24ಕ್ಕೆ ಕಲಬುರಗಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಆಚರಣೆ

0
74

ಕಲಬುರಗಿ: ಇಡೀ ವಿಶ್ವದಲ್ಲಿಯೇ ಅತ್ಯಂತ ಪ್ರಸಿದ್ಧ ಹಾಗೂ ಹೆಚ್ಚಿನ ಭಕ್ತರು ದರ್ಶನ ಪಡೆಯುವ ದೇವಾಲಯವೆಂದರೆ ತಿರುಪತಿ ತಿರುಮಲದ ವೆಂಕಟೇಶ್ವರ ದೇವಾಲಯ. ಶ್ರೀ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನದ ಅನೇಕ ಸೇವೆಗಳಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸೇವೆಯೂ ಒಂದು.  ಪ್ರತಿದಿನವು ತಳಿರು ತೋರಣ ಕಟ್ಟಿ ಮುಂಜಾನೆ ಶ್ರೀನಿವಾಸ ಮತ್ತು ಭೂದೇವಿ, ಶ್ರೀದೇವಿಯವರ ಮದುವೆ ಜರುಗುವುದು ಪರಂಪರೆ ಇದನ್ನೆ ಶ್ರೀನಿವಾಸ ಕಲ್ಯಾಣೋತ್ಸವ ಎಂದು ಪ್ರಸಿದ್ಧಿಪಡೆದಿದೆ ಎಂದು ಶ್ರೀ ಪವನಜಿ ಮಹಾರಾಜ ತಿಳಿಸಿದರು.

ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಯಲ್ಲಿ ಮಾತನಾಡಿ ಬಡವರು, ಅಸಹಾಯಕರು ತಿರುಪತಿಗೆ ಹೋಗಿ ದೇವರ ದರ್ಶನ ಪಡೆಯಲಾಗದವರಿಗೆ ದರ್ಶನಭಾಗ್ಯ ಕಲ್ಪಿಸಲು ತಿರುಪತಿ ತಿರುಮಲ ದೇವಸ್ಥಾನ ಮಂಡಳಿಯವರು ಭಕ್ತರ ಕೋರಿಕೆಯ ಮೆರೆಗೆ ಈ ಶ್ರೀನಿವಾಸ ಕಲ್ಯಾಣವನ್ನು ತೊರುಪತಿ ಕ್ಷೇತ್ರದ ಹೊರಗಡೆಯೂ ಕೂಡ ಈ ಸೇವೆಯನ್ನು ಮಾಡಲು ಅನುಮತಿ ಕೊಡುವವರು. ಈ ಸೇವೆಗೆ ಇಚ್ಛೆಯುಳ್ಳ ಭಕ್ತರು ಮೊದಲೆ ಅರ್ಜಿಸಲ್ಲಿಸಬೇಕಾಗುತ್ತದೆ. ಕೆಲವರಿಗೆ ಅರ್ಜಿಸಲ್ಲಿಸಿದ ಹತ್ತು ವರ್ಷ ಇಲ್ಲವೇ ಐದು ವರ್ಷಕ್ಕೆ ಅನುಮತಿ ದೊರೆಯು ಸಾಧ್ಯತೆ ಇರುತ್ತದೆ. ಕಲಬುರಗಿ ಜನರ ಅದೃಷ್ಟವೆಂಬಂತೆ ಈ ಅನುಮತಿಯು ಕೇವೆಲ ಎರಡು ವರುಷದಲ್ಲಿಯೇ ಸಿಕ್ಕಿದೆ.

Contact Your\'s Advertisement; 9902492681

ಕಲಬುರಗಿಯ ಹಿರಿಯ ಉದ್ಯಮಿ ಮತ್ತು ಶ್ರೀ ವೆಂಕಟೇಶ್ವರ ಸ್ವಾಮಿಯ ಭಕ್ತರಾದ ಫಾರ್ಚೂನ ಜೀಯೋಫೋನಿಕ್ಸ್ ಕಂಪನಿಯ ಮಾಲೀಕರಾದ ಶ್ರೀ ಸಂಜೀವ ಲಕ್ಮೀನಾರಾಯಣ ಗುಪ್ತಾರವರು ಸಲ್ಲಿಸಿದ ಅರ್ಜಿಗೆ ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಿಳಿಯುವರು ಸ್ಥಳ ಪರೀಕ್ಷೆ, ವ್ಯವಸ್ಥಾಪನಾ ಸಾಮರ್ಥ್ಯಗಳನ್ನು ಪರೀಶಿಲಿಸಿ ಕಲಬುರಗಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಸಲು ಅನುಮತಿ ಕೊಟ್ಟಿರುತ್ತಾರೆ.

