ರೈಲು ಸಂಚಾರ ಸ್ಥಗಿತ-ಬಸ್ ಪ್ರಯಾಣ ದುಸ್ಥರ: ನಿಲ್ಲದೇ ಓಡುತ್ತವೆ ಬಸ್; ಕೂಗಿದರೂ ಕೇಳಲ್ಲ ಡ್ರೈವರ್ರೈ

0
82

ವಾಡಿ: ನಲವತ್ತಕ್ಕೂ ಹೆಚ್ಚು ಬಸ್‌ಗಳು ಸಂಚಾರ ಆರಂಭಿಸಿದ್ದರೂ ಜನರಿಗೆ ಕೂಡಲು ಜಾಗ ಸಿಗುವುದಿಲ್ಲ. ನಿಂತು ಪ್ರಯಾಣಿಸಬೇಕು ಎಂದರೂ ಕಾಲಿಡಲು ಸ್ಥಳವಿಲ್ಲ. ಕಂಡೆಕ್ಟರ್ ಎದ್ದು ಪ್ರಯಾಣಿಕರಿಗೆ ಟಿಕೆಟ್ ವಿತರಿಸಲು ಆಗದಂತಹ ಉಸಿರುಗಟ್ಟುವ ವಾತಾವರಣ. ಈ ಭಾಗದ ಬಸ್ ಪ್ರಯಾಣ ಎಂಬುದು ಅಕ್ಷರಶಃ ನರಕಸದೃಶ್ಯ ಸಂಕಟ!
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಲಬುರಗಿ-ಯಾದಗಿರಿ ಘಟಕಗಳ ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ.

ಕಲಬುರಗಿ-ಸೊಲ್ಲಾಪುರ ಮಧ್ಯೆ ಹಳಿ ಜೋಡಣೆ ಕಾಮಗಾರಿ ನಡೆಯುತ್ತಿರುವ ಕಾರಣ ನ.೨೮ರ ವರೆಗೆ ಈ ಭಾಗದ ಬಹುತೇಕ ರೈಲುಗಳ ಸಂಚಾರ ಸ್ಥಗಿತಗೊಳಿಸಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಪರಿಣಾಮ ಯಾದಗಿರಿ-ವಾಡಿ-ಕಲಬುರಗಿ ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದೆ. ಜನರು ಹತ್ತುವ ಮುಂಚೆಯೇ ಬಸ್‌ಗಳು ಓಡುತ್ತವೆ. ಪ್ರಯಾಣಿಕರು ಕೂಗಿ ಕರೆದರೂ ಬಹುತೇಕ ಬಸ್‌ಗಳು ನಿಲ್ಲಿಸದೆ ಓಡುತ್ತಿವೆ. ಇನ್ನೂ ಕೆಲವು ವಾಡಿ ಹೊರ ವಲಯದ ಮಾರ್ಗದಿಂದ ನಿಯಮಬಾಹೀರವಾಗಿ ಸಂಚರಿಸುತ್ತಿವೆ. ಇದು ಪ್ರಯಾಣಿಕರ ಗೋಳಾಟಕ್ಕೆ ಕಾರಣವಾಗಿದೆ.

Contact Your\'s Advertisement; 9902492681

ಕಲಬುರಗಿ ಹಾಗೂ ಯಾದಗಿರಿ ಸಾರಿಗೆ ಘಟಕದಿಂದ ಬಿಡಲಾಗಿರುವ ೪೦ ಬಸ್‌ಗಳ ಸಂಖ್ಯೆ ಪ್ರಯಾಣಿಕರ ಸಂಖ್ಯೆಗಿಂತ ಕಡಿಮೆಯಾಗಿದೆ. ಈ ಭಾಗದಲ್ಲಿ ಸಂಚರಿಸುತ್ತಿರುವ ಎಲ್ಲಾ ಬಸ್‌ಗಳು ಮಿತಿಮೀರಿ ಪ್ರಯಾಣಿಕರನ್ನು ಸಾಗಿಸುತ್ತಿವೆ. ಆದರೂ ಕೂಡ ಸಾಕಷ್ಟು ಜನ ಪ್ರಯಾಣಿಕರು ಬಸ್ ಪ್ರಯಾಣದಿಂದ ವಂಚಿತರಾಗುತ್ತಿದ್ದಾರೆ.

