ನ. 30 ರಂದು ಎಸ್.ಡಿ.ಪಿ.ಐ ವತಿಯಿಂದ ಡೆಂಗ್ಯೂ ತಡೆಗೆ ಮ್ಯಾರಥಾನ್ ಜಾಥಾ

0
37

ಕಲಬುರಗಿ: ಮುಸ್ಲಿಂ ಯೂನೈಟೆಡ್ ಫಂಟ್್ ಹಾಗೂ ಎಸ್.ಡಿ.ಪಿ.ಐ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ನ. 30ರಂದು ಡೆಂಗ್ಯೂವು ತಡೆಗೆ ಜನರಲ್ಲಿ ಅರಿವು ಜಾಗೃತಿ ಮ್ಯಾರಥಾನ್ ಹಮ್ಮಿಕೊಳ್ಳಲಾಗುದೆ ಎಂದು ಪಕ್ಷದ ಜಿಲ್ಲಾ ಮುಖಂಡ ಸೈಯದ್ ಮೋಹಸಿನ್ ಅವರು ತಿಳಿಸಿದ್ದಾರೆ.

ಅವರು ಇಂದು ಇ-ಮೀಡಿಯಾ ಲೈನ್ ನೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಮಹಾಮಾರಿ ಡೆಂಗ್ಯೂ ವ್ಯಾಪಕವಾಗಿ ಹರಡುತ್ತಿದ್ದು, ಇದರಿಂದ  ಜಿಲ್ಲೆಯ ಸುಮಾರು 30 ಮಕ್ಕಳು ಬಲಿಯಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

Contact Your\'s Advertisement; 9902492681

ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಡೆಂಗ್ಯೂ ತಡಗೆ ಕ್ರಮಕೈಗೊಂಡಿದ್ದು, ವಿಶೇಷ ಕಾಳಜಿ ಕೂಡವಹಿಸಿದೆ. ಆದರೆ ಜನರಲ್ಲಿ ಡೆಂಗ್ಯೂ ಬಗ್ಗೆ ಅರಿವಿನ ಕೊರತೆ ಎದ್ದು ಕಾಣುತ್ತಿರುವುದರಿಂದ ರೋಗ ವ್ಯಾಪಕ ಹರಡುತ್ತಿದೆ ಎಂದರು.

ಜಿಲ್ಲೆಯಲ್ಲಿ ಡೆಂಗ್ಯೂದಂತಹ ರೋಗ್ಯಗಳನ್ನು ತಡೆಗಟ್ಟಲು ಇಲಾಖೆ ಹಾಗೂ ಶಾಲೆ ಮಕ್ಕಳ ಸಹಯೋಗದೊಂದಿಗೆ ಮ್ಯಾರಥಾನ್ ಜಾಥಾ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಎಸ್.ಡಿ.ಪಿ.ಐ ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದರು.

ನ.30 ಬೆಳಿಗ್ಗೆ 8: 30ಕ್ಕೆ  ನಗರದ ಹಫತ್ ಗುಂಬಜ್ ಹತ್ತಿರದಿಂದ ಆರಂಭವಾಗುವ ಜಾಥ, ಶರಾಫ್ ಬಜಾರ ಮಾರ್ಗವಾಗಿ ಜಗತ್ತ ವೃತದ ವರೆಗೆ ಈ ಮ್ಯಾರಥಾನ್  ನಡೆಯಲಿದೆ ಎಂದು ತಿಳಿಸಿದರು.

ಜಾಥದಲ್ಲಿ ಜಿಲ್ಲಾ ಆರೋಗ್ಯ ಕಲ್ಯಾಣ ಅಧಿಕಾರಿ, ಮಹಾನಗರ ಪಾಲಿಕೆ ಅಧಿಕಾರಿಗಳು ಸೇರಿದಂತೆ ವಿವಿಧ ಶಾಲೆಯ ಮಕ್ಕಳು ಮ್ಯಾರಥಾನ್ ನಲ್ಲಿ ಭಾಗವಹಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಮ್ಯಾರಥಾನ್ ಜಾಥದಲ್ಲಿ ಭಾಗವಹಿಸಿ ಡೆಂಗ್ಯೂ ಮುಕ್ತ ಜಿಲ್ಲೆಗೆ ಸಾಥ್ ನೀಡಬೇಕೆಂದು ಅವರು ಮನವಿ ಮಾಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here