ಇದೇ ನವ್ಹೆಂಬರ್ 24 ರಂದು ಸಂಜೆ 5:30ಕ್ಕೆ ಈ ಕಾರ್ಯಕ್ರಮ ನಗರದ ಎನ್.ವ್ಹಿ. ಮೈದಾನದಲ್ಲಿ ಜರುಗುವುದು ಇದಕ್ಕಾಗಿ ಈಗಾಗಲೇ ಶ್ರೀನಿವಾಸ ಕಲ್ಯಾಣೋತ್ಸವ  ಸಮಿತಿ ರಚಿಸಿದ್ದು ಇದರಲ್ಲಿ ಸುಮಾಋಉ ೧೪ ಸಮಿತಿ ರಚಿಸಿ ಸುಮಾರು ೨೦೦೦ ಜನ ಸ್ವಯಂ ಇಚ್ಛೆಯಿಂದ ದೇವರ ಸೇವೆಗೆ ದುಡಿಯುತ್ತದ್ದಾರೆ. ಎನ್.ವ್ಹಿ. ಮೈದಾನದಲ್ಲಿ ಸುಮಾಋಉ ೨೦,೦೦೦ ಜನ ಕುಳಿತುಕೊಳ್ಳುವಂತೆ ಬೃಹತ ಪೆಂಡಾಲುಗಳ ವ್ಯವಸ್ಥೆ ಮಾಡಲಾಗುವುದು. ಈ ಸಮಾರಂಭಕ್ಕೆ ಬರುವ ಎಲ್ಲರಿಗೂ ಉಚಿತ ಪಾಸಗಳನ್ನು ವಿತರಿಸುವ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಈಗಾಗಲೇ ೧೬೦೦೦ ಪಾಸಗಳನ್ನು ವಿತರಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಕಲಬುರಗಿಯ ಎಲ್ಲ ಮಹಾಜನರು ಉಚಿತ ಪಾಸಗಳ ತೆಗೆದುಕೊಂಡು ದರುಶನ ಪಡೆಯಬೇಕೇಂದು ಸಮಿತಿ ಕೊರುತ್ತದೆ.

ದರುಶನಕ್ಕೆ ಬಂದ ಭಕ್ತಾದಿಗಳಿಗೆ ಲಡ್ಡು, ಗೋವಿಂದನಾಮಾವಳಿ ಮತ್ತು ಭಗವದ್ಗಿತೆ ಪುಸ್ತಕದ ಜೊತೆಗೆ ಪ್ರಸಾದವನ್ನು ಕೊಡಲಾಗುವುದು. ಪಾಸ್ ಸ್ವೀಕರಿಸಿದ ಎಲ್ಲ ಭಕ್ತರು ಕಾರ್ಯಕ್ರಮಕ್ಜಕೆ ಮುಂಚಿತವಾಗಿ ಅಂದರೆ ೫:೦೦ ಗಂಟೆಯ ಒಳಗಡೆ ಬಂದು ತಮ್ಮ ಸ್ಥಳದಲ್ಲಿ ಆಸೀನರಾಗಬೇಕೆಂದು ಕೇಳಿಕೊಳ್ಳುತ್ತೇವೆ. ಈ ಕಾರ್ಯಕ್ರಮಕ್ಕೆ ಶರಣಬಸವೇಶ್ವರ ಸಂಸ್ಥಾನದ ೮ನೇ ಪೀಠಾಧೀಪತಿಗಳಾದ ಶ್ರೀ ಶರಣಬಸವಪ್ಪಾ ಅಪ್ಪಾ, ಕೋಟನೂರು ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು, ಮತ್ತು ಶಾಸಕರು, ಸಂಸದರು, ಸೇರಿ ಸುಮಾರು ೨೦೦೦೦ ಜನರು ಆಗಮಿಸುವ ನಿರೀಕ್ಷೆ ಇದೆ.

ಈ ಕಾರ್ಯಕ್ರಮಕ್ಕೆ ಶ್ರೀ ಸಂಜಿವ ಎಲ್. ಗುಪ್ತಾ ಪರಿವಾರದವರೇ ಎಲ್ಲ ಖರ್ಚುವೆಚ್ಚುಗಳ ನಿವೃಹಣೆಯನ್ನು ನೋಡಿಕೊಳ್ಳಲಿದ್ದಾರೆ. ಅದರ ಜೊತೆಗೆ ಸಮಿತಿಯ ಎಲ್ಲ ಸದಸ್ಯರು ತನುಮನದ ಸೇವೆ ಸಿದ್ಧರಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಲಬುರಗಿಯ ಎಲ್ಲ ಸಮಾಜ, ವೈಶ, ಬ್ರಾಹ್ಮಣ, ಮಾರವಾಡಿ, ಜೈನ, ವೀರಶೈವ ಸಮಾಜದ ಎಲ್ಲ ಮುಖಂಡರು, ಭಕ್ತಾದಿಗಳುಸೇವೆಸಲ್ಲಿಸುತ್ತದ್ದಾರೆ. ಇನ್ನೂ ಮೂರು  ದಿನ ಬಾಕಿ ಉಳಿದಿದ್ದು ಇಚ್ಚೆಯುಳ್ಳ ಭಕ್ತಾದಿಗಳಿಗೆ ಉಚಿತ ಪಾಸ ವಿತರಿಸುವ ವ್ಯವಸ್ಥಯನ್ನು ಮಾಡಲಾಗಿದೆ.

ಶ್ರೀ ಶರಣು ಮೋದಿ , ಸಂಜಿವ ಎಲ್. ಗುಪ್ತಾ, ಶ್ರೀಮತಿ ಮಂಜುಳಾ ಎಸ್. ಗುಪ್ತಾ, ಭರತ ಗುಪ್ತಾ, ಡಾ.ವೇಣುಗೋಪಾಲ ಮಂತ್ರಿ, ಡಾ. ಶಿವರಾಜ ಪಾಟೀಲ, ಡಾ.ವಿರೇಶ ಸಲಗರ, ಡಾ. ರಶ್ಮಿ ಸಲಗರ, ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here