ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಶ್ರಮಿಸಿ: ರಾಜುಗೌಡ

0
51

ಸುರಪುರ: ವಿವಿಧ ಇಲಾಖೆಯಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಇವುಗಳನ್ನು ಅರಿತು ನಮ್ಮ ಜನರಿಗೆ ತಲುಪಿಸುವಲ್ಲಿ ಜನಪ್ರತಿನಿಧಿಗಳ ಪಾತ್ರ ಬಹುಮುಖ್ಯವಾಗಿದೆ ಅಧಿಕಾರಿಗಳಿಂದ ಕೆಲಸಗಳನ್ನು ಮಾಡಿಸುವುದು ಅವರಕೈಯಲ್ಲಿದೆ ಎಂದು ಶಾಸಕ ನರಸಿಂಹ ನಾಯಕ(ರಾಜುಗೌಡ) ಹೇಳಿದರು.

ನಗರದ ತಾಲೂಕು ಪಂಚಾಯತ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಗ್ರಾಮೀಣ ಕ್ಷೇತ್ರಗಳ ಅಭಿವೃದ್ಧಿಗಾಗಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯೋಜನೆಗಳನ್ನು ಸಾಕಾರಗೋಳಿಸಿ ಕ್ಷೇತ್ರವನ್ನು ಅಭಿವೃದ್ಧಿ ಮಾಡುವಲ್ಲಿ ಶ್ರಮಿಸಬೇಕು ಇನ್ನು ಮಹತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಸರ್ಮಪಕವಾಗಿ ಬಳಸಿಕೊಂಡು ಗೊಳೆ ಪದ್ದತಿಯನ್ನು ಹೊಗಲಾಡಿಸುವುದು ಮತ್ತು ನಮ್ಮ ಗ್ರಾಮಗಳನ್ನು ಅಭಿವೃದ್ಧಿ ಪಡಿಸಿಕೊಳ್ಳೊಣ ಎಂದರು. ಇದೆ ಸಮಯದಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ಸಂಭಂಧಿಸಿದ ಉದ್ಯೋಗ ವಾಹಿನಿ ಜಾಗೃತಿ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Contact Your\'s Advertisement; 9902492681

ನಂತರ ಸಾಮಾನ್ಯ ಸಭೆಯಲ್ಲಿ ಜೆಸ್ಕಾಂ ಎಇಇ ಅವರು ಸಭೆಗೆ ಹಾಜರಾಗದ ಕಾರಣ ಎಲ್ಲಾ ತಾಪಂ ಸದಸ್ಯರು ಆಕ್ರೋಶ ವ್ಯಪಡಿಸಿರು ಸಭೆಗೆ ಗೈರಾಗುತ್ತಾರೆ ನಮ್ಮ ಕ್ಷೇತ್ರದ ಕರೆಂಟಿನ ಸಮಸ್ಯಗಳನ್ನು ನಾವು ಯಾರಬಳಿ ಹೇಳೋಣ ಸಭೆಗೆ ಹಾಜರಾಗುವುದು ದೂರದ ಮಾತು ಸಮಸ್ಯೆಗಳನ್ನು ಹೇಳಲು ದೂರವಾಣಿ ಕರೆ ಮಾಡಿದರು ಕರೆಗೆ ಸಿಗದ ಅಧಿಕಾರಿಗಳು ನಮಗೆ ಬೇಡ ಹಿಂದಿನ ಸಭೆಗೂ ಇಲ್ಲಸಲ್ಲದ ಕಾರಣಗಳನ್ನು ನೀಡಿ ಗೈರಾಗಿದ್ದರು ಅವರ ಮೇಲೆ ಕ್ರಮಜರುಗಿಸಿ ಎಂದು ಪಟ್ಟುಹಿಡಿದರು. ತಾಪಂ ಇಒ ಅವರು ಮಧ್ಯಪ್ರವೇಶಿಸಿ ಅವರಿಗೆ ನೋಟಿಸ್ ನೀಡಲು ನಡುವಳಿಯಲ್ಲಿ ಬರೆಸಿದರು.

ಅಂಗನವಾಡಿ ಕಟ್ಟಡಗಳು ಇನ್ನು ಮುಗಿದಿಲ್ಲ ತಾಲೂಕಿನ ಬಹುತೇಕ ಗ್ರಾಮದ ಅಂಗನವಾಡಿ ಕಟ್ಟಗಳು ನಿರ್ಮಿತಿ ಕೇಂದ್ರ ಹಾಗೂ ಭೂ ಸೇನಾ ನಿಗಮಕ್ಕೆ ಕಾಮಗಾರಿಗಾರಿ ಮಾಡಲು ನೀಡಿದ್ದಾರೆ ಅವರು ಅನುದಾನವನ್ನು ಲಪಟಾಯಿಸಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ ಹೀಗಾದರೆ ಹೇಗೆ ಅವರನ್ನು ಸಭೆಗೆ ಹಾಜರಾಗುವಂತೆ ಹಿಂದಿನ ಸಭೆಯಲ್ಲಿ ನಿರ್ಣಗಳನ್ನು ತೆಗೆದುಕೊಳ್ಳಲಾಗಿತ್ತು ಆದರೂ ಸಹ ಅವರು ಬಂದಿಲ್ಲ ಇದು ಅಧಿಕಾರಿಗಳು ತಾಲೂಕು ಪಂಚಾಯಿತಿಗೆ ಕೊಡುವ ಗೌರವ ಇದೇನಾ ಎಂದು ವಾಗಣಗೇರಾ ತಾಪಂ ಸದಸ್ಯೆ ಬೈಲಪ್ಪಗೌಡ ಖಾರವಾಗಿ ಪ್ರಶ್ನಿಸಿದರು.

ನಂತರು ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಕುಷ್ಟರೋಗ, ನಿರ್ಮೂಲನೆ ಕುರಿತು ತಾಲೂಕಿನ ವೈದ್ಯಾಧಿಕಾರಿ ಡಾ.ಆರ್.ವಿ.ನಾಯಕ ಸಮಗ್ರವಾಗಿ ಮಾಹಿತಿ ನೀಡಿದರು ಗ್ರಾಮೀಣ ಕುಡಿಯುವ ನೀರು, ಕೃಷಿ ಹಾಗೂ ಶಿಕ್ಷಣ ಇಲಾಖೆ ವಿವಿಧ ಯೋಜನೆಗಳ ಕುರಿತು ತಾಪಂ ಸದಸ್ಯರು ಮಾಹಿತಿ ಪಡೆದರು.

ಸಭೆಯಲ್ಲಿ ತಾಪಂ ಅಧ್ಯಕ್ಷ ಶಾರದಾ ಭೀಮಣ್ಣ ಬೇವಿನಾಳ, ಉಪಾಧ್ಯಕ್ಷೆ ಮಂಜುಳಾ ಸಾಹೇಬಗೌಡ, ಇಒ ಅಂಬ್ರೇಶ ಸೇರಿದಂತೆ ವಿವಿಧ ಇಲಾಖೆಯ ಅನುಷ್ಠಾನ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here