ಕೇಂದ್ರ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ

0
48

ಸುರಪುರ: ಗ್ರಂಥಾಲಯವೆಂಬುದು ನಮ್ಮಲ್ಲಿರುವ ಜ್ಞಾನದ ಜ್ಯೋತಿ ಬೆಳಗಿಸುವ ದೇವಾಲಯವಿದ್ದಂತೆ ನಮಗೆ ತಿಳಿಯದ ವಿಷಯಗಳನ್ನು ಇಲ್ಲಿರುವ ಪುಸ್ತಕಗಳನ್ನು ಓದುವ ಮೂಲಕ ತಿಳಿದು ಕೊಳ್ಳಬಹುದು,ಓದುವ ಹವ್ಯಾಸವನ್ನು ಈಗಿನ ಯುವಕರು ರೂಡಿಸಿಕೊಳ್ಳಬೇಕು ಮುಂದಿನದಿನಗಳಲ್ಲಿ ಅವರ ಭವಿಷ್ಯಕ್ಕೆ ಅದು ದಾರಿ ಮಾಡಿಕೊಡುತ್ತದೆ ಎಂದು ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಭೀರಣ್ಣ ಬಿ.ಕೆ ಆಲ್ದಾಳ ಹೇಳಿದರು.

ನಗರದ ಕೇಂದ್ರ ಗ್ರಂಥಾಲಯದಲ್ಲಿ ಗುರುವಾರ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಂಥಾಲಯವು ಸ್ಪರ್ದಾತ್ಮಕ ಚಿಂತನೆ ಬಿರುತ್ತಿರುವ ಕೇಂದ್ರಗಳಾಗಿವೆ. ಇಂದಿನ ಯುವಕರು ಮೋಬೈಲ್‌ಗೆ ಹೆಚ್ಚು ಮಾರುಹೋಗಿರುವುದು ಅವರ ಭವಿಷ್ಯಕ್ಕೆ ಮಾರಕವಾಗಿದೆ ತಂತ್ರಜ್ಞಾನವನ್ನು ಎಷ್ಟುಬೇಕು ಅಷ್ಟೇ ಬಳಸಿಕೊಳ್ಳಬೇಕೆ ಹೊರತು ಅದೇಜೀವನವಾಗಬಾರದು ಎಂದು ಯುವಕರಿಗೆ ಕಿವಿ ಮಾತು ಹೇಳಿದರು.

Contact Your\'s Advertisement; 9902492681

ನಂತರ ಗ್ರಂಥಾಲಯ ಸಹಾಯಕ ವನಕೇರಪ್ಪ ಹಾದಿಮನಿ ಮಾತನಾಡಿ, ಗ್ರಂಥಾಲಯವು ಒಂದಿದ್ದರೆ ಆ ಗ್ರಾಮ ಸಾಕ್ಷರತಾ ಗ್ರಾಮವಾಗುವುದು ಈ ಗ್ರಂಥಾಲಯದ ಪುಸ್ತಕಗಳನ್ನು ಓದಿ ತಮ್ಮ ಜೀವನವನ್ನು ರೂಪಿಸಿಕೊಳ್ಳಿ ಯುಕರು ಮುಂದಾಗಬೇಕು ಗ್ರಂಥಾಲಯದ ಅಭಿವೃದ್ಧಿಗೆ ಶಾಸಕ ನರಸಿಂಹ ನಾಯಕ (ರಾಜುಗೌಡ) ಅವರು ಕೆಕೆಆರ್‌ಡಿಬಿ ಅಡಿಯಲ್ಲಿ ೫೦ ಲಕ್ಷ ಅನುದಾನವನ್ನು ನೀಡಿದ್ದಾರೆ ಹೈಟೆಕ್ ಗ್ರಂಥಾಲಯದ ಕಾಮಗಾರಿಯು ಇನ್ನು ಕೇಲವೆ ದಿನಗಳಲ್ಲಿ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು.

ಶಿವುರಾಜಪ್ಪ ದೇಸಾಯಿ, ಬಾಬಾಜಿರಾವ್ ವೇದಿಕೆಯಲ್ಲಿದ್ದರು. ಮಲ್ಲಿಕಾರ್ಜುನ್ ಹುದ್ದಾರ್, ಶಾಂತರಾಮ ಬೋವಿ, ಗುರುರಾಜ ಕುಲಕರ್ಣಿ, ಪರಶುರಾಮ ನಾಯಕ, ಮರೆಪ್ಪ ಪೂಜಾರಿ, ಲಕ್ಷ್ಮೀ ಸಾಗರ ನೀರೂಪಿಸಿ ಸ್ವಾಗತಿಸಿದರು, ದತ್ತ್ರಾಯ ಕುಲಕರ್ಣಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here