ಯಾದಗಿರಿಯಿಂದ ಬರುವ ಬಸ್‌ಗಳಲ್ಲಿ ಕಲಬುರಗಿ ಪ್ರಯಾಣಿಕರು ಮತ್ತು ಕಲಬುರಗಿಯಿಂದ ಹೊರಡುವ ಬಸ್‌ಗಳಲ್ಲಿ ಯಾದಗಿರಿ ಪ್ರಯಾಣಿಕರಿಂದ ಭರ್ತಿಯಾದಾಗ ವಾಡಿ, ನಾಲವಾರ, ರಾವೂರ, ಶಹಾಬಾದ, ಭಂಕೂರ, ಮಾಲಗತ್ತಿ, ಯರಗೋಳ ಬಸ್ ನಿಲ್ದಾಣದಲ್ಲಿ ಕಾಯ್ದು ಕುಳಿತವರಿಗೆ ಜಾಗವಿಲ್ಲದಂತಾಗುತ್ತಿದೆ. ತುಂಬಿದ ಬಸ್‌ಗಳಲ್ಲಿ ಹತ್ತಿ ಸಂಚರಿಸುವವರು ೪೪ ಕಿ.ಮೀ ರಸ್ತೆ ಕ್ರಮಿಸುವವ ವರೆಗೂ ನಿಂತು ಹಿಂಸೆ ಅನುಭವಿಸಬೇಕಾದ ಅನಿವಾರ್ಯ ಪರಸ್ಥಿತಿ ಉಂಟಾಗಿದೆ ಎಂದು ಪ್ರಯಾಣಿಕರು ಉದಯವಾಣಿ ಎದುರು ಅಳಲು ಹೇಳಿಕೊಂಡಿದ್ದಾರೆ.

ಕಲಬುರಗಿ-ಯಾದಗಿರಿ ಮಧ್ಯೆ ಸಂಚರಿಸುವ ಬಸ್‌ಗಳು ಕಡ್ಡಾಯವಾಗಿ ವಾಡಿ ಪಟ್ಟಣ ಪ್ರವೇಶ ಪಡೆಯಬೇಕು. ರೈಲು ಸಂಚಾರ ಆರಂಭವಾಗುವ ವರೆಗೂ ಹೆಚ್ಚಿನ ಬಸ್ ವ್ಯವಸ್ಥೆ ಒದಗಿಸಬೇಕು. ವಾಡಿ-ರಾವೂರ ಮಧ್ಯೆ ಕಳೆದ ೧೨ ತಿಂಗಳಿಂದ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಅಲ್ಲಲ್ಲಿ ಸ್ಥಗಿತಗೊಂಡಿದೆ. ಬೇಕಾಬಿಟ್ಟಿ ನಿರ್ಮಿಸಲಾದ ರಾವೂರ ಸಿಸಿ ರಸ್ತೆ ವಾಹನಗಳಿಗೆ ತಾಗಿ ಬಸ್‌ಗಳು ಮಾರ್ಗ ಬದಲಿಸುವಂತಾಗಿದೆ. ಬಸ್ ಪ್ರಯಾಣಕರು ವಿವಿಧ ಸಮಸ್ಯೆಗಳಿಂದ ಗೋಳಾಡುತ್ತಿದ್ದರೂ ಕೂಡ ಸಂಸದ ಡಾ.ಉಮೇಶ ಜಾಧವ ಹಾಗೂ ಜಿಲ್ಲಾ ಉಸ್ತೂವಾರಿ ಸಚಿವ ಗೋವಿಂದ ಕಾರಜೋಳ ಅವರು ಕ್ರಮಕ್ಕೆ ಮುಂದಾಗದಿರುವುದು ಜನರ ಅಸಮಾಧಾನಕ್ಕೆ ಗುರಿಯಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here