ಸುಳ್ಳು ಸಂಗತಿ ಹರಿಬಿಟ್ಟ ಸಚಿವ ಸುರೇಶ ವಜಾ, ಅಧಿಕಾರಿ ಅಮಾನತು ಮಾಡಿ ಸಿಎಂ ಕ್ಷಮೆಯಾಚಿಸಲಿ

0
79

ಯಾದಗಿರಿ: ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರದ ಸಾರ್ವಜನಿಕ ಶಕ್ಷಣ ಇಲಾಖೆಯ
ವಿವಾದಾತ್ಮಕ ಸುತ್ತೋಲೆಯನ್ನು ಹೊರಡಿಸಿ ಡಾ. ಅಂಬೇಡ್ಕರ ರವರಿಗೆ ಅಪಮಾನವನ್ನು ಮಾಡಿದ್ದು ಸಚಿವ ಸುರೇಶ ಕುಮಾರ ರನ್ನು ಸಂಪುಟದಿಂದ ಕೈಬಿಡಬೇಕು, ಉಮಾಶಂಕರ ವಜಾಗೊಳಿಸಬೇಕು ಸಿಎಂ ಯಡಿಯೂರಪ್ಪ ಅಂಬೇಡ್ಕರ್ ಅನುಯಾಯಿಗಳ ಕ್ಷೇಮೆ ಕೇಳಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

ದಸಂಸ ಜಿಲ್ಲಾ ಸಂಚಾಲಕ ಮರೆಪ್ಪ ಚೆಟ್ಟರಕರ್ ನೇತೃತ್ವದಲ್ಲಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.  ಈ ಸಂದರ್ಭದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೆರಕರ್, ಡಾ. ಅಂಬೇಡ್ಕರ್ ರವರು ಒಬ್ಬರೆ ಸಂವಿಧಾನವನ್ನು ರಚಸಿಲ್ಲಾ ಎಂದು ಹೇಳುವ ಮೂಲಕ ಮಕ್ಕಳಿಗೆ ಡಾ. ಅಂಬೇಡ್ಕರ್‌ರವರ ಬಗ್ಗೆ ತಪ್ಪು ಮಾಹಿತಿಯನ್ನು ನೀಡಿ ಸಮಾಜದಲ್ಲಿ ವಿಷಮಯ ವಾತಾವರಣ ಸೃಷ್ಪಿಸಲು ಮುಂದಾಗಿದ್ದಾರೆ.

Contact Your\'s Advertisement; 9902492681

ಇಡೀ ವಿಶ್ವವೇ ಮೆಚ್ಚುವಂತಹ ವಿಶ್ವಜ್ಞಾನಿ, ವಿಶ್ವರತ್ನ ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರು
ಭಾರತ ದೇಶದ ಸಂವಿಧಾನ ಶಿಲ್ಪಿಯಾಗಿದ್ದಾರೆ, ಭಾರತ ದೇಶ ಹಾಗೂ ಇಡೀ ವಿಶ್ವವೇ ಮೆಚ್ಚುವಂತಹ
ಸಂವಿಧಾನವನ್ನು ರೂಪಿಸುವ ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ, ಅವರ ಶ್ರಮ, ತ್ಯಾಗಸತತ
ಅಧ್ಯಾಯನ ಪರಿಶ್ರಮದ ಮೂಲಕ ಸಂವಿಧಾನ ರಚಿಸಿದಾರೆ, ಇಡೀ ವಿಶ್ವಕ್ಕೆ ತಿಳಿದಿರುವ ಹಾಗೆ ಡಾ. ಅಂಬೇಡ್ಕರ್ ರವರು ಸಂವಿಧಾನ ರಚನಾ ಕರಡು ಸಮಿತಿ ಅಧ್ಯಕ್ಷರಾಗಿ ಹಾಗೂ ಇನ್ನೂಳಿದ ೭ ಜನ ಸದಸ್ಯರ ಸಮಿತಿ ರಚನೆಯಾದ ನಂತರ ಕಾರಣಾಂತಗಳಿಂದ ಅನಾರೋಹ್ಯ, ಮರಣ ಹಾಗೂ ಕೆಲವರು ದೆಹಲಿಗೆ ಬಾರದೇ ದೂರನೆಉಳಿಯುವ ಮೂಲಕ ಸಂವಿಧಾನ ರಚನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಿಲ್ಲ, ಅದರ ಸಂಪೂರ್ಣಜವಾಬ್ದಾರಿ ಭಾರ ಡಾ. ಅಂಬೇಡ್ಕರ್ ರವರ ಮೇಲೆ ಬೇಳುತ್ತದೆ, ಇದಕ್ಕೆಲಾ ಅಂಜದೇ, ಅಳುಕದೇ ಶ್ರಮವಹಿಸಿ ಅಧ್ಯಯನ ಮಾಡಿ ವಿವಿಧತೆಯಿಂದ ಕೂಡಿರುವ ಭಾರತದಂತಹ ದೇಶಕ್ಕೆ ಏಕತೆಯ ಪ್ರತೀಕವಾಗಿ ಇಡೀ ವಿಶ್ವವೇಮೆಚ್ಚುವಂತಹ ಸಂವಿಧಾನ ರಚನೆ ಮಾಡಿಕೊಟ್ಟಿರುವುದು ಕಟು ಸತ್ಯವಾಗಿದೆ.

ವಾಸ್ತವ ಹೀಗಿದ್ದಾಗ್ಯೂ ಅಂಬೇಡ್ಕರ್ ಅವರೊಬ್ಬರೆ ರಚಿಸಲಿಲ್ಲ ಎಂದು ಸುಳ್ಳು ಹೇಳಿದ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here