ಕಲಬುರಗಿ: ಚಿತ್ತಾಪೂರ ತಾಲೂಕಿನ ಮಾಡಬೂಳ ಸರಕಾರಿ ಪದವಿ ಪೂರ್ವ ಕಾಲೇಜನಲ್ಲಿ ಭಾರತೀಯ ದಲಿತ ಪ್ಯಾಂಥರ್ ತಾಲೂಕ ಸಮಿತಿ ಚಿತ್ತಾಪೂರ ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ” ನಮ್ಮ ಸಂವಿಧಾನ ನಮ್ಮ ಹೆಮ್ಮೆ” ಭಾರತ ಸಂವಿಧಾನ ಜಾಗೃತಿ ಅಭಿಯಾನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಭಾ.ದ.ಪ್ಯಾ ರಾಜ್ಯಾಧ್ಯಕ್ಷರಾದ ಮಲ್ಲಪ್ಪ ಹೊಸಮನಿ ಅವರು ಮಾತನಾಡಿ ಭಾರತ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನವಾಗಿದೆ ಮತ್ತು ವಿಶ್ವಕ್ಕೆ ಮಾದರಿಯಾದ ಸಂವಿಧಾನವಾಗಿದೆ ಭಾರತದ ನಾಗರಿಕೆರೆಲ್ಲರಿಗೂ ಸಮಾನ ಅವಕಾಶ ಮತ್ತು ಸಮಾನ ಸ್ಥಾನಮಾನ ನೀಡಿದೆ ಎಂದರು.
ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ ಪ್ರಗತಿಪರ ಯುವ ಚಿಂತಕಿ ಅಶ್ವಿನಿ ಮದನಕರ್ ಮಾತನಾಡಿ ವಿಶ್ವಮಾನ್ಯತೆಯನ್ನು ಪಡೆದ ನಮ್ಮ ಸಂವಿಧಾನವು ಶತ ಶತಮಾನಗಳಿಂದ ತಮ್ಮ ಹಕ್ಕು ಮತ್ತು ಅಧಿಕಾರಗಳಿಂದ ವಂಚಿತರಾದ ಜನರಿಗೆ ಆಶಾಕಿರಣವಾಗಿದೆ. ಇತ್ತಿಚ್ಚಿನ ದಿನಗಳಲ್ಲಿ ಸಂವಿಧಾನ ಆಶಯಗಳ ಮೇಲೆ ದಾಳಿ ಹೆಚ್ಚಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಗಲಿರುಳು ನಿರಂತರ ಅಧ್ಯಯನ ಮಾಡಿ ಪ್ರಶ್ನಾತೀತ ಸಂವಿಧಾನ ನೀಡಿ ದೇಶದ ಜನತೆಗೆ ಕೊಡುಗೆ ನೀಡಿ ಅವರ ಬದುಕಿಗೆ ಬೆಳಕಾಗಿದಾರೆ ಆದಕಾರಣ ಭಾರತೀಯರೆಲ್ಲರೂ ಡಾ.ಅಂಬೇಡ್ಕರ್ ಮತ್ತು ಸಂವಿಧಾನದ ಋಣದಲ್ಲಿದೆವೆ ಎಂದರು.
ವಿದ್ಯಾರ್ಥಿಗಳು ಸಂವಿಧಾನ ಅಧ್ಯಯನ ಮಾಡಿ ಆಧರ ಆಶಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಮತ್ತು ಸಂವಿಧಾನ ಉಳಿಸುವುದು ವಿದ್ಯಾರ್ಥಿಗಳ ಮಹತ್ತರ ಜವಬ್ದಾರಿಯಾಗಿದೆ ಎಂದರು.ಭಾ.ದ.ಪ್ಯಾ. ಚಿತ್ತಾಪೂರ ತಾಲೂಕಾಧ್ಯಕ್ಷ ಗಂಗಾಧರ ಮಾಡಬೂಳ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಕಾಲೇಜಿನ ಪ್ರಾಂಶುಪಾಲರಾದ ದೇವನಗೌಡ ಪಾಟೀಲ್.ರಮೇಶ್ ಶ್ರೀಗನ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಟೈಸನ್, ರಾಹುಲ್ ಅಂಗನಳ್ಳಿಕರ್, ಕಾಶಿ ವಚ್ಚಾ, ಕರಣ್ ಕೋರವಾರ ಉಪಸ್ಥಿತರಿದ್ದರು. ಉಮೇಶ ಸಜ್ಜನ್ ನಿರೂಪಿಸಿದರು.
ಭಾರತ ಸಂವಿಧಾನ ಕುರಿತು ಆಯೋಜನೆ ಮಾಡಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತ್ತು.