಕಿಸಿಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here