ಕಲಬುರಗಿ: ಜಿಲ್ಲೆಯಲ್ಲಿ ರೈಲ್ವೆ ವಿಭಾಗೀಯ ಕಚೇರಿಯ ಸ್ಥಾಪಸಿಲ್ಲು ಜನಪರ ಹಾಗೂ ಪ್ರಸ್ತಾವನೆ ಸಲ್ಲಿಕೆ ಹೈದ್ರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ವತಿಯಿಂದ ಕಲಬುರಗಿ ರೈಲ್ವೆ ವಿಭಾಗಿಯ ಕಚೇರಿಯ ಸ್ಥಾಪನೆಗೆ ಪ್ರಾದೇಶಿಕ ಆಯುಕ್ತ ಸುಭೋದ್ ಯಾದವ್ ಅವರಿಗೆ ಇಂದು ಭೇಟಿ ನೀಡಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷಣ ದಸ್ತಿ ಮಾತನಾಡಿ, 1984 ರ ಸರೀನ್ ಕಮಿಟಿ ವರದಿಯಿಂದ ಇಲ್ಲಿಯವರೆಗೆ ಕೇಂದ್ರ ಸರಕಾರದ ಮಟ್ಟದಲ್ಲಿ ರೈಲ್ವೆ ವಿಭಾಗೀಯ ಕಚೇರಿಯ ಬಗ್ಗೆ ನಡೆದುಬಂದ ದಾರಿ ಮತ್ತು ಕೈಗೊಂಡ ಕ್ರಮಗಳ ವಿಷಯಗಳ ಬಗ್ಗೆ ಸುಮಾರು 10 ಪುಟಗಳ ವಿವರವಾದ ಪ್ರಸ್ತಾವನೆಯನ್ನು ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಿ, ರೈಲ್ವೆ ವಿಭಾಗೀಯ ಕಚೆರಿಯ ಬಗ್ಗೆ ಸರಕಾರಕ್ಕೆ ಅಧಿಕೃತವಾಗಿ ಪ್ರಸ್ತಾವನೆ ಕಳುಹಿಸಲು ಮನವಿ ಮಾಡಲಾಯಿತು.
ಪ್ರಾದೇಶಿಕ ಆಯುಕ್ತರು ರೈಲ್ವೆ ವಿಭಾಗೀಯ ಕಚೇರಿಯ ವಿಷಯವಾಗಿ ಈಗಾಗಲೇ ಸರಕಾರ ತಮಗೆ ಮಾಹಿತಿ ಕೇಳಿದೆ, ಅದಕ್ಕೆ ಪೂರಕವಾಗಿ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿಗೆ ಸಂಬಂಧಿಸಿ ಅರ್ಹತೆ ಹೊಂದಿರುವ ಎಲ್ಲಾ ಅಂಶಗಳನ್ನು ವಿಸ್ತ್ರತವಾಗಿ ದಾಖಲಾತಿಗಳೊಂದಿಗೆ ಸಂಗ್ರಹಿಸಿ ಸರಕಾರಕ್ಕೆ ವಾಸ್ತವಿಕವಾದ ಪ್ರಸ್ತಾವನೆಯನ್ನು ಸಲ್ಲಿಸಲಾಗುವದೆಂದು ಆಯೋಕ್ತರು ತಿಳಿಸಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ, ರೈಲ್ವೆ ವಿಭಾಗೀಯ ಕಚೇರಿಯ ವಿಷಯಕ್ಕೆ ಸಂಬಂಧಿಸಿದ ಪರಿಣಿತರಾದ ಸುನಿಲ್ ಎಚ್, ಆನಂದ ದೇಶಪಾಂಡೆ, ಇಂದುಧರ ಜಾಧವ್, ಬಸವರಾಜ ಯರಗೋಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.