ಪಿ.ಡಿ.ಎ. ಇಂಜಿನಿಯರಿಂಗ ಕಾಲೇಜಿನಲ್ಲಿ ಐಐಟಿ ಮದ್ರಾಸವತಿಯಿಂದ ಎನ್.ಪಿ.ಟಿ.ಎಲ್. ಕಾರ್ಯಾಗಾರ

0
188

ಕಲಬುರಗಿ: ಫಲಿತಾಂಶ ಆಧಾರಿತ ಮತ್ತು ಮೌಲ್ಯವರ್ಧಿತ ಶಿಕ್ಷಣದಿಂದ ಮಾತ್ರ ಉದ್ಯೋಗಾವಕಾಶ ಸಾದ್ಯ, ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಮತ್ತು ನೂತನ ವೃತ್ತಿಪರ ಕೋರ್ಸುಗಳ ಸಮಗ್ರ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಐಐಟಿ ಮದ್ರಾಸನ್ ಎನ್.ಪಿ.ಟಿ.ಎಲ್. ಟೀಮ್ ತನ್ನ ಕಾರ್ಯವನ್ನು ರೂಪಿಸಿಕೊಂಡು ರಾಷ್ಟ್ರಾದ್ಯಂತ ಚುರುಕಾಗಿ ಕರ್ಯನಿರ್ವಹಿಸುತ್ತಿದ್ದು ವಿದ್ಯಾರ್ಥಿಗಳಿಗೆ ಹೆಚ್ಚಿನ ತಾಂತ್ರಿಕ ಮಾಹಿತಿಯನ್ನು ದೊರಕಿಸುತ್ತಿದೆ. ವಿದ್ಯಾರ್ಥಿಗಳು ಆನ್ ಲೈನ್ ನೊಂದಣೆ ಮಾಡಿಕೊಂಡು ತಮಗೆ ಬೇಕಾಗಿರುವ ಕೋರ್ಸುಗಳನ್ನು ಕಲಿಯಲು ಅವಕಾಶಮಾಡಿಕೊಟ್ಟಿದೆ. ವಿದ್ಯಾರ್ಥಿಗಳು, ಶಿಕ್ಷಕರು ಹೆಚ್ಚಿನ ಸಂಖೆಯಲ್ಲಿ ನೋಂದಣೆಮಾಡಿಕೊಂಡು ಇದರ ಉಪಲಬ್ದತೆಗಳನ್ನು ಪಡೆಯಬಹುದಾಗಿದೆ ಎಂದು ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಹೆಚ್.ಎಮ್. ಮಹೇಶ್ವರಯ್ಯ ತಿಳಿಸಿದರು.

ಅವರು ಇಂದು ಇಲ್ಲಿನ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯ ಮತ್ತು ಐಐಟಿ ಮದ್ರಾಸ್ ಜಂಟಿಯಾಗಿ ಎರ್ಪಡಿಸಿದ ಒಂದು ದಿನದ ಕಾರ್ಯಾಗಾರಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

Contact Your\'s Advertisement; 9902492681

ನಮ್ಮ ಶಿಕ್ಷಣ ನೀತಿಯನ್ನು ಸುಧಾರಿಸಿಕೊಳ್ಳಬೇಕಾಗಿದೆ. ಉನ್ನತ ಶಿಕ್ಷಣದ ಫಲಿತಾಂಶ ಹೆಚ್ಚಿಸಲು ಹಾಗೂ ಮೌಲ್ಯವರ್ಧಿಸಲು ನಮ್ಮ ಪಠ್ಯ, ಪಾಠಗಳಲ್ಲಿ ಬದಲಾವಣೆಗಳನ್ನು ಮಾಡಲು ಈ ತರಹದ ಆನ್ ಲೈನ್ ಕೋರ್ಸುಗಳ ಅವಶ್ಯಕತೆ ಇದೆ, ಈ ನಿಟ್ಟಿನಲ್ಲಿ ಕಾಲೇಜಿನ ವಿದ್ಯಾರ್ಥಿ ಹಾಗೂ ಶಿಕ್ಷಕರು ಇದರ ಉಪಯೋಗ ಪಡೆದುಕೊಳ್ಳಬೇಕೇಂದು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಭೀಮಾಶಂಕರ ಸಿ. ಬಿಲಗುಂದಿಯವರು ತಮ್ಮ ಪ್ರತಿಕ್ರಿಯೇ ವ್ಯಕ್ತಪಡಿಸಿದರು.

