ಕಂದಾಯ ಇಲಾಖೆಯ 3 ಸಿಬ್ಬಂದಿಗಳ ಅಮಾನತು

0
353

ಕಲಬುರಗಿ: ಕಲಬುರಗಿ ವಿಭಾಗದ ಕಂದಾಯ ಇಲಾಖೆಯ ವ್ಯಾಪ್ತಿಯ ವಿವಿಧ ಕಚೇರಿಗಳಿಗೆ ನಿಯೋಜನೆ ಮೇಲಿದ್ದ ನೌಕರರನ್ನು ನಿಯೋಜನೆ ರದ್ದುಗೊಳಿಸಿ ಮೂಲ ಹುದ್ದೆಯಲ್ಲಿ ಕರ್ತವ್ಯಕ್ಕೆ ಹಾಜರಗಾಲು ಆದೇಶಿಸಿದ್ದರು ಸಹ ಮೂಲ ಹುದ್ದೆಯಲ್ಲಿ ಹಾಜರಾಗದೇ ಕರ್ತವ್ಯ ಲೋಪವೆಸಗಿದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಮೂರು ಸಿಬ್ಬಂದಿಗಳನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ್ ಅವರು ಬುಧವಾರ ಆದೇಶ ಹೊರಡಿಸಿದ್ದಾರೆ.

ಯಾದಗಿರಿ ಜಿಲ್ಲಾಧಿಕಾರಿಗಳ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಶಾಜಿಯಾ ಪರ್ವಿನ್ ಅವರನ್ನು ರಾಯಚೂರ ಜಿಲ್ಲಾಧಿಕಾರಿಗಳ ಕಚೇರಿಗೆ ದಿ.೧೩-೦೨-೨೦೧೩ರಂದು, ಯಾದಗಿರಿ ಜಿಲ್ಲೆಯ ಶಹಾಪುರ ತಹಶೀಲ್ದಾರ ಕಚೇರಿಯ ಗ್ರಾಮ ಲೆಕ್ಕಿಗರಾದ ರೇಷ್ಮಾ ಒಂಟಿ ಅವರನ್ನು ಕೊಪ್ಪಳ ತಹಶೀಲ್ದಾರರ ಕಚೇರಿಗೆ ದಿ.೩೧-೦೭-೨೦೧೪ ರಂದು ಹಾಗೂ ಕಲಬುರಗಿ ತಹಶೀಲ್ದಾರ ಕಚೇರಿಯ ಗ್ರಾಮ ಲೆಕ್ಕಿಗರಾದ ಫಕೀರವ್ವ ಹೆಚ್.ಎನ್. ಅವರನ್ನು ಕೊಪ್ಪಳ ತಹಶೀಲ್ದಾರರ ಕಚೇರಿಗೆ ದಿ.೦೮-೧೧-೨೦೧೪ ರಂದು ನಿಯೋಜಿಸಲಾಗಿತ್ತು.

Contact Your\'s Advertisement; 9902492681

ಮೂರು ವರ್ಷಕ್ಕಿಂತ ಹೆಚ್ಚಿನ ಅವಧಿಯ ಈ ನಿಯೋಜನೆಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ಕಳೆದ ೨೦೧೯ರ ಆಗಸ್ಟ್ ೧೭ ರಂದು ಪ್ರಾದೇಶಿಕ ಆಯುಕ್ತರು ರದ್ದುಗೊಳಿಸಿ, ಮೂಲ ಹುದ್ದೆಯಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರಿಗೆ ಸೂಚನೆ ನೀಡಲಾಗಿತ್ತು. ಆದರೂ ಈ ಸಿಬ್ಬಂದಿಗಳು ಮೂಲ ಹುದ್ದೆಗೆ ಹಾಜರಾಗದೆ ಮೇಲಾಧಿಕಾರಿಗಳ ಆದೇಶ ಪಾಲಿಸಿರುವುದಿಲ್ಲ.

ಮೇಲಾಧಿಕಾರಿಗಳ ಆದೇಶ ಪಾಲಿಸದ ಹಾಗೂ ಕರ್ತವ್ಯ ಲೋಪವೆಸಗಿದ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಹಾಗೂ ಮೇಲ್ಮನವಿ) ನಿಯಮಾವಳಿಗಳು ೧೯೫೭ರ ನಿಯಮ ೧೦(೧) (ಡಿ) ರನ್ವಯ ಮೇಲ್ಕಂಡ ಮೂರು ಸಿಬ್ಬಂದಿಯವರನ್ನು ತಕ್ಷಣ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ.

ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ನೌಕರರು ಕೇಂದ್ರ ಸ್ಥಾನ ಬಿಡುವಂತಿಲ್ಲ. ಈ ಅವಧಿಯಲ್ಲಿ ಸಿಬ್ಬಂದಿಗಳು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ ೯೮ರನ್ವಯ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here