ಸುರಪುರ: ನಾರಾಯಣಪುರ ಮತ್ತು ಆಲಮಟ್ಟಿ ಜಲಾಶಯಗಳು ಭರ್ತಿಯಾದ್ದರಿಂದ ರೈತರಿಗೆ ಹಿಂಗಾರು ಹಂಗಾಮಿಗೆ ಎಲ್ಲಿಯವರೆಗೆ ರೈತರ ಜಮೀನಿಗೆ ನೀರು ಒದಗಿಸಲಾಗವುದೆಂದು ನೀರಾವರಿ ಸಲಹಾ ಸಮಿತಿಯ ಸಭೆಯನ್ನು ಆಯೋಜಿಸಿ ರೈತರಿಗೆ ಸ್ಪಷ್ಟ ಮಾಹಿತಿ ನೀಡುವಂತೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,೨೦೧೯-೨೦ ನೇ ಸಾಲಿನ ಹಿಂಗಾರು ಹಂಗಾಮಿಗೆ ರೈತರ ಜಮೀನುಗಳಿಗೆ ಸಂಪೂರ್ಣ ನೀರು ಒದಗಿಸುವ ನಿಟ್ಟಿನಲ್ಲಿ ರೈತರ ಹಿತದೃಷ್ಟಿಯನ್ನು ಕಾಪಾಡಲು ತಕ್ಷಣವೆ ನಿರಾವರಿ ಸಲಹಾ ಸಮಿತಿ ಸಭೆಯನ್ನು ಕರೆದು ಜಲಾಶಯದಲ್ಲಿನ ನೀರಿನ ಮಟ್ಟ ಮತ್ತು ಹಿಂಗಾರು ಹಂಗಾಮಿಗೆ ಎಲ್ಲಿಯವರೆಗೆ ನೀರನ್ನು ರೈತರ ಜಮೀನಿಗೆ ಹರಿಸಲಾಗುವುದು ಎನ್ನುವ ಕುರಿತು ನೀಖರ ಮಾಹಿತಿಯನ್ನು ಅಧಿಕಾರಿಗಳು ರೈತರಿಗೆ ನಿಡಬೇಕು.
ಅಕ್ಟೋಬರ ತಿಂಗಳಲ್ಲೆ ಸಭೆಯನ್ನು ಕರೆದು ಮಾಹಿತಿ ತಿಳಿಸಬೇಕಾಗಿತ್ತು ಆದರೆ ಇಲ್ಲಿಯವರೆಗೆ ಸಭೆಯ ಆಯೋಜನೆ ಕುರಿತು ಯಾವುದೆ ಮಾಹಿತಿ ಇಲ್ಲದಿರುವುದು ಸಭೆಯನ್ನು ಕರೆಯುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಒತ್ತಾಯಿಸಲಾಗಿತ್ತು, ಆದರೂಕೂಡ ಯಾವುದೆ ಕ್ರಮ ಜರುಗಿಸಿಲ್ಲ ಮತ್ತು ಜನಪ್ರತಿನಿಧಿಗಳು ನೀರಿನ ಹರಿವಿಗೆ ಸಂಬಂಧಿಸಿದಂತೆ ದಿನಕ್ಕೊಂದು ಹೇಳಿಕೆಗಳನ್ನು ನೀಡಿ ರೈತರು ಗೊಂದಲಕ್ಕೆ ದೂಡುತ್ತಿದ್ದಾರೆ.
ಮೊದಲೆ ಈ ಭಾಗದ ರೈತರು ನೆರೆಪ್ರವಾಹದಿಂದ ಹಲವಾರು ಹೆಕ್ಟರ್ ಜಮೀನಿನ ಬೆಳೆ ನಾಶವಾದ ಕಾರಣ ರೈತರು ಸಂಕಷ್ಟದಲ್ಲಿದ್ದು ರೈತರನ್ನು ಸಂಕಷ್ಟದಿಂದ ಪಾರುಮಾಡಬೇಕಾದ ಜನಪ್ರತಿನಿಧಿಗಳು ರೈತರಿಗೆ ನೀರಿನ ವಿಷಯದಲ್ಲಿ ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಾ ಗೊಂದಲದಲ್ಲಿ ಸಿಲುಕಿಸುತ್ತಿರುವುದು ಸರಿಯಲ್ಲ,ಹೀಗಾಗಿ ರೈತರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ಕೆ.ಬಿಜೆ.ಎನ್.ಎಲ್. ಅಧಿಕಾರಿಗಳು ನೀರಾವರಿ ಸಲಹಾ ಸಮಿತಿ ಸಭೆಯನ್ನು ಕರೆದು ರೈತರ ಹಿಂಗಾರು ಬೆಳೆಗಳಿಗೆ ನೀರನ್ನು ಒದಗಿಸುವ ಸ್ಪಷ್ಟಮಾಹಿತಿಯನ್ನು ಹಾಗೂ ರೈತರ ಹಿತಕಾಯುವ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಂಡು ರೈತರಿಗೆ ಅನುಕೂಲಮಾಡಿಕೊಡಬೇಕಿತ್ತು ಆದರೆ ಇಲ್ಲಿಯವರೆಗೂ ಸಲಹಾ ಸಮಿತಿ ಯ ಸಭೆಕರೆಯದೆ ಇರುವುದು ಸರ್ಕಾರವು ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರಬಗ್ಗೆ ನಿಷ್ಕಾಳಜಿ ವಹಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಹೀಗಾಗಿ ಈಗಲಾದರು ಸರ್ಕಾರ ಮತ್ತು ಅಧಿಕಾರಿಗಳು ಎಚ್ಚೆತ್ತುಕೊಂಡು ಈಭಾಗದ ರೈತರ ಹಿತ ಕಾಪಾಡಲು ಹಿಂಗಾರುಹಂಗಾಮಿಗೆ ಸಂಪೂರ್ಣವಾಗಿ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.