ಕಲಬುರಗಿ: ಕನ್ನಡ ಸಾಹಿತ್ಯಕ್ಕೆ ಒಂದು ಗಟ್ಟಿತನ ತರಲು ತನ್ನದೇ ಆದ ಪಾತ್ರವನ್ನು ನಿರ್ವಹಿಸಿರುವ ಜಾನಪದ ಸಾಹಿತ್ಯವು, ಕೇವಲ ಕಾಲ್ಪನಿಕ ಸಾಹಿತ್ಯವಾಗಿರದೇ, ಜನಸಾಮಾನ್ಯರ ಅನುಭವದ ಭಂಡಾರ ಸಾಹಿತ್ಯ ಮತ್ತು ಜೀವನದ ಅವಿಭಾಜ್ಯ ಅಂಗವಾಗಿದೆ. ಇದರ ಅಧ್ಯಯನದಿಂದ ನಮ್ಮ ದೇಶದ ಮೂಲ ಸಂಸ್ಕೃತಿ ಅರಿತು ವ್ಯಕ್ತಿತ್ವ ವಿಕಸನವಾಗುತ್ತದೆಯೆಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಅಬಿಮತ ವ್ಯಕ್ತಪಡಿಸಿದರು.
ಅವರು ನಗರದ ಎಸ್.ಪಿ.ಕಚೇರಿ ಸಮೀಪದಲ್ಲಿರುವ ’ಬಾಲಕಿಯರ ಸರ್ಕಾರಿ ಪಿಯು ಕಾಲೇಜ್’ನಲ್ಲಿ ’ಕಜಾಪ ಜಿಲ್ಲಾ ಘಟಕ’ವು ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ’ಯುವಕರ ನಡೆ, ಜಾನಪದ ಕಡೆ’ ವಿಶೇಷ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಷತ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ, ನಶಿಸಿ ಹೋಗುತ್ತಿರುವ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕಾದದ್ದು ಇಂದಿನ ಯುವ ಪೀಳಿಗೆಯ ಮೇಲಿದೆ ಜೊತೆಗೆ ಇದರ ತುರ್ತು ಅಗತ್ಯವಾಗಿದೆ. ಇದರಿಂದ ದೇಶಿ ಸಂಸ್ಕೃತಿ ಮತ್ತು ನಮ್ಮತನದ ರಕ್ಷಣೆ ಸಾಧ್ಯವಾಗುತ್ತದೆಯೆಂದರು.
ಕಾಲೇಜಿನ ಪ್ರಾಂಶುಪಾಲ ಶುಭಾಶ್ಚಂದ್ರ ಮಾತನಾಡಿ, ಜಾನಪದವು ಸಂಸ್ಕ್ರತಿ,ಕಲೆ,ಜೀವನ,ಆಡುಭಾಷೆ,ಪರಂಪರೆ ಒಳಗೊಂಡಿದೆ.ಜನಸಾಮಾನ್ಯರು ಅನುಭವಿಸಿ,ಅವರಿಂದ ಹೊರಹೊಮ್ಮಿದ ಸಾಹಿತ್ಯವಾಗಿದೆ.ಇದು ಪರಂಪರಾಗತ ವಿಷಯಗಳನ್ನು ಪ್ರತೇಕಿಸಿಕೊಂಡು ತನ್ನ ಅಧ್ಯಯನದ ವ್ಯಾಪ್ತಿಗೆ ಒಳಪಡಿಸಿಕೊಳ್ಳತ್ತದೆಯೆಂದು ನುಡಿದರು.
ಕಾಲೇಜಿನ ವಿದ್ಯಾರ್ಥಿನಿಯರು ಜಾನಪದ ಗೀತೆಗಳನ್ನು ಹಾಡಿದರು. ಕಜಾಪ ತಾಲೂಕಾ ಅಧ್ಯಕ್ಷ ಚನ್ನವೀರ ಕಣ್ಣಿ, ನಾಲವಾರ ಆದ್ಯಕ್ಷ ರಾಜೇಂದ್ರ ಕೊಲ್ಲೂರ, ಕಲಾವಿ ದುಂಡಪ್ಪ ಕೊಲ್ಲೂರ, ಉಪನ್ಯಾಸಕರಾದ ಶ್ರೀದೇವಿ ಭಾವಿದೊಡ್ಡಿ, ಎಸ್.ಎನ್.ಕಮತಗಿ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.