ವಿಮಾನ ನಿಲ್ದಾಣ ಉದ್ಘಾಟನೆಯಾಗುತ್ತಿರುವುದು ಸಂತಸ: ಡಾ. ಉಮೇಶ ಜಾಧವ

0
73

ಕಲಬುರಗಿ: ವಿಮಾನ ನಿಲ್ದಾಣ ಉದ್ಘಾಟನೆಯಾಗುತ್ತಿರುವುದು ಸಂತಸ ತಂದಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಎಲ್ಲರೂ ಸೇರಿ ಯಶಸ್ವಿಗೊಳಿಸಬೇಕು ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಅವರು ಕರೆ ನೀಡಿದ್ದಾರೆ

ವಿಮಾನನಿಲ್ದಾಣದಲ್ಲಿ ಕಾರ್ಯಕ್ರಮಗಳ ಸಿದ್ಧತೆಗಳ ಪರಿಶೀಲನೆ ನಡೆಸಿದ ಬಳಿಕ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಮಾಜಿ ಸಂಸದರು, ಮಾಜಿ ಶಾಸಕರು ಸೇರಿದಂತೆ ಎಲ್ಲರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಒಂದು ವೇಳೆ ಯಾರಿಗಾದರೂ ಆಹ್ವಾನ ಪತ್ರಿಕೆ ತಲುಪಿರದಿದ್ದಲ್ಲಿ, ದಯವಿಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.

Contact Your\'s Advertisement; 9902492681

ವಿಮಾನಗಳ ಹಾರಾಟದಿಂದ ಜನಸಾಮಾನ್ಯರಿಗೆ ಅನುಕೂಲವಾಗುವುದಲ್ಲದೆ, ವಿಶ್ವವಿದ್ಯಾಲಯಗಳು, ಆಸ್ಪತ್ರೆ, ಸಿಮೆಂಟ್ ಫ್ಯಾಕ್ಟರಿಗಳು ಮುಂತಾದ ಕಾರ್ಖಾನೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ದೂರದ ತಮ್ಮ ಊರುಗಳಿಗೆ ಹೋಗಿ ಬರಲು ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಸ್ಟಾರ್ ಏರ್ ಈಗ ಹಾರಾಟ ನಡೆಸಲಿದೆ. ಇನ್ನು ಕೆಲ ವಿಮಾನಯಾನ ಸಂಸ್ಥೆಗಳು ಹಾರಾಟ ಮಾಡಲು ಉದ್ದೇಶಿಸಿವೆ. ಆರು ತಿಂಗಳಲ್ಲಿ ಸಾಕಷ್ಟು ವಿಮಾನಗಳ ಹಾರಾಟಕ್ಕೆ ಕ್ರಮವಹಿಸಲಾಗುವುದು ಎಂದು ಅವರು ಹೇಳಿದರು.
ವಿಮಾನ ನಿಲ್ದಾಣಕ್ಕೆ ಯಾವ ಹೆಸರಿಡಬೇಕು ಎಂಬ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬಸವರಾಜ ಮುತ್ತಿಮೂಡ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಮಾಜಿ ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ, ಎಐ ಇಂಜಿನಿಯರ್ ಹೆಚ್. ಎಸ್. ಚೆನ್ನೈನ ರೀಜನಲ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆರ್ ಮಾಧವನ್, ಜನರಲ್ ಮ್ಯಾನೇಜರ್(ಇಂಜಿನಿಯರಿಂಗ್) ರಾಜೀವ್ ರಾಜಕುಮಾರ್, ಹೈದ್ರಾಬಾದ್‌ನ ಜನರಲ್ ಮ್ಯಾನೇಜರ್ ಪಟ್ಟಾಭಿ, ಸಿಕಿಂದರಾಬಾದ್‌ನ ಜನರಲ್ ಮ್ಯಾನೇಜರ್ ವೆಂಕಟೇಶ್ವರಲು, ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕರಾದ ಜ್ಞಾನೇಶ್ವರರಾವ್ ಮುಂತಾದವರು ಹಾಜರಿದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here