ಐಐಟಿ ಮದ್ರಾಸ್ ನಿಂದ ಆಗಮಿಸಿದ ಡಾ. ಆಂಡ್ರಿ ತಂಗರಾಜನ್ ಮತ್ತು ಭಾರತಿ ಬಾಲಾಜಿ ಎನ್ ಪಿ.ಟಿ.ಎಲ್. ನ ಮಹತ್ವ, ನೋಂದಣೆ ಮಾಡುವ ವಿಧಾನ, ಪಠ್ಯಗಳನ್ನು ಅಭ್ಯಸಿಸುವ ಪದ್ದತಿ ಹಾಗೂ ಪರೀಕ್ಷೆಯನ್ನು ಬರೆಯುವದನ್ನು ಕುರಿತು ಸಮಗ್ರಮಾಹಿತಿಯನ್ನು ವದಗಿಸಿದರು.

ಕಾರ್ಯಕ್ರಮದಲ್ಲಿ ಹೈದ್ರಾಬಾದ ಕಾರ್ನಟಕ ಶಿಕ್ಷಣ ಸಂಸ್ಥೆಯ ಕಾರ್ಯದಶಿಗಳಾದ ಡಾ. ನಾಗೇಂದ್ರ ಮಂಠಾಳೆ, ಆಡಳಿತ ಮಂಡಳಿ ಸದಸ್ಯರುಗಳಾದ ಡಾ. ಸಂಪತಕುಮಾರ ಲೋಯಾ, ನಿತಿನ ಜವಳಿ, ಉದಯ ಚಿಂಚೋಳಿ, ಡಾ. ಎಸ್.ಬಿ.ಕಾಮರೆಡ್ಡಿ, ಸತಿಶ್ಚಂದ್ರ ಹಡಗಲಿಮಠ ಮತ್ತು ಆಡಳಿತಾಧಿಕಾರಿ ಡಾ. ಬಿ.ಎ. ರುದ್ರವಾಡಿ ಉಪಸ್ಥಿತರಿದ್ದರು.

ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ ಮುಖ್ಯಸ್ಥೆಯಾದ ಡಾ. ಭಾರತಿ ಹರಸುವ ಅವರು ಸಂಯೋಜಕರಾಗಿ ಹಾಗೂ ಪ್ರೊ. ಶ್ರೀಧರ ಟಿ., ಪ್ರೊ.ಅಶೋಕ ಪಾಟೀಲ ಮತ್ತು ಡಾ. ನಾಗೇಶ ಸಾಲಿಮಠ ಅವರು ಸಂಚಾಲಕರಾಗಿ ತಮ್ಮ ಕಾರ್ಯವನ್ನು ನಿರ್ವಹಿಸಿದರು. ವಿಭಾದ ಡಾ. ವಿಶ್ವನಾಥ ಬುರಕಪಳ್ಳಿ, ಪ್ರೊ. ಉದಯ ಬಳಗಾರ, ಪ್ರೊ, ಚಂದ್ರಕಾಂತ ಬೀರಾದಾರ, ಪ್ರೊ, ಮುಕುಂದ ಹರವಾಳಕರ, ನಿತಿನ ಕಟ್ಟಿಶೆಟ್ಟರ, ಪ್ರೊ. ಗುರಪ್ಪಾ ಸಾಹು, ಪ್ರೊ. ರಶ್ಮೀ, ಸುಮಾ, ಮಲ್ಲಿಕಾರ್ಜುನ ರೆಡ್ಡಿ, ಅಂಬಾರಾಯ ಸಿ, ಗಂಗಾ ಧರಕ ಮತ್ತು ಕವಿತಾ ಅವರು ಕಾರ್ಯಾಗಾರದ ಸಂಘಟಕರಾಗಿ ಕಾರ್ಯನಿರ್ವಹಿಸಿದರು. ಕಾರ್ಯಕ್ರಮವನ್ನು ಪ್ರೋ. ಗೌರಿ ಪಾಟೀಲ ಅವರು ನಿರೂಪಿಸಿದರು. ವಿಭಾಗದ ಮುಖ್ಯಸ್ಥರಾದ ಡಾ. ಭಾರತಿ ಹರಸೂರ ಅವರು ವಂದನಾರ್ಪಣೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here