ರಾಯಚೂರು: ಜಿಲ್ಲೆಯ ಶಕ್ತಿನಗರದಲ್ಲಿರುವ ಆರ್ಟಿಪಿಎಸ್ ವಿದ್ಯುತ್ ಕೇಂದ್ರದಲ್ಲಿ ಅವಘಡ ಸಂಭವಿಸಿದ್ದು, ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ. ಒಡಿಶಾ ಮೂಲದ ಹೆಚ್ಚುವರಿ ಕೆಲಸ ಮಾಡುತ್ತಿದ್ದ ಗುತ್ತಿಗೆ ಕಾರ್ಮಿಕ ದೀಪಕ್ ನಾಯಕ್(27) ಮೃತ ಕಾರ್ಮಿಕ.
ಕಲ್ಲಿದ್ದಲು ಬಂಕರ್ನಲ್ಲಿ ಕೆಲಸ ಮಾಡುವಾಗ ದುರ್ಘಟನೆ ಸಂಭವಿಸಿ ದೀಪಕ್ ಸಜೀವ ದಹನವಾಗಿದ್ದಾರೆ. ಅವರ ದೇಹ ಸುಟ್ಟು ಕರಕಲಾಗಿದೆ. ಯಾವುದೇ ಸುರಕ್ಷತಾ ಕ್ರಮಗಳು ಇಲ್ಲದೆ ದೀಪಕ್ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.