ಬೆಂಗಳೂರು: ಮಾವೋಮ; ಚೆನ್ನಣ್ಣನ ಸಾವಿನಿಂದ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ. ಮಹತ್ವದ ದಲಿತ ಬರಹಗಾರರು, ಉತ್ತರ ಕರ್ನಾಟಕದ ಅದರಲ್ಲೂ ಹೈದ್ರಾಬಾದ್ ಕರ್ನಾಟಕದ ಮುಖ್ಯ ಧ್ವನಿ ಬಂಡಾಯದ ಯಾವುದೇ ಚಳುವಳಿಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಆತನಿಗೊಂದು ವಿಶಿಷ್ಟ ಸ್ಥಾನವಿದೆ. ಸಾಹಿತಿಯಾಗಿ, ಅತ್ಯುತ್ತಮ ಬರಹಗಾರನಾಗಿಯೂ ಬಂಡಾಯದ ಮುಖ್ಯ ಧ್ವನಿಯಾಗಿ ಅಂಥವರ ಸಾವಿನಿಂದ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ ಎಂದು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಶೋಕ ವ್ಯಕ್ತಪಡಿಸಿದ್ದಾರೆ.
ವ್ಯೋಮಾ ವ್ಯೋಮಾ ಎಂಬ ಮಹಾಕಾವ್ಯ 1030 ಪುಟ್ಟಗಳ ಯಾವುದೇ ಕಾಮ,ಪುಲ್‌ಪಾಯಿಂಟ್ ಪ್ಯಾರಾ, ಮುನ್ನುಡಿ, ಬೆನ್ನುಡಿ ಇಲ್ಲದೆ ಈ ಕಾವ್ಯ ಕನ್ನಡ ಸಾಹಿತ್ಯದ ಮಹತ್ವದ ಕೃತಿಯಾಗಿದ್ದು. ಅವರ ಸಾವಿನಿಂದ ದೇವರು ಅವರ ಕುಟುಂಬ ಮತ್ತು ಅವರ ಸಾಹಿತ್ಯ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರರ್ಥಿಸುತ್ತೇನೆ ಎಂದರು.