ಕಲಬುರಗಿ: ಸಮೀಪದ ಶ್ರೀನಿವಾಸ ಸರಡಗಿಯ ವಿಮಾನ ನಿಲ್ದಾಣದ ಆವರಣದಲ್ಲಿದ್ದ ಬಂಜಾರಾ ಸಮುದಾಯದ ಕುಲದೈವ ಆರಾಧ್ಯ ಗುರು ಪೂಜ್ಯ ಸಂತ ಸೇವಾಲಾಲ ಮಹಾರಾಜರ ಮತ್ತು ಮರಿಯಮ್ಮ ದೇವಿ ದೇವಾಲಯ ಕಟ್ಟಡ ನೆಲಸಮಗೊಳಿಸಿರುವುದು. ಮತ್ತು ದೇವರ ಮೂರ್ತಿಗಳನ್ನು ಧ್ವಂಸಗೊಳಿಸಿರುವವರ ಮೇಲೆ ಉಗ್ರ ಕ್ರಮ ಕೈಗೊಳ್ಳುವಂತೆ ಜೈ ಸೇವಾಲಾಲ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷರಾದ ವಿಜಯ ಜಾಧವ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಕಾ ಹೇಳಿಕೆ ನೀಡಿರುವ ಅವರು ಅಷ್ಟೊಂದು ತರಾತುರಿಯಲ್ಲಿ ದೇವಸ್ಥಾನ ನೆಲಸಮಗೊಳಿಸಲು ಕಾರಣವೇನು ? ಧಾರ್ಮಿಕ ನಂಬಿಕೆ ಮತ್ತು ಶೃದ್ಧೆಯ ವಿಷಯದಲ್ಲಿ ಜಿಲ್ಲಾಡಳಿತ ಬಂಜಾರಾ ಸಮುದಾಯದ ಜನತೆಯ ಜೊತೆ ಭಾವನೆಗಳ ಜೊತೆ ಚಲ್ಲಾಟ ಆಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಖಾರವಾಗಿ ಪ್ರೇಶ್ನೆಸಿರುವ ಜಾಧವ ಅವರು ಬಂಜಾರಾ ಸಮುದಾಯದ ಧರ್ಮ ಗುರುಗಳ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಬಹುದಿತ್ತು.
ದೇವರ ಮೂರ್ತಿಗಳ ವಿಷಯದಲ್ಲಿ ಜಿಲ್ಲಾಡಳಿತ ನಡೆದುಕೊಂಡ ರೀತಿ ಸರಿಯಲ್ಲವೆಂದು ಅಸಮಧಾನ ವ್ಯಕ್ತಪಡಿಸಿರುವ ಅವರು ಪ್ರಕರಣ ದಾಖಾಲಾಗಿ ಒಂದು ವಾರ ಕಳೆದರು ಸಹ ತಪ್ಪಿಸ್ಥತರನ್ನು ಇಲ್ಲಿಯವರೆಗೂ ಬಂಧಿಸದೆ ಇರುವ ಕಾರಣವೇನು ಮುಗ್ದ ಮತ್ತು ಶ್ರಮಿಕ ವರ್ಗದ ಜನತೆಯ ನಂಬಿಕೆಗೆ ದಕ್ಕೆಯಾದರು ಸಹ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಣ್ಣು ಮುಚ್ಚಿ ಕುಳಿತಿರುವದು ನೋಡಿದರೆ ಯಾರನ್ನೊ ಬಚಾವ ಮಾಡಲು ಜಿಲ್ಲಾಡಳಿತ ಹೆಣಗಾಡುತ್ತಿದ್ದಾರೆ. ಎನ್ನುವ ಅನುಮಾನ ಸಮುದಾಯದ ಜನರಲ್ಲಿ ಕಾಡುತ್ತಿದೆ ? ಇದರ ಕುರಿತು ಬಂಜಾರಾ ಸಮುದಾಯದ ನಾಯಕರು ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ನಾಳೆ ನಡೆಯುವ ಸಭೆಗೆ ತಮ್ಮ ಸಂಪೂರ್ಣ ಬೆಂಬಲ ಇದೆ ಎಂದು ತಿಳಿಸಿದ್ದಾರೆ.