ಕಲಬುರಗಿ: ಕೃಷಿ ಔಷದಿ ಮುಗಿದರು ಡೆಟ ಡಿಬಾರ್ ಆಗಿದ್ದ ಕಳಪೆ ಔಷಧಿಗಳು ಮಾರಾಟ ಹಾಗೂ ವಿವಿಧ ಕಂಪೆನಿಗಳು ಕಳಪೆ ಮಟ್ಟದ ಔಷಧಿಗಳು ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ಆಗ್ರಹಿಸಿದರು.
ಇಂದು ನಗರದ ಜಿಲ್ಲಾ ಪಂಚಾಯತ್ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಕೃಷಿಗಾಗಿ ಬಳಸುವ ಔಷಧಿ ಡೆಟ ಡಿಬಾರ್ ಆಗಿದ್ದು ಕಳಪೆ ಔಷಧಿಗಳು ಮಾರಾಟ ನಡೆದಿರುವುದರಿಂದ ನಿರಾವಾರಿ ಬೆಳೆಗಳು ತರಕಾರಿ, ತೋಗರಿ ಎಣ್ಣೆ ಹೋಡಿಯುತ್ತಿದ್ದಾರೆ. ರೈತರಿಗೆ ಕಳಪೆ ಔಷಧಿ ಕಾರಬೊ ಪೂರಾನ ಕಂಪೆನಿ ಮತ್ತು ಮೋನೊ ಕ್ರೋಟೊ ಪ್ರೊಸ ಕಂಪೆನಿಗಳು ಸೇರಿದಂತೆ ಇನ್ನೂ ಅನೇಕ ಕಳಪೆ ಔಷಧಿಗಳು ಹೊಂದಿದ ಕಂಪೆನಿಗಳು ವಿರುದ್ಧ ತನಿಖೆ ನಡೆಸಿ ಕಂಪೆನಿ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ಕೈಗೊಳಬೇಕೆಂದು ಅವರು ಪ್ರತಿಭಟನೆಯಲ್ಲಿ ಒತ್ತಾಯಿಸಿದರು.
ರೈತರಿಗೆ ಮೋಸ ಮಾಡುವ ಕಂಪೆನಿಗಳನ್ನು ಸೀಜ್ ಮಾಡಿ ಔಷಧಿಗಳ ಬಗ್ಗೆ ರೈತರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸಬೇಕೆಂದು ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆ ಮುಖಂಡರು ಸೇರಿದಂತೆ ರೈತರು ಇದ್ದರು.