ಸಂವಿಧಾನ ದಿನಾಚರಣೆ ಕೃತಿಯಲ್ಲಿ ಅಂಬೇಡ್ಕರರಿಗೆ ಅಪಮಾನ ಖಂಡಿಸಿ ಬೃಹತ್ ಪ್ರತಿಭಟನೆ

0
105

ಸುರಪುರ: ಇದೇ ನವೆಂಬರ್ ೨೬ ರಂದು ಸರಕಾರದಿಂದ ಆಚರಿಸಲು ಉದ್ದೇಶಿಸಿರುವ ಸಂವಿಧಾನ ದಿನಾಚರಣೆ ಅಂಗವಾಗಿ ಶಿಕ್ಷಣ ಇಲಾಖೆಯಿಂದ ಹೊರ ತಂದಿರುವ ಕೃತಿಯಲ್ಲಿ ಅಂಬೇಡ್ಕರರು ಒಬ್ಬರೆ ಸಂವಿಧಾನ ಬರೆದಿಲ್ಲವೆಂದು ಹೆಸರಿಸಿ ಅಂಬೇಡ್ಕರರಿಗೆ ಅವಮಾನಿಸಲಾಗಿದೆ ಎಂದು ದಲಿತ ಮತ್ತು ಪ್ರಗತಿಪರ ಸಾಮೂಹಿಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಬಸ್ ನಿಲ್ದಾಣ ಬಳಿಯ ಡಾ:ಬಿ.ಆರ್.ಅಂಬೇಡ್ಕರ ವೃತ್ತದಿಂದ ನಗರದ ಪ್ರಮುಖ ಬೀದಿಗಳ ಮೂಲಕ ಮಹಾತ್ಮ ಗಾಂಧಿ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ,ನಂತರ ಸಮಾವೇಶಗೊಂಡ ಪ್ರತಿಭಟನಾಕಾರರು ಕೇಂದ್ರ ಹಾಗು ರಾಜ್ಯ ಸರಕಾರಗಳ ವಿರುಧ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ಈ ದೇಶದಲ್ಲಿನ ಎಲ್ಲಾ ಮಹಾನ್ ಗ್ರಂಥಗಳನ್ನು ಬರೆದವರು ದಲಿತರು ಮತ್ತು ಹಿಂದುಳಿದವರು.ಅದರಂತೆ ಜಗತ್ತೆ ಒಪ್ಪುವಂತಹ ಸಂವಿಧಾನವನ್ನು ಬರೆದವರು ಅಂಬೇಡ್ಕರರು.ಇದನ್ನು ಅರಗಿಸಿಕೊಳ್ಳಲಾಗದ ಕೆಲವು ಕೋಮುವಾದಿ ಮನಸ್ಸಿನವರು ರಾಜ್ಯದಲ್ಲಿನ ಶಿಕ್ಷಣ ಇಲಾಖೆ ಮೂಲಕ ಅಂಬೇಡ್ಕರರ ಹೆಸರನ್ನು ವಿದ್ಯಾರ್ಥಿಗಳ ಮನಸ್ಸಿನಿಂದ ಮರೆ ಮಾಚಲು ಕುತಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು.

