ಸುರಪುರ: ಇಂದಿನ ಯುಗದಲ್ಲಿ ಹೆಣ್ಣುಮಕ್ಕಳು ರಕ್ಷಣೆಗೆ ಸೂಕ್ತ ಕಾನೂನುಗಳನ್ನು ರೂಪಿಸಿಲಾಗಿದೆ ಅವುಗಳನ್ನು ಅರಿತುಕೊಂಡು ಹೆಣ್ಣುಮಕ್ಕಳ ರಕ್ಷಣೆ ಮಾಡಿಕೊಳ್ಳಬೇಕು ಮತ್ತು ಬಹಳಷ್ಟುಜನ ಹೆಣ್ಣು ಹುಟ್ಟುತ್ತದೆ ಎಂದು ತಿಳಿದು ಬ್ರೂಣ ಹತ್ಯೆಮಾಡುತ್ತಾರೆ ಇದರಿಂದ ಹೆಣ್ಣಿನ ಅನುಪಾತ ಕಡಿಮೆಯಾಗುತ್ತಿದೆ ಎಂದು ನಗರದ ಹಿರಿಯ ದಿವಾಣಿ ನ್ಯಾಯಾಧೀಶೆ ತಯ್ಯಬಾ ಸುಲ್ತಾನ ಹೇಳಿದರು.
ನಗರದ ಬಾಲಕೀಯರ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಕಾನೂನು ನೆರವು ಸಮಿತಿ ಹಾಗೂ ನ್ಯಾಯವಾದಿಗಳ ಸಂಘ ಮತ್ತು ತಾಲೂಕು ಆಡಳಿತ ಸಂಯುಕ್ತಾಶ್ರಯದಲ್ಲಿ ನ್ಯಾಯ ನಿಮ್ಮದು ನೆರವು ನಮ್ಮದು ಹಾಗೂ ಮಕ್ಕಳ ದಿನಾಚರಣೆ ಮತ್ತು ಮಗಳನ್ನು ರಕ್ಷಸಿ ಮಗಳನ್ನು ಓದಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹೆಣ್ಣುಮಕ್ಕಳನ್ನು ಓದಿಸುವ ಜವಾಬ್ದಾರಿಯನ್ನು ಪ್ರತಿಯೊಬ್ಬ ಪಾಲಕರದು.ಇಂದು ವಿವಿಧ ಕ್ಷೇತ್ರಗಳಲ್ಲಿ ಹೇಣ್ಣು ಮಕ್ಕಳು ಸಾಧನೆಗೈಯುತ್ತಿದ್ದಾರೆ ತಮ್ಮ ಮಗುವನ್ನು ಓದಿಸಿ ಸಾಧನೆಗೆ ದಾರಿ ಮಾಡಿಕೊಡಬೇಕು ಎಂದು ಹೇಳಿದರು.
ನಂತರ ಇನ್ನೋರ್ವ ಹೆಚ್ಚುವರಿ ನ್ಯಾಯಾಧೀಶ ಅಮರನಾಥ ಬಿ.ಎನ್ ಮಾತನಾಡಿ ಇಂದಿನ ಯುಗದಲ್ಲಿ ಹೆಣ್ಣಿನ ಅನುಪಾತ ಕಡಿಮೆಯಾಗುತ್ತಾ ಬಂದಿದೆ ಇದನ್ನು ತಡೆಯಲು ಸರ್ಕಾರಗಳು ಮಗಳನ್ನು ರಕ್ಷಸಿ ಮಗಳನ್ನು ಒದಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಇದರ ಸದೂಪಯೋಗ ಪಡೆದುಕೊಂಡು ನಮ್ಮ ಹೆಣ್ಣು ಮಕ್ಕಳನ್ನು ರಕ್ಷಸಿಕೊಳ್ಳೊಣ ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಹ್ಮದ ಹುಸೇನ್, ಶಿಶುಅಭಿವೃದ್ಧಿ ಅಧಿಕಾರಿ ಲಾಲಸಾಬ, ಪ್ರಾಂಶುಪಾಲ ವೆಂಕಟೇಶ ನಾಯಕ, ಉಪ ಪ್ರಾಂಶುಪಾಲ ಎಸ್.ಎಸ್. ಕರಿಕಬ್ಬಿ, ನ್ಯಾಯವಾದಿಗಳಾದ ಜಯಲಲಿತಾ ಪಾಟೀಲ, ಶಖವತ್ ಹುಸೇನ,ಶಂಕರ ವೇದಿಕೆಯಲ್ಲಿದ್ದರು ಮಲ್ಲಣ್ಣ ಬೋವಿ ನಿರೂಪಿಸಿದರು, ಮಂಜುನಾಥ ಹುದ್ದಾರ ಸ್ವಾಗತಿಸಿದರು, ಬಸವರಾಜ ಗೋಗಿ ವಂದಿಸಿದರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.