ಗುರುಮಠಕಲ್ ಕ್ಷೇತ್ರದ ಸರ್ವ ಜನಾಂಗದ ಅಭಿವೃದ್ಧಿಗೆ ಬದ್ಧ: ಶಾಸಕ ನಾಗನಗೌಡ ಕಂದಕೂರ

0
59

ಯಾದಗಿರಿ: ಗುರುಮಠಕಲ್ ಮತಕ್ಷೇತ್ರದ ಎಲ್ಲಾ ಸಮಾಜಗಳ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಲಾಗುವುದು ಎಂದು ಶಾಸಕ ನಾಗನಗೌಡ ಕಂದಕೂರ ತಿಳಿಸಿದರು.

ತಾಲೂಕಿನ ಸೈದಾಪುರ ಪಟ್ಟಣದಲ್ಲಿ ೨೦೧೮-೧೯ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ಯೋಜನಾಡಿಯಲ್ಲಿ ಕನಕ ಭವನ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ಹಾಗೂ ಕನಕದಾಸರ ೫೩೨ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಹಾಲುಮತ ಸಮಾಜ ಹಾಲಿನಂತೆ ಪವಿತ್ರ. ಸಮಾಜದ ಅಭಿವೃದ್ಧಿಗೆ ಕಂಕಣ ಬದ್ಧರಾಗಿದ್ದು ಯಾವುದೇ ಸಮಸ್ಯೆಗಳಿರಲಿ ಅವುಗಳ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಸಮಾಜದಲ್ಲಿ ರಾಜಕೀಯ ಬೆರೆಸಬಾರದು ಆದರೆ ಕೆಲ ರಾಜಕಾರಣಿಗಳು ಮತದಾರರನ್ನು ಮತ ಬ್ಯಾಂಕ್‌ಗಾಗಿ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ ಅಂತವರ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಜನತೆಗೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಹಾಲುಮತ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮತ್ತು ಇತ್ತೀಚಿಗೆ ಸರಕಾರಿ ನೌಕರಿಗೆ ಆಯ್ಕೆಯಾದವರನ್ನು ಸನ್ಮಾನಿಸಲಾಯಿತು.

Contact Your\'s Advertisement; 9902492681

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹಂದರಕಿಯ ಅಯ್ಯಪ್ಪ ತಾತಾ ವಹಿಸಿದ್ದರು. ಕರ್ನಾಟಕ ಪ್ರದೇಶ ಕುರುಬ ಸಂಘದ ಸೈದಾಪುರ ವಲಯ ಅಧ್ಯಕ್ಷ ಪರಮೇಶ ವಾರದ, ಭೀಮನಗೌಡ ಕ್ಯಾತನಾಳ, ತಾಪಂ ಉಪಾಧ್ಯಕ್ಷೆ ರಾಮಲಿಂಗಮ್ಮ ಕವಡೆ, ಸದಸ್ಯ ಚಂದಪ್ಪ ಕಾವಲಿ, ಜಿ.ತಮ್ಮಣ್ಣ, ಕೃಷ್ಣಾರೆಡ್ಡಿ, ಬೋಜಣ್ಣಗೌಡ ಯಡ್ಡಳ್ಳಿ, ಸೋಮನಾಥ, ಗ್ರಾಪಂ ಅಧ್ಯಕ್ಷೆ ರಾಮಲಿಂಗಮ್ಮ ಬಾಲಚೇಡ, ಹಾಲುಮತ ಸಮಾಜದ ಯುವ ಮುಖಂಡ ನರಸಪ್ಪ ಕವಡೆ, ಸೈದಾಪುರ ವಲಯ ಜೆಡಿಎಸ್ ಅಧ್ಯಕ್ಷ ಸುದರ್ಶನ ಪಾಟೀಲ ಜೈಗ್ರಾಂ, ಲಿಂಗಪ್ಪ ಹಿಂದಪುರ, ಕಡೇಚೂರು ಗ್ರಾಪಂ ಅಧ್ಯಕ್ಷ ಭೀರಪ್ಪ ಪೂಜಾರಿ, ವೆಂಕೋಬ ತುರಕಾನದೊಡ್ಡಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು. ರವಿ ಕಡೇಚೂರು ನಿರ್ವಹಣೆ ಮಾಡಿದರು. ಸಿದ್ದು ಪೂಜಾರಿ ನಿರೂಪಿಸಿದರು, ಮಹಾದೇವ ಸ್ವಾಗತಿಸಿದರು, ಅರುಣ ಜೇಗರ್ ವಂದಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಗೋಪಾಲ ತೆಳಗೇರಿ, ನಗರ ಸಂಚಾಲಕ ಮಲ್ಲಿನಾಥ ಸುಂಗಲ್ಕರ್, ಶಿವಕುಮಾರ ಗಿರೆಪ್ಪನೋರ್, ತಾಲ್ಲೂಕು ಸಂಚಾಲಕ ಸಂಪತ್ ಚಿನ್ನಾಕಾರ, ಚಂದಪ್ಪ ಮುನಿಯೊಪ್ಪೋರ್, ಸೈದಪ್ಪ ಕೂಲೂರು, ಶಿವಯೋಗಿ ಭಂಡಾರಿ, ಹೊನ್ನಪ್ಪ ಯಡ್ಡಳ್ಳಿ, ಶರಣು ದೋರನಳ್ಳಿ, ರಾಯಣ್ಣ ಸಾಲಿಮನಿ, ಶಿವುಪುತ್ರ ಜವಳಿ, ನಿಂಗಪ್ಪ ಬೀರನಾಳ, ಶಿವಕುಮಾರ ಕುರಕುಂಬಳ, ಮಂಜುನಾಥ ಗುರುಸುಣಿಗಿ, ಬಸವರಾಜ ಮುನೆಪ್ಪನೋರ್ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here