ಮಾನವಿಯತೆ ಮೆರೆದ ಶಾಸಕ ದತ್ತಾತ್ರೆಯ ಪಾಟೀಲ ರೇವೂರ

0
198

ಕಲಬುರಗಿ: ನಾಡಿನ ಹಿರಿಯ ಬಂಡಾಯ ಸಾಹಿತಿ ಡಾ. ಚೆನ್ನಣ್ಣ ವಾಲಿಕಾರ ಅವರ ಅನಾರೊಗ್ಯದ ವಿಷಯ ತಿಳಿಯುತ್ತಲೆ, ತಮ್ಮ ಖಾಸಗಿ ಸಭೆಯನ್ನು ಮೊಟಕುಗೊಳಿಸಿ ನಗರದ ಸತ್ಯ ಆಸ್ಪತ್ರೆಗೆ ಶಾಸಕರು ದೌಡಾಯಿಸಿದರು.

ಡಾ.ವಾಲಿಕಾರ ಅವರ ಆರೊಗ್ಯ ವಿಚಾರಿಸಿದ ಅವರು, ಆಸ್ಪತ್ರೆಯ ಅಧಿಕಾರಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಮತ್ತು ವಿಶೇಷ ಗಮನ ಹರಿಸಲು ಕೋರಿದರು. ಡಾ.ವಾಲಿಕಾರ ಕುಟುಂಬದ ಸದಸ್ಯರಿಗೆ ಸಮಾಧಾನ ಪಡಿಸಿದ ಶಾಸಕರು, ಡಾ.ವಾಲಿಕಾರ ಅವರಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಕುಟುಂಬವರು ಮುಂದಾದರೆ ತಾವು ಸಹಾಯ ಮಾಡುವುದಾಗಿ ತಿಳಿಸಿದರು.

Contact Your\'s Advertisement; 9902492681

ಯಾವುದಕ್ಕೂ ತಮ್ಮ ಜೊತೆ ನಿರಂತರ ಸಂಪಕ೯ದಲ್ಲಿರಲು ಇರಲು ಕುಟುಂಸ್ಥರಿಗೆ ಹೇಳಿದರು. ಶಾಸಕರ ಜೊತೆಗೆ ಕನ್ನಡ ಅಭಿವೃಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಸಾಹಿತಿ ಶಿವರಂಜನ ಸತ್ಯಂಪೇಟೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here