ಗೃಹ ಸಚಿವರ ಹೆಸರಲ್ಲಿ ನಕಲಿ ಪತ್ರ ಪ್ರಕರಣ: ಮತ್ತೋರ್ವ ಪತ್ರಕರ್ತನ ಬಂಧನ

1
198

ಬೆಂಗಳೂರು: ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ಹೆಸರಲ್ಲಿ ನಕಲಿ ಪತ್ರವನ್ನು ರಚಿಸಿ ಸಮಾಜಿ ಜಾಲತಾಣಗಳಲ್ಲಿ ಹರಿಬಿಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತರೊಬ್ಬರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಹೇಮಂತ್ ಕುಮಾರ್ ಬಂಧಿತ ಆರೋಪಿ ಹಿರಿಯ ಪತ್ರಕರ್ತ ಎಂದು ತಿಳಿದು ಬಂದಿದ್ದು, ಇತ್ತೀಚೆಗಷ್ಟೆ ಪೋಸ್ಟ್ ಕಾರ್ಡ್ ಪತ್ರಿಕೆ ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆಯ ಬಂಧಿಸಲಾಗಿತ್ತು, ಎಂ.ಬಿ. ಪಾಟೀಲ ವಿರುದ್ಧ ನಕಲಿ ಪತ್ರ ರಚಿಸಿ, ಹರಿಬಿಟ್ಟ ಪ್ರಕರಣ, ಆರೋಪಿ. ಮೇಲ್ವಿಚಾರಣೆ ವೇಳೆ ಹೇಮಂತ್ ಕುಮಾರ್ ಸಲಹೆಯಂತೆ ನಕಲಿ ಲೆಟರ್ ಹೆಡ್ ರಚಿಸಲಾಯಿತು ಎಂದು ತಿಳಿಸಿದ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತ ಹೇಮಂತ್ ಕುಮಾರ್ ಬಂಧನವಾಗಿದೆ ಎಂದು ತಿಳಿದುಬಂದಿದೆ.

Contact Your\'s Advertisement; 9902492681

ಪತ್ರಕರ್ತ ಹೇಮಂತ್ ಕುಮಾರ್ ಸಿಐಡಿ ಪೊಲೀಸರು ಬಂಧಿಸಿದನ್ನು ಖಂಡಿಸಿ, ಮಾಜಿ ಸಚಿವ ಸುರೇಶ್ ಕುಮಾರ್ ಹಾಗೂ ಬಿಜೆಪಿ ಮುಖಂಡ ಅಶ್ವಥ್ ನಾರಾಯಣ ಡಿಜಿಪಿ ಕಚೇರಿಗೆ ಭೇಟಿ ನೀಡಿ ದೂರು ನೀಡಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಶ್ರುತಿ ಬೆಳ್ಳಕ್ಕಿ ಅವರನ್ನು ಬಂಧಿಸಲಾಗಿತ್ತು. ಇದೀಗ ಅವರಿಗೆ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಲಾಗಿದೆ. ‌ಅದೇ ರೀತಿಯಾಗಿ ಕನ್ನಡದ ಪ್ರತಿಷ್ಠಿತ ಪತ್ರಿಕೆ ಹಾಗೂ ಚಾನಲ್ ನವರು ಲಿಂಗಾಯತ ಧರ್ಮ ವಿಚಾರವಾಗಿ ತಮ್ಮ ಪತ್ರಿಕೆ ಮತ್ತು ಚಾನಲ್ ನಲ್ಲಿ ಸುಳ್ಳು ಸುದ್ದಿ ಪ್ರಕಟಿಸಿರುವುದಕ್ಕೆ ರಾಜ್ಯದ ಜನತೆಯ ಕ್ಷಮೆ ಯಾಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here