ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ಮೀಸಲಿಡುತ್ತೇನೆ: ಸಿಎಂ ಬಿ.ಎಸ್.ವೈ

0
142

ಕಲಬುರಗಿ: ಕಲ್ಯಾಣ ಕರ್ನಾಟಕ ಶರಣರ ಭೂಮಿ ಇಲ್ಲಿ ಅಭಿವೃದ್ಧಿ ಯ ಶಕೆ ಪ್ರಾರಂಭವಾಗಲಿ ಅಂತಾ 2008 ರಲ್ಲಿ ವಿಮಾನ ನಿಲ್ದಾಣ ಶಂಕು ಸ್ಥಾಪನೆ ಮಾಡಿದೆ ಎಂದು ನೆನಪ್ಪುಗಳ ಬುತ್ತಿ ಮೇಲಾಕಿ, ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅನಿವಾರ್ಯ ಕಾರಣದಿಂದ ಬರೋದಕ್ಕೆ ಆಗಿಲ್ಲ ಎಂದು ತಿಳಿಸಿದರು.

ಇಂದು ಕಲಬುರಗಿ ವಿಮಾನ ನಿಲ್ದಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಈ ಭಾಗದ ಜನರ ಪರವಾಗಿ ಪ್ರಧಾನಿ ಮೋದಿ ಗೆ ಅಭಿನಂದನೆ ಸಲ್ಲಿಸಿದ ಬಿ ಎಸ್ ವೈ, ಅಭಿವೃದ್ಧಿ ಯ ಹೊಸ ಅದ್ಯಾಯ ಪ್ರಾರಂಭವಾಗ್ತಿದೆ, ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆ ಆಗಿದೆ, ಬೆಂಗಳೂರು ನಂತರ ಹೆಚ್ಚಿನ ಉದ್ದದ ರನ್ ವೆ ಕಲಬುರಗಿ ವಿಮಾನ ನಿಲ್ದಾಣ ಹೊಂದಿದೆ ಎಂದರು.

Contact Your\'s Advertisement; 9902492681

ಕಲಬುರಗಿ ಜಿಲ್ಲೆಗೆ ಏನು ಅಭಿವೃದ್ಧಿ ಆಗಬೇಕು ಅದನ್ನ ಚಾಚು ತಪ್ಪದೆ ಮಾಡ್ತೆನೆ, ಈ ಭಾಗವನ್ನ ಮುನ್ನಲೆಗೆ ತರೋದಕ್ಕೆ ಪ್ರಯತ್ನ ಮಾಡ್ತೆನೆ, ಕಲ್ಯಾಣ ಕರ್ನಾಟಕ ಮರುನಾಮಕರಣ ಮಾಡೋದ್ರ ಮೂಲಕ ನಿಜಾಮನ ಕಹಿ ನೆನಪು ಮರೆಸುವಂತಾಗಿದೆ, ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ಮೀಸಲಿಡುತ್ತೇನೆ ಎಂದರು.

ರೈತರಿವೆ ಎರಡು ಸಾವಿರ ಮೊದಲ ಕಂತು ಬಿಡುಗಡೆ ಮಾಡಿದ್ದೆನೆ , ಡಿಸೆಂಬರ್ ನಲ್ಲಿ ಎರಡನೆ ಕಂತು ಎರಡು ಸಾವಿರ ಬಿಡುಗಡೆ ಮಾಡ್ತೇನೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here