ಕಲಬುರಗಿ: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಟಾರ್ ಏರ್ ಸಂಸ್ಥೆಯ OG-117 ಸಂಖ್ಯೆಯ 50 ಸೀಟರ್ ವಾಣಿಜ್ಯ ವಿಮಾನದಿಂದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಂದಿಳಿದರು.
ಕಲಬುರಗಿ ವಿಮಾನ ನಿಲ್ದಾಣಕ್ಕೆ ಪ್ರಥಮ ವಾಣಿಜ್ಯ ಸಂಚಾರವಾಗಿ ವಿಮಾನ ಭೂಸ್ಪರ್ಶ ಮಾಡುತ್ತಿದಂತೆ ನೀರು ಚಿಮ್ಮುವ ಮೂಲಕಪ ಪ್ರಯಾಣಿಕರಿಗೆ ವಾಟರ್ ಸಲ್ಯೂಟ್ ನೀಡಿದ್ದು ವಿಶೇಷವಾಗಿತ್ತು.
ಇದೇ ಸಂದರ್ಭದಲ್ಕಿ ಪೋಲೀಸರಿಂದ ಮುಖ್ಯಮಂತ್ರಿಗಳಿಗೆ ಗೌರವ ರಕ್ಷೆ ಸಲ್ಲಿಸಲಾಯಿತು. ವಾಣಿಜ್ಯ ವಿಮಾನದ ಪ್ರಥಮ ಸಂಚಾರದಲ್ಲಿಯೆ ಮುಖ್ಯಮಂತ್ರಿಗಳ ಪ್ರಯಾಣ. ಸ್ಟಾರ್ ಎರ್ ಸಂಸ್ಥೆಯ OG-118 ವಿಮಾನದ ಮೂಲಕವೆ ಬೆಂಗಳೂರಿಗೆ ಸಿ.ಎಂ. ಹಿಂದಿರುಗಲಿದ್ದಾರೆ.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪಸುಸಂಗೋಪನಾ ಸಚಿವ ಪ್ರಬು ಚವ್ಹಾಣ, ಸಂಸದ ಡಾ.ಉಮೇಶ ಜಾಧವ,ಬೀದರ ಸಂಸದ ಭಗವಂತ ಖೂಬಾ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ವಿಧಾನಸಭೆ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ಎಂ.ವೈ.ಪಾಟೀಲ, ಸುಭಾಷ ಗುತ್ತೆದಾರ, ಅವಿನಾಶ ಜಾಧವ, ವಿಧಾನ ಪರಿಷತ್ತಿನ ಶಾಸಕ ಬಿ.ಜಿ.ಪಾಟೀಲ, ತಿಪ್ಪಣಪ್ಪ ಕಮಕನುರ, ಮಾಜಿ ಶಾಸಕರಾದ ಮಾಲಿಕಯ್ಯ ಗುತ್ತೆದಾರ, ಬಾಬುರಾವ ಚಿಂಚನಸೂರು, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮಾಜಿ ಎಂ.ಎಲ್.ಸಿ. ಶಶೀಲ ಜಿ.ನಮೋಶಿ, ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ ಸಿಂಗ್ ಖರೀಲಾ, ಏಎಐ ಪ್ರಾಧಿಕಾರ ಅಧ್ಯಕ್ಷ ಅರವಿಂದ ಸಿಂಗ್, ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಪಿಲ ಮೋಹನ, ಕೆ.ಎಸ್.ಎಸ್.ಐ.ಡಿ.ಸಿ ವ್ಯವಸ್ಥಾಪಕ ನಿರ್ದೇಶಕ ಗಂಗಾರಮ ಬಡೇರಿಯಾ, ಆರ್.ಸಿ. ಸುಬೋಧ ಯಾದವ, ಐಜಿಪಿ ಮನೀಷ್ ಖರ್ಬಿಕರ್, ಡಿಸಿ ಬಿ.ಶರತ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಬಿ.ಎನ್.ನಾಗರಾಜ, ಎಸ್.ಪಿ. ವಿನಾಯಕ ಪಾಟೀಲ ಸೇರಿದಂತೆ ಚುನಾಯಿತ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡರು.