ಜಗತ್ತು ಮಾಹಿತಿ ತಂತ್ರಜ್ಞಾನದ ವಶದಲ್ಲಿದೆ: ಮುನ್ನೂರ

0
222

ಕಲಬುರಗಿ: ಜಗತ್ತು ಮಾಹಿತಿ ತಂತ್ರಜ್ಞಾನದ ವಶದಲ್ಲಿದ್ದು, ವಿದ್ಯಾರ್ಥಿಗಳು ವಿಭಾಗದಲ್ಲಿ ದೊರೆತ ಸಂಪನ್ಮೂಲಗಳನ್ನು ಸದ್ಭಳಕೆ ಮಾಡಿಕೊಂಡು ಉತ್ತಮ ಸಾಧಕರಾಗಿ ಹೊರಬರಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಜಿಲ್ಲಾಧ್ಯಕ್ಷ ಹಾಗೂ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಗುರುವಾರ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಇಂದಿನ ಯುವಪೀಳಿಗೆ ಪತ್ರಿಕೆಗಳನ್ನು ಬರೀ ನೋಡುತ್ತಾರೆ. ಪತ್ರಿಕೆ ನೋಡುವದರಿಂದ ಜ್ಞಾನ ಹೆಚ್ಚಿಸಿಕೊಳ್ಳಲು ಸಾಧ್ಯವಿಲ್ಲ. ಸಾಧಕರೆನಿಸಿಕೊಂಡವರು ತಮ್ಮನ್ನು ತಾವು ಓದಿನಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಜಗತ್ತಿಗೆ ಪರಿಚಯವಾಗಿದ್ದಾರೆ ಎಂದರು. ಪತ್ರಿಕೋಧ್ಯಮ ವಿದ್ಯಾರ್ಥಿಗಳಿಗೆ ಬಹಳಷ್ಟು ಅವಕಾಶಗಳಿದ್ದು, ತಮ್ಮ ಬರವಣಿಗೆಯಲ್ಲಿ ಹೊಸದಾದ ಆಲೋಚನೆ ಸೃಷ್ಠಿಸಬೇಕು ಎಂದರು. ಹೈದ್ರಾಬಾದ ಕರ್ನಾಟಕವನ್ನು ಹಿಂದುಳಿದ ಪ್ರದೇಶ ಎನ್ನುವ ಕಾಲದಲ್ಲಿ ಮುಂದಿನ ಪೀಳಿಗೆ ಅದನ್ನು ಅಳಿಸಿ ಹಾಕಬೇಕು. ಜಗತ್ತಿನ ಯಾರಿಗೂ ನಾವು ಕಡಿಮೆಯಿಲ್ಲ ಅನ್ನುವ ಮನೋಭಾವ ಬೆಳೆಸಿಕೊಳ್ಳಬೇಕು. ಈ ಭಾಗದ ಪತ್ರಕರ್ತರನ್ನು ಗುರುತಿಸುವ, ಅವರನ್ನು ಸ್ಮರಿಸುವ ಕೆಲಸವಾಗಬೇಕು. ಪತ್ರಿಕೋದ್ಯಮದ ಪಠ್ಯಕ್ರಮದಲ್ಲಿ ಈ ಭಾಗದ ಪತ್ರಕರ್ತರ ಸಾಧನೆಗಳನ್ನು ಸೇರಿಸಬೇಕೆಂದರು. ಪತ್ರಕರ್ತರಲ್ಲಿರುವ ಪದಗಳು ಬೆಂಡಾಗಿ ನೀರಿನಲ್ಲಿ ತೇಲದೆ, ಗುಂಡಿನಂತೆ ನೀರಿನ ತಳಮಟ್ಟಕ್ಕೆ ಇಳಿಯಬೇಕು ಅಂದಾಗ ಮಾತ್ರ ಸಮಾಜ ಸರಿದಾರಿಗೆ ನಡೆಯಲು ಸಾಧ್ಯವಾಗುತ್ತದೆ ಎಂದರು.

ಸಂಯುಕ್ತ ಕರ್ನಾಟಕದ ಹಿರಿಯ ಉಪ ಸಂಪಾದಕ ಸುಭಾಷ ಬಣಗಾರ ಮಾತನಾಡಿ, ಮಾಧ್ಯಮ ಕ್ಷೇತ್ರದಲ್ಲಿ ಪ್ರತಿಭೆಗೆ ಅವಕಾಶವಿದ್ದು, ವಿದ್ಯಾರ್ಥಿಗಳು ಓದಿನ ಕಡೆಗೆ ಗಮನ ಹರಿಸಬೇಕು ಎಂದರು. ತಾಳ್ಮೆ, ಸಾಧಿಸಬೇಕು ಎನ್ನುವ ಛಲವಿರುವ ವ್ಯಕ್ತಿ ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅತಿಥಿ ಉಪನ್ಯಾಸಕ ಡಾ. ಅಶೋಕ ದೊಡ್ಮನಿ, ವಿಭಾಗದಿಂದ ಹೊರಹೊಮ್ಮಿದ ವಿದ್ಯಾರ್ಥಿಗಳು ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಜ್ಯದ ಪ್ರತಿಷ್ಠಿತ ಪತ್ರಿಕೆ ಮತ್ತು ದೃಶ್ಯ ಮಾಧ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಭಾಗದಲ್ಲಿ ವರ್ಷಪೂರ್ತಿ ಕಾರ್ಯಕ್ರಮಗಳು ನಡೆಯುತ್ತಿದ್ದು, ನಾಡಿನ ಹೆಸರಾಂತ ಪತ್ರಕರ್ತರು, ಸಾಹಿತಿಗಳು, ವಿಷಯ ಪರಿಣಿತರನ್ನು ಆಹ್ವಾನಿಸಿ ಸಂವಾದ, ಚರ್ಚೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗಾಗಿ ಜ್ಞಾನಗಂಗಾ ಪತ್ರಿಕೆಯನ್ನು ಹೊರತರಲಾಗುತ್ತಿದೆ ಎಂದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ಪ್ರೊ.ಡಿ.ಬಿ ಪಾಟೀಲ, ಅತಿಥಿ ಉಪನ್ಯಾಸಕರಾದ ಡಾ.ಕೆ.ಎಂ.ಕುಮಾರಸ್ವಾಮಿ, ರೀತು ತಳವಾರ, ವೆಂಕಟೇಶ ಕಡೂನ, ಡಾ.ಅಶೋಕ ದೊಡ್ಮನಿ, ಡಾ.ರಾಜಕುಮಾರ ದಣ್ಣೂರ ಸೇರಿದಂತೆ ಇತರರು ಇದ್ದರು. ಅನ್ನಪೂರ್ಣ ಪ್ರಾರ್ಥಿಸಿದರು. ಯಲ್ಲಾಲಿಂಗ ಪೂಜಾರಿ ಸ್ವಾಗತಿಸಿದರು. ಚನ್ನಬಸವ ದೊಡ್ಮನಿ, ಚಂದ್ರಕಾಂತ ತಡಪಳ್ಳಿ ವ್ಯಕ್ತಿಪರಿಚಯ ಮಾಡಿದರು. ಸುಧಾರಾಣಿ ನಿರೂಪಿಸಿದರು. ಸೋಮೇಶಗೌಡ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here