ಬೆಳಗಾವಿ(ಚಿಕ್ಕೋಡಿ): ಡಿಸಿಐಬಿ ಹಾಗೂ ಪೊಲೀಸರ ಕಾರ್ಯಾಚರಣೆ ವೇಳೆ ಖೋಟಾ ನೋಟು ಜಾಲ ಪತ್ತೆಯಾಗಿದ್ದು, ಗೂಡಂಗಡಿಗಳಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.
ಬೆಳಗಾವಿಯ ಗಡಿಯಲ್ಲಿ ಹಬ್ಬಿಕೊಂಡಿದ್ದ ಖೋಟಾ ನೋಟು ಜಾಲವನ್ನು ಡಿಸಿಐಬಿ ಹಾಗೂ ಪೊಲೀಸರ ಕಾರ್ಯಾಚರಣೆ ನಡೆಸಿ ಪತ್ತೆಹಚ್ಚಿದ್ದಾರೆ. ಬಂಧಿತ ಆರೋಪಿಗಳನ್ನು ಪರಶುರಾಮ್ ನಾಯ್ಕ ಹಾಗೂ ಜಲಾಲ್ ದರ್ಗಾವಾಲೇ ಎಂದು ಗುರುತಿಸಲಾಗಿದೆ. ಹಾಗೆಯೇ ಇವರಿಬ್ಬರೊಂದಿಗೆ ಕೈಜೋಡಿಸಿದ್ದ ಇನ್ನೋರ್ವ ಆರೋಪಿ ಫಾರುಖ್ ಎಸ್ಕೇಪ್ ಆಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬಂಧಿತರಿಂದ ಪೊಲೀಸರು ಬರೋಬ್ಬರಿ 2.33 ಲಕ್ಷ ರೂ. ಖೋಟಾ ನೋಟುಗಳನ್ನು ವಶಕ್ಕೆ ಪಡೆದಿದ್ದು, ಈ ನೋಟುಗಳನ್ನು ತಯಾರಿಸಿ ಖದೀಮರು ಗೂಡಾಂಗಡಿಗಳಲ್ಲಿ ಚಲಾವಣೆ ಮಾಡ್ತಿದ್ದರು ಎಂಬುದು ಬಯಲಾಗಿದೆ. ಈ ಸಂಬಂಧ ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.