ಪುತ್ರ ಜನಿಸಿದ 4 ನೇ ದಿನಕ್ಕೆ ತಂದೆ ಆತ್ಮಹತ್ಯೆಗೆ ಶರಣು

0
119

ಕಲಬುರಗಿ: ಪುತ್ರ ಜನಿಸಿದ ನಾಲ್ಕನೇ ದಿನಕ್ಕೆ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಸೇಡಂ ಪಟ್ಟಣದ ಚಿಂಚೋಳಿ ಮಾರ್ಗದ ರುದ್ನೂರ್ ಗ್ರಾಮದ ಬಳಿ ಯಲ್ಲಮ್ಮನ ದ್ವಾರದಲ್ಲಿ ವರದಿಯಾಗಿದೆ.

ಮೃತನಿಗೆ ಕೊಡದೂರು ಗ್ರಾಮದ ಹಾವಪ್ಪ ತಂದೆ ಬಾಬುರಾವ್ ಕುಕ್ಕುಂದ್ (೨೫) ಎಂದು ಗುರುತಿಸಲಾಗಿದೆ.
ಹಾವಪ್ಪ ಕುಡಿತದ ಚಟಕ್ಕೆ ಅಂಟಿಕೊಂಡಿದ್ದ. ಪತ್ನಿಯೊಂದಿಗೆ ಆಗಾಗ ಜಗಳ ತೆಗೆಯುತ್ತಿದ್ದ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವ ಕುರಿತು ಬೆದರಿಕೆ ಹಾಕುತ್ತಿದ್ದ. ಪತ್ನಿ ತನ್ನ ತವರು ಮನೆ ಸೇಡಂಗೆ ಹೆರಿಗೆಗೆ ಹೋದಾಗಲೂ ಅಲ್ಲಿಗೆ ಹೋಗಿ ಪತ್ನಿಯೊಂದಿಗೆ ಜಗಳ ತೆಗೆಯುತ್ತಿದ್ದ ಎನ್ನಲಾಗಿದೆ.

Contact Your\'s Advertisement; 9902492681

ಕಳೆದ ನಾಲ್ಕು ದಿನಗಳ ಹಿಂದಷ್ಟೇ ಹಾವಪ್ಪನ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದಾಗ್ಯೂ, ಹಾವಪ್ಪ ಇಂತಹ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಈ ಕುರಿತು ಸೇಡಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here