ಕಾರು ಕದ್ದ ಆರೋಪಿಗೆ ಕಾರಾಗೃಹ ಶಿಕ್ಷೆ

0
51

ಕಲಬುರಗಿ: ಕಲಬುರಗಿ ನಗರದ ಸಿ.ಬಿ.ಐ ಕಾಲೋನಿ ಪ್ರದೇಶದಲ್ಲಿ ಮನೆ ಎದುರಿಗೆ ನಿಲ್ಲಿಸಿದ ಸ್ವಿಫ್ಟ್ ಡಿಸೈರ್ ಕಾರ್ ಕಳವು ಮಾಡಿದ ಉಮೇಶ @ ಉಮ್ಯಾ ತಂದೆ ಮಹಾದೇವ ಮಾಲ್ದೆ ಎಂಬ ಅಪರಾಧಿಗೆ ಒಂದು ವರ್ಷ ಸಾಧಾ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ 5ನೇ ಹೆಚ್ಚುವರಿ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾದೀಶೆ ಪಂಕಜಾ ಕೊಣ್ಣೂರು ಅವರು ನವೆಂಬರ್ 26 ರಂದು ಆದೇಶಿಸಿದ್ದಾರೆ.

ಕಳೆದ 2019ರ ಜನವರಿ 23ರ ತಡ ರಾತ್ರಿ ಸಿ.ಬಿ.ಐ. ಕಾಲೀನಿಯ ಡಾ.ಗೋಪಿನಾಥ್ ದಾಸ್ ಅವರ ಮನೆ ಮುಂದೆ ನಿಲ್ಲಿಸಿದ ಸ್ವಿಫ್ಟ ಡಿಸೈರ್ ಕಾರ್ ಸಂಖ್ಯೆ. ಕೆಎ.32 ಎನ್-6186ನ್ನು ಆರೋಪಿ ಕಳುಮಾಡಿಕೊಂಡು ಹೋಗಿದ್ದನ್ನು. ಈ ಕುರಿತು ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪಿ.ಐ. ರಮೇಶ ಕಾಂಬಳೆ ಅವರು ತನಿಖೆ ಮಾಡಿ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

Contact Your\'s Advertisement; 9902492681

ಪ್ರಕರಣದ ವಾದ-ವಿವಾದ ಆಲಿಸಿದ 5ನೇ ಹೆಚ್ಚುವರಿ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ಪಂಕಜಾ ಕೊಣ್ಣೂರು ಅವರು ಆರೋಪಿತನು ಐ.ಪಿ.ಸಿ. ಕಲಂ 379ರ ಅಡಿಯಲ್ಲಿನ ಅಪರಾಧವು ಸಾಕ್ಷ್ಯಾಧಾರಗಳಿಂದ ರುಜುವಾತಾಗಿದ್ದರಿಂದ ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 5000 ರೂ. ದಂಡ ವಿಧಿಸಿದ್ದಾರೆ. ದಂಡ ನೀಡಲು ತಪ್ಪಿದಲ್ಲಿ ಮತ್ತೆ ಒಂದು ತಿಂಗಳ ಸಾದಾ ಶಿಕ್ಷೆ ವಿಧಿಸಲಾಗಿರುತ್ತದೆ.

ಸರ್ಕಾರದ ಪರವಾಗಿ 5ನೇ ಸಹಾಯಕ ಸರ್ಕಾರಿ ಅಭಿಯೋಜಕಿ ಛಾಯಾದೇವಿ ಪಾಟೀಲ ಅವರು ವಾದ ಮಂಡಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here