ಗ್ರಂಥಪಾಲಕರ ಹುದ್ದೆಗಳ ಭರ್ತಿಗೆ ಆಗ್ರಹಿಸಿ ನವೆಂಬರ್ 16ಕ್ಕೆ ಪ್ರತಿಭಟನೆ

0
1592

ರಾಯಚೂರು: ಇತ್ತೀಚಿಗಿನ ಶಿಕ್ಷಣ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಗ್ರಂಥಾಲಯ, ಗ್ರಂಥಪಾಲಕರ ಕೋರ್ಸ್ ಮತ್ತು ಗ್ರಂಥಪಾಲಕರ ಮಹತ್ವದ ಪಾಲು ಗಣನೀಯವಾಗಿದೆ. ಹೀಗಾಗಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದಲ್ಲಿGBC (MLISc) Master in library and information science ವಿಷಯದಲ್ಲಿ ಪದವಿಯನ್ನು ಪಡೆದ ಸಾವಿರಾರು ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿರುವುದು ತುಂಬಾ ಬೇಸರದ ಸಂಗತಿ.

ರಾಜ್ಯದ ಎಲ್ಲಾ ಶೈಕ್ಷಣಿಕ ಗ್ರಂಥಾಲಯಗಳಲ್ಲಿ ( ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜು, ಪದವಿ ಕಾಲೇಜುಗಳು ಮತ್ತು ವಿವಿಗಳು ಹಾಗೂ ಸಂಶೋಧನಾ ಸಂಸ್ಥೆಗಳು) ಅಷ್ಟೇ ಅಲ್ಲದೇ ಕರ್ನಾಟಕದ ಎಲ್ಲಾ ಸಾರ್ವಜನಿಕ ಗ್ರಂಥಾಲಯಗಳು ಕಳೆದ 30 ವರ್ಷಗಳಿಂದ ಖಾಲಿ ಇರುವ ಸಾವಿರಾರು ಗ್ರಂಥ ಪಾಲಕರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗದಿರುವುದರ ಪರಿಣಾಮ ರಾಜ್ಯದಲ್ಲಿ MLISc ಸೇರಿದಂತೆ ಗ್ರಂಥಪಾಲಕರ ಕೋರ್ಸಗೆ ಬೇಡಿಕೆ ಕಡಿಮೆಯಾಗಿ ಗ್ರಂಥಪಾಲಕರ ಕೋರ್ಸ್ ಮುಚ್ಚುವ ಹಂತಕ್ಕೆ ತಲುಪಿದೆ. ಜೊತೆಗೆ ಗ್ರಂಥಪಾಲಕರ ಕೋರ್ಸ್ ಅಭ್ಯಾಸ ಮಾಡಿದ ಸಾವಿರಾರು ವಿದ್ಯಾವಂತ ನಿರುದ್ಯೋಗಿಗಳು ರಾಜ್ಯದಲ್ಲಿ ಇದ್ದಾರೆ. ಪರಿಣಾಮ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳವಾಗಿದೆ ಇದಕ್ಕೆಲ್ಲಾ ಆಳುವ ಸರ್ಕಾರಗಳೇ ನೇರವಾಗಿ ಹೊಣೆಯಾಗಿರುತ್ತವೆ.

Contact Your\'s Advertisement; 9902492681

ಮತ್ತೊಂದು ಕಡೆ ಹೀಗಿರುವ ಸರ್ಕಾರಿ ಗ್ರಂಥಾಲಯಗಳಲ್ಲಿ ಕನಿಷ್ಟ ಮೂಲಭೂತ ಸೌಕರ್ಯಗಳು ಇಲ್ಲವಾಗಿವೆ. ಸರ್ಕಾರದ ಸರಾಸರಿ ಅಂಕಿ ಅಂಶಗಳ ಪ್ರಕಾರ 6 ಸಾವಿರಕ್ಕೂ ಅಧಿಕ ಗ್ರಂಥಪಾಲಕರ ಸರ್ಕಾರಿ ಹುದ್ದೆಗಳು ರಾಜ್ಯದಲ್ಲಿ ಖಾಲಿ ಇರುತ್ತವೆ. ಹಾಗಾಗಿ ರಾಜ್ಯದಲ್ಲಿ ಎಲ್ಲಾ ಇಲಾಖೆಗಳ ಅಡಿಯಲ್ಲಿ ಸ್ಥಾಪಿಸಲ್ಟಟ್ಟಿರುವ ಗ್ರಂಥಾಲಯಗಳಿಗೆ ಶೀಘ್ರವೇ ಗ್ರಂಥಪಾಲಕರ ನೇಮಕಾತಿಗೆ ಸರ್ಕಾರ ಅಧಿಸೂಚನೆ ಹೊರಡಿಸಲು ಜೊತೆಗೆ ಗ್ರಂಥಾಲಯಗಳ ಸುಧಾರಣೆಗೆ ಒತ್ತಾಯಿಸಿ ದಿನಾಂಕ 16 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಿಂದವಪ್ರತಿಭಟನಾ ರಾಲಿ ಮೂಲಕ ತೆರಳಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (SFI), ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಷನ್ (DYFI) ಹಾಗೂ ಕರ್ನಾಟಕ ರಾಜ್ಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಪದವಿದರರ ಸಂಘ(KSLISGA) ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಹೋರಾಟ ಮಾಡಿ ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗುವುದು ಈ ಹೋರಾಟದಲ್ಲಿ ವಿವಿಧ ಜಿಲ್ಲೆಗಳ ಗ್ರಂಥಪಾಲಕ ಹುದ್ದೆಯ ಆಕಾಂಕ್ಷಿಗಳು ಪಾಲ್ಗೊಳ್ಳಲಿದ್ದಾರೆ.

ಜಿಲ್ಲೆಯ ವಿದ್ಯಾರ್ಥಿ ಯುವಜನರು ಹಾಗೂ ಇತರ ಪ್ರಗತಿಪರ ಸಂಘಟನೆಯ ಮುಖಂಡರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ನ್ಯಾಯಪರ ಇರುವ ಮೊದಲನೇ ಹಂತದ ಹೋರಾಟವನ್ನು ಯಶಸ್ವಿಗೊಳಿಸಬೇಕಾಗಿ ಪತ್ರಿಕಾ ಗೋಷ್ಠಿಯ ಮೂಲಕ ಕೇಳಿಕೊಳ್ಳುತ್ತೇವೆ.

ಸುದ್ದಿಗೋಷ್ಠಿಯಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ಶಿವಕುಮಾರ್ ಮ್ಯಾಗಳಮನಿ, ಜಿಲ್ಲಾ ಕಾರ್ಯದರ್ಶಿ ರಮೇಶ ವೀರಾಪೂರು, ಜಿಲ್ಲಾ ಉಪಾಧ್ಯಕ್ಷ ಲಿಂಗರಾಜ ಕಂದಗಲ್, ಕೆಎಸ್ಎಲ್ಐಎಸ್ ಜಿಎ ನ ಸುರೇಶ್ ಎ.ರಾಠೋಡ್, ರಮೇಶ ರಾಯಚೂರು, ಬಸವರಾಜ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here