ಕಲಬುರಗಿ: ನವೆಂಬರ್ 19 ರಿಂದ 25 ರವರೆಗೆ ರಾಷ್ಟ್ರೀಯ ಐಕ್ಯತಾ ಸಪ್ತಾಹ ಪ್ರಯುಕ್ತ ಹಾಗೂ ರಾಷ್ಟ್ರೀಯ ಐಕ್ಯತಾ ದಿನದ ಹಿನ್ನೆಲೆಯಲ್ಲಿ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಮೊದಲನೇ ದಿನವಾದ ಮಂಗಳವಾರದಂದು ಕಾರಾಗೃಹದ ಅಧೀಕ್ಷಕ ಡಾ. ಐ.ಜೆ. ಮ್ಯಾಗೇರಿ ಅವರು ಕಾರಾಗೃಹದ ಎಲ್ಲ ಸಿಬ್ಬಂದಿಗಳಿಗೆ ಐಕ್ಯತಾ ಪ್ರಮಾಣ ವಚನ ಬೋಧಿಸಿದರು.
ನಂತರ ಅವರು ರಾಷ್ಟ್ರೀಯ ಐಕ್ಯತಾ ದಿನದ ಉದ್ದೇಶ ಕುರಿತು ಮಾತನಾಡಿ, ನಾವೆಲ್ಲರೂ ದೇಶದಲ್ಲಿ ನಡೆಯುತ್ತಿರುವ ಹಿಂಸೆ, ಕೋಮು ಗಲಭೆ, ಭ್ರಷ್ಟಾಚಾರ ಇತ್ಯಾದಿಗಳನ್ನು ತಡೆಗಟ್ಟಬೇಕು ಹಾಗೂ ರಾಷ್ಟದ ಹಿತಾಶಕ್ತಿಗನುಗುಣವಾಗಿ ಅಹಿಂಸೆ, ಸೌಹಾರ್ದತೆ ಜಾತ್ಯಾತೀತತೆಯನ್ನು ತಮ್ಮಲ್ಲಿ ಬೆಳೆಸಿಕೊಳ್ಳಬೇಕೆಂದರು.
ಈ ಸಮಾರಂಭದಲ್ಲಿ ಕಾರಾಗೃಹದ ಕಚೇರಿ ಅಧೀಕ್ಷಕ ರಾಜ್‌ಆಹ್ಮದ್ ಧಂದರಗಿ ಹಾಗೂ ಎಲ್ಲಾ ಜೈಲರ್ ವೃಂದದವರು ಭಾಗವಹಿಸಿದರು. ಗೋಪಾಲಕೃಷ್ಣ ಕುಲ್ಕರ್ಣಿ ಸ್ವಾಗತಿಸಿದರು. ಸುನಂದಾ ಜೈಲರ್ ವಂದಿಸಿದರು. ಶಿಕ್ಷಕ ನಾಗರಾಜ ಮೂಲಗೆ ಕಾರ್ಯಕ್ರಮ ನಿರೂಪಿಸಿದರು.