Contact Your\'s Advertisement; 9902492681

ವಿಧಾನ ಶಿಲ್ಪಿ ಅಂಬೇಡ್ಕರರು ಎಂದು ಅಮೇರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಹೇಳುತ್ತಾರೆ.ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಡಾ:ರಾಜೇಂದ್ರ ಪ್ರಸಾದವರು ಹೇಳುತ್ತಾರೆ.ಅಲ್ಲದೆ ವಿಶ್ವಸಂಸ್ಥೆಯೂ ಅಂಬೇಡ್ಕರ ಜನ್ಮ ದಿನವನ್ನು ವಿಶ್ವ ಜ್ಞಾನದ ದಿನವೆಂದು ಆಚರಿಸುತ್ತಾರೆ.ಇದೆಲ್ಲ ಗೊತ್ತಿದ್ದು ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಅಂಬೇಡ್ಕರರು ಸಂವಿಧಾನ ಒಬ್ಬರೆ ಬರೆದಿಲ್ಲ ಎನ್ನುವ ಮೂಲಕ ಇಡೀ ಅಂಬೇಡ್ಕರರ ಸಮುದಾಯವನ್ನೆ ಅವಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೆ ಶಿಕ್ಷಣ ಇಲಾಖೆ ಕಾರ್ಯದರ್ಶಿ ಮತ್ತು ಆಯುಕ್ತರನ್ನು ಕೆಲಸ ದಿಂದ ತೆಗೆದು ಹಾಕಬೇಕು.ಶಿಕ್ಷಣ ಇಲಾಖೆ ಸಚಿವ ಸುರೇಶ ಕುಮಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.ಸರಕಾರ ಈಗ ಹೊರತಂದ ಕೃತಿಯನ್ನು ತಕ್ಷಣ ಹಿಂಪಡೆದು ಅಂಬೇಡ್ಕರರೆ ಸಂವಿಧಾನ ಬರೆದವರೆಂದು ಘೋಷಿಸಬೇಕು ಮತ್ತು ಟಿಪ್ಪು ಸುಲ್ತಾನ ಅಧ್ಯಾಯವನ್ನು ಪಠ್ಯ ಪುಸ್ತಕದಿಂದ ಹೊರತರುವುದನ್ನು ಕೈ ಬಿಡಬೇಕು. ಒಂದು ವೇಳೆ ಬೇಡಿಕೆಗಳು ಈಡೇರದಿದ್ದಲ್ಲಿ ಜಿಲ್ಲಾ ಬಂದ್‌ಗೆ ಕರೆ ಕೊಡಲಾಗುವುದು ಎಂದರು.ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ ನಿಂಗಣ್ಣ ಬಿರೆದಾರ ಮೂಲಕ ಸಲ್ಲಿಸಲಾಯಿತು.

ನಿಂಗಣ್ಣ ಗೋನಾಲ,ವೆಂಕಟೇಶ ಬೇಟೆಗಾರ,ಮೂರ್ತಿ ಬೊಮ್ಮನಹಳ್ಳಿ,ರಂಗಣ್ಣ ದೊರೆ,ಪ್ರಕಾಶ ಆಲ್ಹಾಳ,ಗಂಗಾಧರ ನಾಯಕ,ಗೋಪಾಲ ವಜ್ಜಲ,ಎಂ.ಎಸ್.ಹಿರೇಮಠ,ರಾಹುಲ್ ಹುಲಿಮನಿ,ದೇವಿಂದ್ರಪ್ಪ ಪತ್ತಾರ,ಮಾನಪ್ಪ ಕಟ್ಟಿಮನಿ,ವೆಂಕಟೇಶ ಹೊಸ್ಮನಿ ಸೇರಿದಂತೆ ಅನೇಕರು ಮಾತನಾಡಿದರು.ರಮೇಶ ಬಡಿಗೇರ,ರಮೇಶ ದೊರೆ,ಮಾಳಪ್ಪ ಕಿರದಳ್ಳಿ,ರಾಜು ಕಟ್ಟಿಮನಿ,ದಾವುದ್ ಪಠಾಣ್,ಶಂಕರ ಬೊಮ್ಮನಳ್ಳಿ,ಅಮರೇಶ ಶೆಳ್ಳಿಗಿ,ಭೀಮರಾಯ ಸಿಂಧಗೇರಿ,ರಾಮಚಂದ್ರ ವಾಗಣಗೇರಿ,ಯಲ್ಲಪ್ಪ ಚಿನ್ನಾಕಾರ,ಅಜ್ಮೀರ ಖುರೇಶಿ,ಸಿದ್ದಯ್ಯ ಸ್ಥಾವರಮಠ,ಸುಲೆಮಾನ್,ವೀರಭದ್ರ ತಳವಾರಗೇರಾ,ಹಣಮಂತ ಹೊಸ್ಮನಿ,ವಿಶ್ವನಾಥ ಹೊಸ್ಮನಿ,ಮಲ್ಲು ಬಿಲ್ಲವ್,ಕನಕಾಚಲ ಯಡಿಯಾಪೂರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here