ಯಾದಗಿರಿ: ಕರ್ನಾಟಕ ಜಾನಪದ ಪರಿಷತ್ತು ಕೇಂದ್ರ ಸಮಿತಿ ಬೆಂಗಳೂರು ಜಾನಪದ ಲೋಕ ರಾಮನಗರ ಪ್ರತಿ ತಿಂಗಳು ಎರಡನೇ ಶನಿವಾರ ಲೋಕ ಸಿರಿ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಈ ಬಾರಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದುಂದುಮೆ ಹಾಡುಗಾರ ಬಿ.ಲಕ್ಷ್ಮಣ್ ಗುತ್ತೇದಾರ್ ಆಯ್ಕೆಯಾಗಿರುವುದಕ್ಕೆ,ಯಾದಗಿರಿ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರಕಾಶ್ ಅಂಗಡಿ ಕನ್ನಳ್ಳಿ ಹರ್ಷ ವ್ಯಕ್ತ ಪಡಿಸಿದ್ದಾರೆ.
ಲಕ್ಷ್ಮಣ್ ಗುತ್ತೇದಾರ್ ಅವರು ಈ ಸಾಲಿನ ಕರ್ನಾಟಕ ಸರ್ಕಾರದ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದರಾಗಿದ್ದು, ದುಂದುಮೆ ಪರಂಪರೆಯನ್ನು ಉಳಿಸಿ ಬೆಳಸುತ್ತಿದ್ದಾರೆ, ಅವರನ್ನು ಆಯ್ಕೆ ಮಾಡಿ ಯಾದಗಿರಿ ಜಿಲ್ಲೆಗೆ ಅವಕಾಶ ಮಾಡಿದ, ಕೇಂದ್ರ ಸಮಿತಿ ಅಧ್ಯಕ್ಷರಾದ ಟಿ ತಿಮ್ಮೇಗೌಡ ಹಾಗೂ ಪದಾಧಿಕಾರಿಗಳಿಗೆ ಅಭಿನಂದಿಸಿದ್ದಾರೆ.