ಜಗತ್ತಿನಲ್ಲಿ ಭಾರತೀಯ ‘ಚಿತ್ರಕಲೆ’ ಮಹತ್ವ ಪಡೆದುಕೊಂಡಿದೆ: ಬಸವರಾಜ ಉಪ್ಪಿನ

0
90

ಕಲಬುರಗಿ: ಚಿತ್ರಕಲೆಯು ನಮ್ಮ ಜೀವನಕ್ಕೆ ಹೆಚ್ಚು ನೆಮ್ಮದಿ ಕೊಡುತ್ತಿದ್ದು, ಅದು ಇನ್ನೊಬ್ಬರನ್ನು ಚಿಂತನೆಗೆ ಹಚ್ಚುವುದರೊಂದಿಗೆ ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ ಎಂದು ಹಿರಿಯ ಚಿತ್ರಕಲಾವಿದ ಬಸವರಾಜ ಉಪ್ಪಿನ ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನ ಸಹಾಯದೊಂದಿಗೆ ರವಿವಾರ ನಗರದ ಕಲಾ ಮಂಡಳದಲ್ಲಿ ನಡೆದ ಚಿತ್ರಕಲಾವಿದ ಡಾ.ಸುಬ್ಬಯ್ಯಾ ಎಂ.ನೀಲಾ ಅವರ ಏಕವ್ಯಕ್ತಿ ಚಿತ್ರಕಲೆಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Contact Your\'s Advertisement; 9902492681

ಅತಿಥಿಯಾಗಿದ್ದ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಸಾಂಪ್ರದಾಯಿಕ ಮತ್ತು ಸಮಕಾಲೀನ ಚಿತ್ರಕಲೆಯನ್ನು ಮುಂದಿನ ತಲೆಮಾರಿಗೆ ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಯುವ ಪೀಳಿಗೆ ಮೇಲಿದೆ ಎಂದು ಹೇಳಿದ ಅವರು, ಈ ನಿಟ್ಟಿನಲ್ಲಿ ಕಲಾವಿದರಿಗೆ ಪ್ರೋತ್ಸಾಹಿಸುವ ಮೂಲಕ ಕಲೆಯನ್ನು ಉಳಿಸೋಣ ಎಂದು ಮಾರ್ಮಿಕವಾಗಿ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪ್ರಸಿದ್ಧ ಚಿತ್ರಕಲಾವಿದ ಮಹ್ಮದ್ ಅಯಾಜುದ್ದೀನ್ ಮಾತನಾಡಿ, ಚಿತ್ರಕಲೆ ಪುರಾತನ ಕಾಲದಿಂದ ಬಂದಿದ್ದು, ಪ್ರಸ್ತುತ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ನಿಟ್ಟಿನಲ್ಲಿ ಉತ್ತಮ ಕಲಾಕೃತಿಗಳು ರಚನೆಯಾಗುತ್ತಲಿವೆ. ಚಿತ್ರಕಲಾವಿದರಿಗೆ ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ನಡೆಯಲಿ ಎಂದರು.

ಸಾಹಿತಿ ಬಿ.ಹೆಚ್.ನಿರಗುಡಿ, ಪ್ರಾಧ್ಯಾಪಕ ಈ.ದೇವೀಂದ್ರಪ್ಪ, ಎಂ.ಸಂಜು ಮಾತನಾಡಿದರು. ಪ್ರಮುಖರಾದ ಪೂಜ್ಯ ಲಿಂಗರಾಜಪ್ಪ ಅಪ್ಪ, ಪಿ ಎಂ . ಮಣ್ಣೂರ, ಬಿ. ಕೆ.ಚಳಗೇರಿ, ಬಸವರಾಜ ಜಾನೆ, ಡಾ.ರೆಹಮಾನ್ ಪಟೇಲ್, ಶಾಂತಲಾ ನಿಷ್ಠಿ ಸೇರಿ ಅನೇಕ ಕಲಾವಿದರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here