ಅತ್ಯಾಚಾರ ಪ್ರಕರಣ ಕಡಿವಾಣಕ್ಕೆ ರಾಯಚೂರು ಎಡಿಜಿಪಿ ಸಾರ್ವಜನಿಕರೊಂದಿಗೆ ಸಭೆ

0
96

ರಾಯಚೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ಸಾವಿನ  ಕೃತ್ಯಗಳಿಗೆ ಕಡಿವಾಣ ಹಾಕುವ ಕುರಿತು ರಾಯಚೂರು ಎಡಿಜಿಪಿ ಅವರು ಸಾರ್ವಜನಿಕರೊಂದಿಗೆ ಸಭೆ ನಡೆಸಿ ಅಭಿಪ್ರಯ ಸಂಗ್ರಹಿಸಿದ್ದರು.

ನಗರದ SP ಕಛೇರಿಯ ಸಭಾಂಗಣದಲ್ಲಿ  ನಡೆದ ಸಭೆಯಲ್ಲಿ IG, SP ಸೇರಿ ಜಿಲ್ಲೆಯ ಎಲ್ಲಾ ಉನ್ನತ ಮಟ್ಟದ ಪೋಲಿಸ್ ಅಧಿಕಾರಿಗಳ ಸಮ್ಮೂಖದಲ್ಲಿ ನಡೆಸಿದರು. ದೇಶದಲ್ಲಿ ಮಹಿಳೆಯರ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲೆಂದು ನೇಮಿಸಲಾಗಿದ್ದ ನ್ಯಾಯಮೂರ್ತಿ ವರ್ಮಾ ಸಮಿತಿಯ ಶಿಫಾರಸ್ಸು ಗಳನ್ನು ದೇಶವ್ಯಾಪಿ ಜಾರಿ ಮಾಡಿ ಅದರ ಬಗ್ಗೆ ಜಾಗೃತಿ ಮೂಡಿಸಬೇಕು. ಮಹಿಳೆಯರ ದೌರ್ಜನ್ಯ ತಡೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಮಾನ್ಯ ಉಗ್ರಪ್ಪ ನವರು ನೀಡಿದ ವರದಿಯ ಶಿಫಾರಸುಗಳನ್ನು ರಾಜ್ಯವಾಪಿ ಜಾರಿ  ಮಾಡಬೇಕು.

Contact Your\'s Advertisement; 9902492681

ಜಿಲ್ಲೆ ಸೇರಿದಂತೆ ರಾಜ್ಯದ  ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮಾನ್ಯ ಜಿಲ್ಲಾಧಿಕಾರಿ ಗಳು ಮತ್ತು SP ಯವರನ್ನು ಒಳಗೊಂಡಂತೆ ಲೈಗಿಂಕ ಕಿರುಕುಳ ವಿರೋಧ ಸಮಿತಿ ರಚನೆ ಮಾಡಿ ಕ್ರಿಯಾಶೀಲಗೊಳಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಹೆಚ್ಚು ದೂರು ಮತ್ತು ಸಲಹಾ ಪೆಟ್ಟಿಗೆ ಗಳನ್ನು ಪೋಲಿಸ್ ಇಲಾಖೆಯಿಂದ ಇಡಬೇಕು. ಮಧು ಸಾವಿನ ಪ್ರಕರಣ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ಯಾಗಿ ಈ ಸಾವಿಗೆ ನ್ಯಾಯ ಒದಗಿಸಬೇಕು. ಹಾಗೂ ಈ ಪ್ರಕರಣದ ತೀರ್ಪು ಇಡೀ ದೇಶಕ್ಕೆ ಮಾದರಿಯಾಗಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು. SFI ಜಿಲ್ಲಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಪ್ರಮುಖ ವಾಗಿ ಮಾತನಾಡಿ ಅಧಿಕಾರಿಗಳ ಗಮನ ಸೆಳೆದರು ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಅಧಿಕಾರಿಗಳ ಡೈರಿಯಲ್ಲಿ ದಾಖಲಾಗುವಂತೆ ಮಾತನಾಡಿ ಪ್ರಶಂಸೆ ಗೆ ಗೆಟ್ಟಿಸಿಕೊಂಡರು.

ಸಭೆಯಲ್ಲಿ ವಿವಿಧ ಸಂಘಟನೆಯ ಮುಖಂಡರು, ಸಮುದಾಯದ ಗಣ್ಯರು, ವಿದ್ಯಾರ್ಥಿಪರ ಸಂಘಟನೆಯಗಳು ಸಭೆಯಲ್ಲಿ ಭಾಗವಹಿಸಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here