ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿದ ದೇವರಗೋನಾಲ ಖೋ ಖೊ ಆಟಗಾರರು

0
370

ಸುರಪುರ: ನಮ್ಮ ದೇವರಗೋನಾಲ ಗ್ರಾಮವು ಹಿಂದಿನಿಂದಲೂ ಆಟ ಮತ್ತು ಪಾಠದಲ್ಲಿ ಸದಾ ಮುಂದಿದೆ.ಅದರಂತೆ ಈ ವರ್ಷವೂ ನಮ್ಮ ಗ್ರಾಮದ ವಿದ್ಯಾರ್ಥಿಗಳು ಖೋ ಖೊ ಪಂದ್ಯಾವಳಿಯಲ್ಲಿ ರಾಜ್ಯ ಮಟ್ಟದಲ್ಲಿ ಭಾಗವಹಿಸುವ ಮೂಲಕ ಗ್ರಾಮದ ಮತ್ತು ಕಲಿಸಿದ ಶಿಕ್ಷಕರ ಹೆಸರನ್ನು ಮೆರೆಸಿದ್ದಾರೆ ಎಂದು ಮುಖಂಡ ವೆಂಕಟೇಶ ಬೇಟೆಗಾರ ಮಾತನಾಡಿದರು.

ದೇವರಗೋನಾಲ ಗ್ರಾಮದ ಪ್ರೌಢಶಾಲಾ ವಿದ್ಯಾರ್ಥಿಗಳು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟದ ಖೋ ಖೊ ವಿಭಾಗದಲ್ಲಿ ಜಯಗಳಿಸಿ ಈಗ ರಾಜ್ಯ ಮಟ್ಟದಲ್ಲಿ ದ್ವಿತಿಯ ಸ್ಥಾನ ಪಡೆದಿದ್ಧರಿಂದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಗ್ರಾಮಸ್ಥರಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ,ನಮ್ಮ ಗ್ರಾಮದ ವಿದ್ಯಾರ್ಥಿಗಳು ಒಳ್ಳೆಯ ಶ್ರಮವಹಿಸಿ ಇಂದು ರಾಜ್ಯ ಮಟ್ಟದಲ್ಲಿ ತಮ್ಮ ಆಟವನ್ನು ಪ್ರದರ್ಶಿಸಿ ಬಂದಿದ್ದಾರೆ.ಮುಂದೆ ಇನ್ನೂ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸುವಂತೆ ಪ್ರಯತ್ನಿಸಬೇಕೆಂದು ಹಾಗು ಓದಿನಲ್ಲಿಯೂ ಕಷ್ಟಪಟ್ಟು ಓದಿ ಐ.ಎ.ಎಸ್,ಕೆ.ಎ.ಎಸ್ ನಂತಹ ಉನ್ನತ ಹುದ್ದೆಗೇರುವಂತಾಗಿ ಎಂದು ಕಿವಿಮಾತು ಹೇಳಿದರು.

Contact Your\'s Advertisement; 9902492681

ಅಲ್ಲದೆ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಿದರು.ಮತ್ತು ದೇವರಗೋನಾಲ ಗ್ರಾಮದ ಯುವಕ ಮಂಗಳೂರಿನ ಆಳ್ವಾಸ ಕಾಲೇಜಿನಿಂದ ಖೋ ಖೊ ಪಂದ್ಯಾವಳಿಗೆ ರಾಷ್ಟ್ರ ತಂಡದಲ್ಲಿ ಆಯ್ಕೆಯಾಗಿದ್ದಕ್ಕಾಗಿ,ವಿದ್ಯಾರ್ಥಿ ಭೀಮಣ್ಣ ಮರೆಪ್ಪ ಗುರಿಕಾರನಿಗೂ ವಿಶೇಷವಾಗಿ ಸನ್ಮಾನಿಸಲಾಯಿತು.

ಶಾಲಾ ಮುಖ್ಯೋಪಾದ್ಯಾಯರಾದ ನಾಗರತ್ನಾ ನಾಗಾವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಅಂಬ್ಲಯ್ಯ ಬೇಟೆಗಾರ,ದೇವಿಂದ್ರಪ್ಪಗೌಡ,ಮಾರ್ಥಂಡಪ್ಪ ದೊರೆ,ಭೀಮಣ್ಣ ದೀವಳಗುಡ್ಡ,ಶರಣು ಗೋನಾಲ,ಉದಯಕುಮಾರ,ಸತೀಶ,ನಿಂಗಣ್ಣ ಬಾಡದ,ನಬೀಲಾಲ್,ಬಸವರಾಜ ಕೋತಿಗುಡ್ಡ,ಮಾನಪ್ಪ ಪೂಜಾರಿ,ಗುಡದಪ್ಪ ಚಿಕನಳ್ಳಿ ಹಾಗು ಎಲ್ಲಾ ಶಿಕ್ಷಕರು ಮತ್ತು ಸಿಬ್ಬಂದಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here