ಕಲಬುರಗಿ: ಇತ್ತೀಚಿಗೆ ಕಲಬುರಗಿಯಲ್ಲಿ ಸ್ಥಾಪಿತವಾದ ಜಿಲ್ಲಾ ವೀರಶೈವ ಸಮಾಜ ಸಂಘಟನೆಯು ಭವಿಷ್ಯದಲ್ಲಿ ಯಾವುದೇ ಪ್ರಕಾರದ ಸಮಾಜ ಒಡೆಯುವ ಕೆಲಸದಲ್ಲಿ ತೊಡಗಿಸಿಕೊಂಡರೆ, ಈ ಸಂಘಟನೆ ಜೊತೆ ನನ್ನ ಯಾವುದೇ ಸಂಬಂಧ ಇರುವದಿಲ್ಲ. ಸಮಾಜದಲ್ಲಿ ಒಡಕು ರೂಪಿಸದೇ ಸಮಾನತೆ ಬಯಸುವ ಮತ್ತು ಒಳ್ಳೆಯ ಕೆಲಸ ಮಾಡುವ ಎಲ್ಲ ಸಂಘಟನೆಗಳಿಗೆ ನಮ್ಮ ಬೆಂಬಲ ಇರುತ್ತದೆ. ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದ್ದಾರೆ.
ಜಿಲ್ಲಾ ವೀರಶೈವ, ಲಿಂಗಾಯತ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳು ಸಮಾಜದಲ್ಲಿ ಅಸ್ತಿತ್ವದಲ್ಲಿವೆ. ಆದರೆ ಅಂತಹ ಸಂಘಟನೆಗಳು ಸಮಾಜವನ್ನು ಗುರುವಿನ ಸನ್ಮಾರ್ಗದಲ್ಲಿ ಒಯ್ಯುವ ಕೆಲಸದಲ್ಲಿ ತೊಡಗಬೇಕೆ ವಿನಾಃ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಬಾರದು. ಅಂತಹ ಕೆಲಸದಲ್ಲಿ ತೊಡಗಿದ ಸಂಘಟನೆಗಳಿಗೆ ನನ್ನ ಸಂಪೂರ್ಣ ವಿರೋಧ ಇರುತ್ತದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.