ಸುರಪುರ: ಮೇ ತಿಂಗಳ 20 ರಂದುಡಾ:ಬಾಬಾ ಸಾಹೇಬ ಅಂಬೇಡ್ಕರರ 128ನೇ ಜಯಂತಿಯನ್ನುಅಧ್ಧೂರಿಯಾಗಿ ಆಚರಿಸಲಾಗುವುದು ಎಂದು ಜಯಂತ್ಯೋತ್ಸವ ಸಮಿತಿ ಮುಖಂಡ ರಾಹುಲ್ ಹುಲಿಮನಿ ತಿಳಿಸಿದರು.
ಡಾ. ಬಾಬಾ ಸಾಹೇಬ ಅಂಬೇಡ್ಕರ ಜಯಂತಿ ಆಚರಣೆ ಸಮಿತಿ ಅಧ್ಯಕ್ಷ ವೆಂಕಟೇಶ ಹೊಸಮನಿ ಅಧ್ಯಕ್ಷತೆಯಲ್ಲಿ ನಗರದ ಅಂಬೇಡ್ಕರ ವೃತ್ತದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ,ನಾಡನ ಅನೇಕ ಜನಚಿಂತಕರು ಮತ್ತು ಸಹಸ್ರಾರು ಸಂಖ್ಯೆಯಲ್ಲಿ ಬಾಬಾ ಸಾಹೇಬರ ಅಭಿಮಾನಿಗಳು ಜಯಂತಿಯಲ್ಲಿ ಭಾಗವಹಿಸಲಿದ್ದು ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುವಂತ ಜಯಂತಿ ಕಾರ್ಯಕ್ರಮವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಜಯಂತ್ಯೋತ್ಸವ ಸಮಿತಿಅಧ್ಯಕ್ಷ ವೆಂಕಟೇಶ ಹೊಸಮನಿ ಮಾತನಾಡಿ,ಮೇ ತಿಂಗಳ 20ನೇ ತಾರೀಕಿನಂದು ಬುಧ್ದ ಬಸವಣ್ಣನವರ ಸ್ಮರಣೆಯಲ್ಲಿ ಅಂಬೇಡ್ಕರರ ಜಯಂತಿಯನ್ನು ಆಚರಿಸಲಾಗುತ್ತಿದ್ದು. ಅಂದು ಮದ್ಹ್ಯಾನ ಎರಡು ಗಂಟೆಗೆ ಗವಿ ಬುಧ್ದ ವಿಹಾರದಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ನಂತರ ಸಾಯಂಕಾಲ ಅಂಬೇಡ್ಕರ ವೃತ್ತದಲ್ಲಿ ಬಹಿರಂಗ ಸಮಾವೇಶ ನಡೆಯಲಿದೆ.
ಸಮಾವೇಶದಲ್ಲಿ ಮಹಾರಾಷ್ಟ್ರದ ಉಸ್ತುರಿಯ ಶ್ರೀ ಕೊರಣೆಶ್ವರ ಸ್ವಾಮೀಜಿ ಅನುಭಾವ ನೀಡಲಿದ್ದು, ಪ್ರಗತಿಪರ ಚಿಂತಕಿ ಹಾಗೂ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಕೆ.ನೀಲಾ ಅವರು ಬುಧ್ದ ಬಸವ ಅಂಬೇಡ್ಕರರ ಕುರಿತು ಉಪನ್ಯಾಸ ನೀಡಲಿದ್ದಾರೆ. ಅಲ್ಲದೆ ನಾಡಿನ ಅನೇಕ ಜನ ಚಿಂತಕರು, ಪ್ರಗತಿಪರ ವಿಚಾರವಾದಿಗಳು ಮತ್ತು ಸಮಾಜದ ವಿವಿಧ ರಂಗಗಳ ಮುಖಂಡರು ವೇದಿಕೆ ಮೇಲಿರಲಿದ್ದಾರೆಎಂದರು.
ಸಭೆಯಲ್ಲಿ ಮುಖಂಡರಾದ ಧರ್ಮಣ್ಣ ಹುಲಿ, ನಾಗಣ್ಣ ಕಲ್ಲದೇವನಹಳ್ಳಿ,ನಿಂಗಣ್ಣ ಗೋನಾಲ, ಮಲ್ಲಿಕಾರ್ಜುನ ವಾಗಣಗೇರಾ, ಮಾಳಪ್ಪ ಕಿರದಹಳ್ಳಿ, ಮಲ್ಲಿಕಾರ್ಜುನ ತಳ್ಳಳ್ಳಿ, ಧರ್ಮರಾಜ ಬಡಿಗೇರ,ಆದಪ್ಪ ಹೊಸಮನಿ, ರಾಜುಕಟ್ಟಿಮನಿ, ದೇವಿಂದ್ರಪ್ಪಪತ್ತಾರ,ಮಲ್ಲಿಕಾರ್ಜುನ ಸತ್ಯಂಪೇಟೆ, ಯಲ್ಲಪ್ಪಚಿನ್ನಾಕಾರ, ಭೀಮರಾಯ ಸಿಂಧಗೇರಿ, ರಮೇಶ ಅರಕೇರಿ, ನಗರಸಭೆ ಸದಸ್ಯ ಶಿವುಕುಮಾರ ಕಟ್ಟಿಮನಿ, ವೆಂಕಟೇಶ ಸುರಪುರ,ಮಹೇಶ ಕರಡಕಲ್,ಮೂರ್ತಿ ಬೊಮ್ಮನಹಳ್ಳಿ, ವಿಶ್ವನಾಥ ಹೊಸಮನಿ, ಶೇಖರಜೀವಣಗಿ,ಗೌತಮ ಬಡಿಗೇರ,ರಫೀಕ ಸುರಪುರ ಸೇರಿದಂತೆಅನೇಕರಿದ್ದರು.