ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶಾಲಾ ಕಾಲೇಜುಗಳಲ್ಲಿ ’ವಾಟರ್ ಬೆಲ್ ಕಾನ್ಸೆಪ್ಟ್’: ಅವ್ವಾಜೀ

0
132

ಕಲಬುರಗಿ: ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾತೋಶ್ರೀ ದಾಕ್ಷಾಯಿಣಿ ಅವ್ವನವರ ೪೯ನೇ ಜನ್ಮದಿನದ ಪ್ರಯುಕ್ತ ವಿದ್ಯಾವರ್ಧಕ ಸಂಘದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಕೇರಳ ಸರ್ಕಾರ ಅನುಷ್ಠಾನಗೊಳಿಸಿದ ’ವಾಟರ್ ಬೆಲ್ ಕಾನ್ಸೆಪ್ಟ್’ವನ್ನು ಜನ್ಮದಿನದ ಸ್ಮರಣಾರ್ಥವಾಗಿ ಪ್ರಥಮಬಾರಿಗೆ ಆರಂಭಿಸಲಾಗುತ್ತದೆ.

ಕೇರಳ ಸರ್ಕಾರದ ವಾಟರ್ ಬೆಲ್ ಪರಿಕಲ್ಪನೆಯನ್ನು ಪರಿಚಯಿಸುವ ಉದ್ದೇಶದಿಂದ ಸ್ವತಃ ಅವ್ವಾಜೀಯವರು ಸಂಘದ ಎಲ್ಲಾ ಶಾಲಾ ಕಾಲೇಜುಗಳು ಈ ಪರಿಕಲ್ಪನೆಯನ್ನು ಅನುಸರಿಸಬೇಕು. ಮಕ್ಕಳು ಬಾಟಲಗಳಲ್ಲಿ ತರುವ ನೀರು ಸಂಪೂರ್ಣವಾಗಿ ಕುಡಿಯುವಂತೆ ಶಿಕ್ಷಕರು ಗಮನಹರಿಸುವ ಮೂಲಕ ಕಾಳಜಿ ವಹಿಸಬೇಕು. ಪ್ರತಿದಿನ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸುವದರಿಂದ ಸದೃಢ ಆರೋಗ್ಯ ಹೊಂದುತ್ತಾರೆ. ಈಗಾಗಲೇ ವಿದ್ಯಾವರ್ಧಕ ಸಂಘದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಬಳಕೆಯನ್ನು ಸಶಕ್ತಗೊಳಿಸಿದೆ ಎಂದು ಮಾತೋಶ್ರೀ ಅವ್ವಾಜೀಯವರು ತಿಳಿಸಿದರು.

Contact Your\'s Advertisement; 9902492681

ಸಂಘದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಾಟರ್ ಬೆಲ್ ಪರಿಕಲ್ಪನೆಯನ್ನು ಪರಿಚಯಿಸುವ ಮಾತೋಶ್ರೀ ಅವ್ವಾಜೀಯವರ ನಿರ್ಧಾರವನ್ನು ಶರಣಬಸವೇಶ್ವರ ಸಂಸ್ಥಾನದ ೮ನೇ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾರವರು ಶ್ಲಾಘಿಸಿ, ಸ್ವಾಗತಿಸಿದ್ದಾರೆ.

ಪ್ರತಿದಿನ ಮೂರು ಬಾರಿಯಂತೆ ಬೆಳಿಗ್ಗೆ ೧೦.೩೦ ಹಾಗೂ ಮಧ್ಯಾಹ್ನ ೧೨ ಹಾಗೂ ೩ ಗಂಟೆಗೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ನೀರು ಕುಡಿಯುವುದಕ್ಕೆ ಅವಕಾಶ ಮಾಡಿಕೊಡಲಾಗುವದು ಹಾಗೂ ಇದರ ಕುರಿತು ಶಿಕ್ಷಕರು ಗಮನವಹಿಸಬೇಕು. ಶಿಕ್ಷಣ ಸಂಸ್ಥೆಗಳಲ್ಲಿಯ ಎಲ್ಲಾ ಶೌಚಾಲಯಗಳನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here