ಶಹಾಪುರ: ರೂ4.39 ಮೌಲ್ಯದ ಹಸಿ ಗಾಂಜಾ ಗಿಡ ವಶ

0
104

ಶಹಾಪುರ: ತಾಲ್ಲೂಕಿನ ಬೆನಕನಳ್ಳಿ ಹಾಗೂ ಬೀರನೂರ ಗ್ರಾಮದಲ್ಲಿ ಜಮೀನಿನ ಹತ್ತಿ ಬೆಳೆಯಲ್ಲಿ ಅಕ್ರಮವಾಗಿ ಗಾಂಜಾ ಗಿಡವನ್ನು ಬೆಳೆದಿದ್ದು ಶುಕ್ರವಾರ ಎರಡು ಕಡೆ ಪ್ರತ್ಯೇಕವಾಗಿ ದಾಳಿ ಮಾಡಿ $4.39 ಲಕ್ಷ ಮೌಲ್ಯದ ಹಸಿ ಗಾಂಜಾ ಗಿಡವನ್ನು ವಶಪಡಿಸಿಕೊಂಡಿದ್ದಾರೆ.

ತಾಲ್ಲೂಕಿನ ಪರಸಾಪುರ ಗ್ರಾಮದ ಹನುಮಯ್ಯ ಮರಡಿ ಎನ್ನುವ ಆರೋಪಿಯನ್ನು ಬಂಧಿಸಿದ್ದಾರೆ. ತಾಲ್ಲೂಕಿನ ಬಿರನೂರ ಗ್ರಾಮದ ಸೀಮಾಂತರದಲ್ಲಿ ಪರಸಾಪೂರ ಗ್ರಾಮದ ಹನುಮಯ್ಯ ಮರಡಿ ಇತನು ಹತ್ತಿ ಬೆಳೆಯಲ್ಲಿ ಅಕ್ರಮವಾಗಿ ಹಾಗೂ ಕಾನೂನುಬಾಹಿರವಾಗಿ  ಮಾರಾಟ ಮಾಡುವ ಉದ್ದೇಶದಿಂದ ಗಾಂಜಾ ಗಿಡಗಳನ್ನು ಬೆಳೆಸಿದ್ದಾನೆ. ಪೊಲೀಸರು ದಾಳಿ ಮಾಡಿ 54 ಹಸಿ ಗಾಂಜಾ ಗಿಡಗಳನ್ನು ಸುಮಾರ 81 ಕೆ.ಜಿ. ಅದರ ಮೌಲ್ಯ $2.43 ಲಕ್ಷ  ಆಗಿದ್ದು ಅದನ್ನು ಜಪ್ತಿ ಮಾಡಿಕೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದರು.

Contact Your\'s Advertisement; 9902492681

ಅದರಂತೆ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ರೈಲ್ವೆ ಟ್ರ್ಯಾಕ್ ಕಾಮಗಾರಿ ನಡೆದ ಹತ್ತಿರ ಹಳ್ಳದ ಪಕ್ಕದಲ್ಲಿ ಮಲ್ಲಪ್ಪ ದೊಡ್ಮನಿ ಇತನ ಜಮೀನು ಲೀಜ್ ಪಡೆದು ಹುಲಗಪ್ಪ ದೊಡ್ಮನಿ ಅಕ್ರಮವಾಗಿ 45 ಹಸಿ ಗಾಂಜಾ ಗಿಡಗಳನ್ನು ಬೆಳೆಸಿದ್ದರು. ಅವುಗಳ ತೂಕ 72 ಕೆ.ಜಿ. ಅದರ ಮೌಲ್ಯ $2.16 ಲಕ್ಷ ಆಗಿದೆ. ಇಬ್ಬರು ಆರೋಪಿಗಳು ತಲೆ ಮರೆಯಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಯದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ ನಿರ್ದೇಶನದಲ್ಲಿ ಹಾಗೂ ಡಿವೈಎಸ್ಪಿ ಶಿವನಗೌಡ ಪಾಟೀಲ್ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ ಎಂದು ಶಹಾಪುರ ಠಾಣೆಯ ಪಿ.ಐ ಹನುಮರಡ್ಡೆಪ್ಪ ತಿಳಿಸಿದ್ದಾರೆ. ಶಹಾಪುರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.

ಎಚ್ಚೆತ್ತುಕೊಂಡ ಪೊಲೀಸರು: ಎರಡು ದಿನ ಹಿಂದೆ ಹುಬ್ಬಳ್ಳಿಗೆ ಅಕ್ರಮವಾಗಿ ಗಾಂಜಾವನ್ನು ಶಹಾಪುರದಿಂದ ಕಾರಿನಲ್ಲಿ ಸಾಗಾಣಿಕೆ ಮಾಡುತ್ತಿರುವಾಗ ಮೂವರು ಆರೋಪಿಗಳನ್ನು ಬಂಧಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here